ದುಬೈ(ಅ.20): ಐಪಿಎಲ್ ಟೂರ್ನಿಯಲ್ಲಿ ಶಿಖರ್ ಧವನ್ ಅಪರೂಪದ ದಾಖಲೆ ಬರೆದಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ಸತತ 2 ಸೆಂಚುರಿ ಸಿಡಿಸಿದ ಏಕೈಕ ಹಾಗೂ ಮೊದಲ ಬ್ಯಾಟ್ಸ್‌ಮನ್  ನ್ನೋ ದಾಖಲೆ ಬರೆದಿದಿದ್ದಾರೆ. 

IPL 2020: ಮತ್ತೊಂದು ದಾಖಲೆ ಬರೆದ ಶಿಖರ್ ಧವನ್!.

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೆಂಚುರಿ ಸಿಡಿಸಿದ್ದ ಧವನ್, ಇದೀಗ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಧವನ್ ಶತಕ ದಾಖಲಿಸಿದ್ದಾರೆ. ಧವನ್ 61 ಎಸೆತದಲ್ಲಿ ಅಜೇಯ 106 ರನ್ ಸಿಡಿಸಿದ್ದಾರೆ. ಒಂದು ಆವೃತ್ತಿಯಲ್ಲಿ ಗರಿಷ್ಠ ಶತಕ ಬಾರಿಸಿದ ದಾಖಲೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. ವಿರಾಟ್ ಕೊಹ್ಲಿ 2016ರ ಐಪಿಎಲ್ ಟೂರ್ನಿಯ ಒಂದೇ ಆವೃತ್ತಿಯಲ್ಲಿ 4 ಸೆಂಚುರಿ ಬಾರಿಸಿದ್ದರು.

ಐಪಿಎಲ್  ಒಂದು ಆವೃತ್ತಿಯಲ್ಲಿ ಒಂದಕ್ಕಿಂತ ಹೆಚ್ಚು 100+ ಸ್ಕೋರ್ ಸಿಡಿಸಿದ ಸಾಧಕರು

4 ವಿರಾಟ್ ಕೊಹ್ಲಿ, 2016 (RCB)
2 ಕ್ರಿಸ್ ಗೇಲ್, 2011 (RCB)
2 ಹಾಶೀಂ ಆಮ್ಲಾ, 2017 (KXIP)
2 ಶೇನ್ ವ್ಯಾಟ್ಸನ್, 2018 (CSK)
2 ಶಿಖರ್ ಧವನ್, 2020 (DC)