ದುಬೈ(ಅ.20):  ಐಪಿಎಲ್ 2020 ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್  ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದಾರೆ. ಕಳೆದ ಪಂದ್ಯದಲ್ಲಿ ಚೊಚ್ಚಲ ಐಪಿಎಲ್ ಸೆಂಚುರಿ ಸಿಡಿಸಿದ ಧವನ್ ಇದೀಗ ಐಪಿಎಲ್ ಟೂರ್ನಿಯಲ್ಲಿ 5,000 ರನ್ ಪೂರೈಸಿದ ದಾಖಲೆ ನಿರ್ಮಿಸಿದ್ದಾರೆ.

IPL 2020: ಸೆಂಚುರಿ ಸಿಡಿಸಿ ದಾಖಲೆ ಬರೆದ ಶಿಖರ್ ಧವನ್!

ಐಪಿಎಲ್ ಟೂರ್ನಿಯಲ್ಲಿ 5,000 ರನ್ ಪೂರೈಸಿದ 5ನೇ ಬ್ಯಾಟ್ಸ್‌ಮನ್ ಅನ್ನೋ ಹೆಗ್ಗಳಿಕೆಗೆ ಧವನ್ ಪಾತ್ರರಾಗಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ಗರಿಷ್ಠ ರನ್ ಸಿಡಿಸಿದ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ವಿರಾಜಮಾನರಾಗಿದ್ದಾರೆ.

ಐಪಿಎಲ್ ಟೂರ್ನಿಯಲ್ಲಿ 5000+ ರನ್ ಸಿಡಿಸಿದ ಸಾಧಕರು:
5759 ವಿರಾಟ್ ಕೊಹ್ಲಿ
5368 ಸುರೇಶ್ ರೈನಾ
5158 ರೋಹಿತ್ ಶರ್ಮಾ
5037 ಡೇವಿಡ್ ವಾರ್ನರ್
5003* ಶಿಖರ್ ಧವನ್

5 ಸಾವಿರ ರನ್ ಜೊತೆಗೆ ಮತ್ತೊಂದು ದಾಖಲೆ ಬರೆದಿದ್ದಾರೆ. ಐಪಿಎಲ್ ಆವೃತ್ತಿಯಲ್ಲಿ ಸತತ 50 + ಸ್ಕೋರ್ ಸಿಡಿಸಿದ ಬ್ಯಾಟ್ಸ್‌ಮನ್ ಪಟ್ಟಿಯಲ್ಲಿ ಧವನ್, 6ನೇ ಸ್ಥಾನ ಅಲಂಕರಿಸಿದ್ದಾರೆ.

ಐಪಿಎಲ್ ಟೂರ್ನಿಯಲ್ಲಿ ಸತತ 50+ ಸಿಡಿಸಿದ ಸಾಧಕರು
5 (ಬಾರಿ) ವೀರೇಂದ್ರ ಸೆಹ್ವಾಗ್, 2012 (DC)
5(ಬಾರಿ) ಜೋಸ್ ಬಟ್ಲರ್, 2018 (RR)
5(ಬಾರಿ) ಡೇವಿಡ್ ವಾರ್ನರ್, 2019 (SRH)
4(ಬಾರಿ) ವಿರಾಟ್ ಕೊಹ್ಲಿ, 2016 (RCB)
4(ಬಾರಿ) ಕೇನ್ ವಿಲಿಯಮ್ಸನ್, 2018 (SRH)
4(ಬಾರಿ) ಶಿಖರ್ ಧವನ್, 2020 (DC)