ದುಬೈ(ಅ.2): ಕಳೆದ ಆವೃತ್ತಿಯಲ್ಲಿ ರನ್ನರ್ ಆಪ್ ಆಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಈ ಆವೃತ್ತಿಯಲ್ಲಿ ಪಂದ್ಯ ಗೆಲ್ಲೋದೇ ಕಷ್ಟವಾಗುತ್ತಿದೆ.  ಸನ್ ರೈಸರ್ಸ್ ಹೈದರಾಬಾದ್ ವಿರುದ್ದ ಮುಗ್ಗಿರಿಸೋ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಹ್ಯಾಟ್ರಿಕ್ ಸೋಲು ಕಂಡಿದೆ.  ಗೆಲುವಿಗಾಗಿ ರವೀಂದ್ರ ಜಡೇಜಾ ಹಾಗೂ ನಾಯಕ ಧೋನಿ ಪ್ರಯತ್ನಿಸಿದರೂ ಪ್ರಯೋಜನವಾಗಿಲಿಲ್ಲ. ಈ ಮೂಲಕ ಹೈದರಾಬಾದ್ ಹೈದರಾಬಾದ್ 7 ರನ್ ಗೆಲುವು ಸಾಧಿಸಿತು.

"

165 ರನ್ ಟಾರ್ಗೆಟ್ ಚೇಸ್ ಮಾಡಲು ಕಣಕ್ಕಿಳಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಲೆಕ್ಕಾಚಾರ ಆರಂಭದಲ್ಲೇ ಉಲ್ಟಾ ಹೊಡೆಯಿತು. ಶೇನ್ ವ್ಯಾಟ್ಸನ್ ಕೇವಲ 1 ರನ್ ಸಿಡಿಸಿ ಔಟಾದರು. ತಂಡ ಸೇರಿಕೊಂಡ ಅಂಬಾಟಿ ರಾಯುಡು ಆಸರೆಯಾಗಲಿಲ್ಲ. ಕೇವಲ 8 ರನ್ ಸಿಡಿಸಿ ನಿರ್ಗಮಿಸಿದರು. 26 ರನ‌್‌ಗೆ 2 ವಿಕೆಟ್ ಕಳೆದುಕೊಂಡ ಸಿಎಸ್‌ಕೆ ಸಂಕಷ್ಟಕ್ಕೆ ಸಿಲುಕಿತು.

ಫಾಫ್ ಡುಪ್ಲೆಸಿಸ್ ಹೋರಾಟ ನೀಡೋ ಸೂಚನೆ ನೀಡಿದರು. ಆದರೆ 22 ರನ್ ಸಿಡಿಸಿದ ಡುಪ್ಲೆಸಿಸ್ ರನೌಟ್‌ಗೆ ಬಲಿಯಾದರು.  ಕೇದಾರ್ ಯಾದವ್ 3 ರನ್ ಸಿಡಿಸಿ ನಿರ್ಗಮಿಸಿದರು. 42 ರನ್ ಗಳಿಸುವಷ್ಟರಲ್ಲೇ ಚೆನ್ನೈ ತಂಡದ ಟಾಪ್ ಆರ್ಡರ್ ಬ್ಯಾಟ್ಸ್‌ಮನ್‌ಗಳೆಲ್ಲಾ ಪೆವಿಲಿಯನ್ ಸೇರಿದ್ದದರು.

ನಾಯಕ ಎಂ.ಎಸ್.ಧೋನಿ ಹಾಗೂ ರವೀಂದ್ರ ಜಡೇತಾ ತಂಡಕ್ಕೆ ಚೇತರಿಕೆ ನೀಡೋ ಪ್ರಯತ್ನ ಮಾಡಿದರು. ಆದರೆ ಸ್ಟ್ರೈಕ್ ರೇಟ್ ಟಿ20 ಮಾದರಿಗೆ ತಕ್ಕಂತೆ ಇರಲಿಲ್ಲ. ಹೀಗಾಗಿ ಚೆನ್ನೈ ತಂಡದ ಮೇಲೆ ಒತ್ತಡ ಹೆಚ್ಚಾಯಿತು. ಚೆನ್ನೈ ಸೂಪರ್ ಕಿಂಗ್ಸ್ ಗೆಲುವಿಗೆ ಅಂತಿಮ 18 ಎಸೆತದಲ್ಲಿ 63 ರನ್ ಅವಶ್ಯಕತೆ ಇತ್ತು. 

ರವೀಂದ್ರ ಜಡೇಜಾ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನದ ಮೂಲಕ ಹಾಫ್ ಸೆಂಚುರಿ ಸಿಡಿಸಿದರು. 35 ಎಸೆತದಲ್ಲಿ 50 ರನ್ ಸಿಡಿಸಿದ ಜಡೇಜಾ ವಿಕೆಟ್ ಪತನಗೊಂಡ ಬೆನ್ನಲ್ಲೇ ಧೋನಿ ಮೇಲೆ ಒತ್ತಡ ಹೆಚ್ಚಾಯಿತು. ಸಿಎಸ್‌ಕೆ ಗೆಲುವಿಗೆ ಅಂತಿಮ 6 ಎಸೆತದಲ್ಲಿ 23 ರನ್ ಬೇಕಿತ್ತು. ಎಲ್ಲರ ಚಿತ್ತ ಧೋನಿಯತ್ತ ನೆಟ್ಟಿತ್ತು. ಧೋನಿ ಬೌಂಡರಿ ಸಿಡಿಸುತ್ತಿದ್ದಂತೆ ಪಂದ್ಯ ರೋಚಕತೆ ಹೆಚ್ಚಾಯಿತು.

ಅಂತಿಮ ಎಸೆತದಲ್ಲಿ ಸ್ಯಾಮ್ ಕುರನ್ ಸಿಕ್ಸರ್ ಸಿಡಿಸಿದರು. ಆದರೆ ಚೆನ್ನೈ 5 ವಿಕೆಟ್ ಕಳೆದುಕೊಂಡುು 157 ರನ್ ಸಿಡಿಸಿತು. ಧೋನಿ ಅಜೇಯ 47 ಹಾಗೂ ಸ್ಯಾಮ್ ಕುರನ್ ಅಜೇಯ 15 ರನ್ ಸಿಡಿಸಿದರು.  ಅದ್ಬುತ ಡೆತ್ ಓವರ್ ಬೌಲಿಂಗ್ ಮಾಡಿದ ಅಬ್ದುಲ್ ಸಮಾದ್ ಚೆನ್ನೈ ತಂಡವನ್ನು ಕಟ್ಟಿಹಾಕಿದರು. ಈ ಮೂಲಕ ಹೈದರಾಬಾದ್ 7 ರನ್ ಗೆಲುವು ಸಾಧಿಸಿತು.