Asianet Suvarna News Asianet Suvarna News

IPL 2020: ಬಲಿಷ್ಠ ಆರ್‌ಸಿಬಿಗಿಂದು ರಾಯಲ್ ಚಾಲೆಂಜ್..!

13ನೇ ಆವೃತ್ತಿಯ ಐಪಿಎಲ್ ಟೂರ್ನಿಯ 15ನೇ ಪಂದ್ಯದಲ್ಲಿಂದು ಬಲಿಷ್ಠ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ಅಬುಧಾಬಿಯಲ್ಲಿ ಮುಖಾಮುಖಿಯಾಗುತ್ತಿವೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

IPL 2020 royal challengers bangalore vs Rajasthan Royals in Abu Dhabi match Preview kvn
Author
Abu Dhabi - United Arab Emirates, First Published Oct 3, 2020, 11:21 AM IST
  • Facebook
  • Twitter
  • Whatsapp

ಅಬುಧಾಬಿ(ಅ.03): 3 ಪಂದ್ಯಗಳಲ್ಲಿ ತಲಾ 2 ಗೆಲುವು ಕಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ಶನಿವಾರ ಇಲ್ಲಿ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ಎದುರಾಗಲಿವೆ. 

ಈ ಆವೃತ್ತಿಯ ಮೊದಲ ಮಧ್ಯಾಹ್ನ ಪಂದ್ಯ ಇದಾಗಿದ್ದು, ಇಬ್ಬನಿಯ ಸಮಸ್ಯೆ ಇರುವುದಿಲ್ಲ. ಆದರೆ ಸುಡು ಬಿಸಿಲಿನಲ್ಲಿ ಆಟಗಾರರು ದಣಿಯಲಿದ್ದಾರೆ. ಈ ಆವೃತ್ತಿಯ ಮೊದಲೆರಡು ಪಂದ್ಯವನ್ನು ಶಾರ್ಜಾದ ಸಣ್ಣ ಮೈದಾನದಲ್ಲಿ ಆಡಿದ್ದ ರಾಜಸ್ಥಾನ, ಕಳೆದ ಪಂದ್ಯವನ್ನು ಕೆಕೆಆರ್ ವಿರುದ್ಧ ದುಬೈನಲ್ಲಿ ಆಡಿತ್ತು. ಈ ಪಂದ್ಯದಲ್ಲಿ ತಂಡದ ಲೆಕ್ಕಾಚಾರ ತಲೆಕೆಳಗಾಗಿತ್ತು. ಈ ಕ್ರೀಡಾಂಗಣವೂ ದೊಡ್ಡದಾಗಿದ್ದು, ದೊಡ್ಡ ಹೊಡೆತಗಳನ್ನು ಬಾರಿಸುವುದು ಸವಾಲಾಗಿ ಪರಿಣಮಿಸಲಿದೆ. 

"

ಆರ್‌ಸಿಬಿ ತಂಡ ಬ್ಯಾಟಿಂಗ್‌ನಲ್ಲಿ ಬಲಿಷ್ಠವಾಗಿದ್ದರೂ ಡೆತ್ ಬೌಲಿಂಗ್ ಸಮಸ್ಯೆ ಇದ್ದೇ ಇದೆ. ಮುಂಬೈ ವಿರುದ್ಧ ಟೈ ಆದ ಪಂದ್ಯ ದಲ್ಲಿ ಆರ್‌ಸಿಬಿ ಕೊನೆ 4 ಓವರಲ್ಲಿ 79 ರನ್ ಚಚ್ಚಿಸಿಕೊಂಡಿತ್ತು. ಡೆತ್ ಓವರ್ ಬೌಲಿಂಗ್ ಸಮಸ್ಯೆ ಜೊತೆಗೆ ಕ್ಷೇತ್ರರಕ್ಷಣೆಯಲ್ಲೂ ಆರ್‌ಸಿಬಿ ಸುಧಾರಣೆ ಕಾಣಬೇಕಿದೆ. ದೇವದತ್ ಪಡಿಕ್ಕಲ್, ಎಬಿ ಡಿ ವಿಲಿಯರ್ಸ್, ಆ್ಯರೋನ್ ಫಿಂಚ್ ಲಯದಲ್ಲಿದ್ದಾರೆ. ಆದರೆ ನಾಯಕ ವಿರಾಟ್ ಕೊಹ್ಲಿ ಮೂರೂ ಪಂದ್ಯಗಳಲ್ಲಿ ವೈಫಲ್ಯ ಕಂಡಿದ್ದು, ಈ ಪಂದ್ಯದಲ್ಲಿ ಅಬ್ಬರಿಸುವ ವಿಶ್ವಾಸದಲ್ಲಿದ್ದಾರೆ. 

IPL 2020: ಸೋಲಿನಿಂದ ಹೊರಬಂದ ಹೈದರಾಬಾದ್, CSK ವಿರುದ್ಧ 7 ರನ್ ಗೆಲುವು!

ರಾಯಲ್ಸ್ ಸಹ ತನ್ನ ಬೌಲಿಂಗ್ ವಿಭಾಗವನ್ನು ಬಲಿಷ್ಠಗೊಳಿಸಿಕೊಳ್ಳಲು ಎದುರು ನೋಡುತ್ತಿದೆ. ತಂಡದ ಮಧ್ಯಮ ಕ್ರಮಾಂಕ ನಿರೀಕ್ಷಿತ ಪ್ರದರ್ಶನ ತೋರದಿರುವುದು ಸಹ ತಲೆನೋವು ತಂದಿದೆ. ಈ ಪಂದ್ಯ ದಲ್ಲಿ ಕೆಲ ಬದಲಾವಣೆಗಳನ್ನು ಕಾಣಬಹುದು.

ಪಿಚ್ ರಿಪೋರ್ಟ್: ಅಬುಧಾಬಿಯಲ್ಲಿ ಮೊದಲ ಇನ್ನಿಂಗ್‌ಸ್ನ ಸರಾಸರಿ ಮೊತ್ತ 160-170. ಟಾಸ್ ಗೆಲ್ಲುವ ತಂಡ ಮೊದಲು ಬ್ಯಾಟ್ ಮಾಡುವುದೇ ಉತ್ತಮ ಎಂದು ವಿಶ್ಲೇಷಿಸಲಾಗಿದೆ. ವೇಗದ ಬೌಲರ್‌ಗಳಿಗೆ ಹೆಚ್ಚಿನ ನೆರವು ಸಿಗುವ ನಿರೀಕ್ಷೆ ಇದೆ.

ಪಂದ್ಯ ಆರಂಭ: ಮಧ್ಯಾಹ್ನ 3.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ 
 

Follow Us:
Download App:
  • android
  • ios