Asianet Suvarna News Asianet Suvarna News

ಪ್ಲೇ ಆಫ್‌ಗಾಗಿ RCB-ಮುಂಬೈ ಇಂಡಿಯನ್ಸ್ ಫೈಟ್‌

ಪ್ಲೇ ಆಫ್‌ ಹೊಸ್ತಿಲಲ್ಲಿರುವ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು 13ನೇ ಆವೃತ್ತಿಯ ಐಪಿಎಲ್ ಟೂರ್ನಿಯ 48ನೇ ಪಂದ್ಯದಲ್ಲಿಂದು ಮುಖಾಮುಖಿಯಾಗಲಿವೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

IPL 2020 RCB Takes on Mumbai Indians in Abu Dhabi match Preview kvn
Author
Abu Dhabi - United Arab Emirates, First Published Oct 28, 2020, 9:05 AM IST

ಅಬುಧಾಬಿ(ಅ.28): ಅಂಕಪಟ್ಟಿಯ ಅಗ್ರಸ್ಥಾನಿ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌, 2ನೇ ಸ್ಥಾನದಲ್ಲಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧ ಇಲ್ಲಿ ಬುಧವಾರ ನಡೆಯಲಿರುವ ಐಪಿಎಲ್‌ ಪಂದ್ಯದಲ್ಲಿ ಎದುರಾಗಲಿದೆ. 

11ರಲ್ಲಿ ತಲಾ 7 ಗೆಲುವು ಸಾಧಿಸಿರುವ ಎರಡೂ ತಂಡಗಳು 14 ಅಂಕಗಳಿಸಿದ್ದು, ಪ್ಲೇ ಆಫ್‌ ಹಂತವನ್ನು ಖಚಿತಪಡಿಸಿಕೊಳ್ಳಲು ಈ ಪಂದ್ಯದಲ್ಲಿ ಗೆಲುವಿನ ವಿಶ್ವಾಸದಲ್ಲಿ ಕಣಕ್ಕಿಳಿಯುತ್ತಿವೆ. ರೋಹಿತ್‌ ಗೈರು ಹಾಜರಿಯಲ್ಲಿ ಮುಂಬೈ ತಂಡ ಆಡಿರುವ 2 ಪಂದ್ಯಗಳಲ್ಲಿ 1 ಗೆಲುವು, 1 ಸೋಲನ್ನು ಕಂಡಿದೆ. ಫಿಟ್ನೆಸ್‌ ಸಮಸ್ಯೆ ಎದುರಿಸುತ್ತಿರುವ ರೋಹಿತ್‌, ಆರ್‌ಸಿಬಿ ವಿರುದ್ಧದ ಪಂದ್ಯಕ್ಕೂ ಅಲಭ್ಯರಾಗಿದ್ದಾರೆ. ಪೊಲ್ಲಾರ್ಡ್‌ ತಂಡ ಮುನ್ನಡೆಸಲಿದ್ದಾರೆ. 

IPL 2020: ಡೆಲ್ಲಿ ಮಣಿಸಿ ಪ್ಲೇ ಆಫ್ ರೇಸ್ ರೋಚಕವಾಗಿಸಿದ ಸನ್‌ರೈಸರ್ಸ್!

ಇನ್ನು ಆರ್‌ಸಿಬಿ ಕಳೆದ ಪಂದ್ಯದಲ್ಲಿ ಚೆನ್ನೈ ವಿರುದ್ಧ 8 ವಿಕೆಟ್‌ಗಳ ಸೋಲು ಅನುಭವಿಸಿತ್ತು. ಇದೀಗ ಮುಂಬೈ ವಿರುದ್ಧ ಗೆದ್ದು ಪ್ಲೇ ಆಫ್‌ಗೇರುವ ಉತ್ಸಾಹದಲ್ಲಿ ಕಣಕ್ಕಿಳಿಯುತ್ತಿದೆ.

ಪಿಚ್‌ ರಿಪೋರ್ಟ್‌: ಪಿಚ್‌ ಸ್ಪರ್ಧಾತ್ಮಕವಾಗಿದ್ದು, ಆರಂಭದಲ್ಲಿ ವೇಗಿಗಳಿಗೆ ಹೆಚ್ಚಿನ ನೆರವು ದೊರೆಯಲಿದೆ. ಸಮಯ ಕಳೆದಂತೆ ಸ್ಪಿನ್ನರ್‌ಗಳು ಮಿಂಚಲಿದ್ದಾರೆ. ಟಾಸ್‌ ಪ್ರಮುಖವಾಗಿದೆ.

ಸಂಭವನೀಯ ಆಟಗಾರರ ಪಟ್ಟಿ

ಆರ್‌ಸಿಬಿ: ದೇವದತ್ ಪಡಿಕ್ಕಲ್‌, ಆರೋನ್ ಫಿಂಚ್‌, ವಿರಾಟ್ ಕೊಹ್ಲಿ (ನಾಯಕ), ಎಬಿ ಡಿವಿಲಿಯರ್ಸ್, ಮೋಯಿನ್ ಅಲಿ‌, ಕ್ರಿಸ್ ಮೋರಿಸ್‌, ಗುರುಕೀರತ್ ಮನ್‌, ವಾಷಿಂಗ್ಟನ್ ಸುಂದರ್‌, ನವದೀಪ್ ಸೈನಿ, ಮೊಹಮ್ಮದ್ ಸಿರಾಜ್‌, ಯುಜುವೇಂದ್ರ ಚಹಲ್‌

ಮುಂಬೈ: ಕ್ವಿಂಟನ್ ಡಿಕಾಕ್, ಇಶನ್ ಕಿಶನ್‌, ಸೂರ್ಯಕುಮಾರ್ ಯಾದವ್, ಸೌರಭ್ ತಿವಾರಿ‌, ಕೀರನ್ ಪೊಲ್ಲಾರ್ಡ್‌ (ನಾಯಕ), ಹಾರ್ದಿಕ್ ಪಾಂಡ್ಯ‌, ಕೃನಾಲ್ ಪಾಂಡ್ಯ‌, ಜೇಮ್ಸ್ ಪ್ಯಾಟಿನ್ಸನ್‌, ರಾಹುಲ್ ಚಹರ್‌,ಟ್ರೆಂಟ್ ಬೌಲ್ಟ್‌, ಜಸ್ಪ್ರೀತ್ ಬುಮ್ರಾ.

ಸ್ಥಳ: ಅಬುಧಾಬಿ 
ಆರಂಭ: ರಾತ್ರಿ 7.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್

Follow Us:
Download App:
  • android
  • ios