ಬಲಿಷ್ಠ ಡೆಲ್ಲಿಗಿಂದು ರಾಜಸ್ಥಾನ ಸವಾಲು; 4ನೇ ಸೋಲಿನ ಭೀತಿಯಲ್ಲಿ ಸ್ಮಿತ್ ಪಡೆ

13ನೇ ಆವೃತ್ತಿಯ ಐಪಿಎಲ್ ಟೂರ್ನಿಯ 23ನೇ ಪಂದ್ಯದಲ್ಲಿಂದು ಬಲಿಷ್ಠ ಡೆಲ್ಲಿ ಕ್ಯಾಪಿಟಲ್ಸ್ ಹ್ಯಾಟ್ರಿಕ್ ಸೋಲು ಕಂಡಿರುವ ರಾಜಸ್ಥಾನ ರಾಯಲ್ಸ್ ವಿರುದ್ಧ ಕಾದಾಡಲಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

IPL 2020 Rajasthan Royals vs Delhi Capitals In Sharjah match Preview kvn

ಶಾರ್ಜಾ(ಅ.09): ಸತತ 3 ಸೋಲುಗಳಿಂದ ಕಂಗೆಟ್ಟಿರುವ ರಾಜಸ್ಥಾನ ರಾಯಲ್‌ಸ್ ತಂಡ, ಜಯದ ಅಲೆಯಲ್ಲಿ ತೇಲುತ್ತಿರುವ ಡೆಲ್ಲಿ ಕ್ಯಾಪಿಟಲ್‌ಸ್ ವಿರುದ್ಧ ಶುಕ್ರವಾರ ಇಲ್ಲಿ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ಎದುರಾಗಲಿದೆ. 

ಈ ಆವೃತ್ತಿಯ ಮೊದಲ ಎರಡು ಪಂದ್ಯ ಗೆದ್ದಿದ್ದ ರಾಜಸ್ಥಾನ ನಂತರದ 3 ಪಂದ್ಯಗಳಲ್ಲಿ ಸೋಲು ಕಂಡಿದೆ. ಮೊದಲೆರೆಡು ಪಂದ್ಯವನ್ನು ಶಾರ್ಜಾದ ಸಣ್ಣ ಮೈದಾನದಲ್ಲಿ ಆಡಿದ್ದ ರಾಜಸ್ಥಾನ, ನಂತರದ 3 ಪಂದ್ಯಗಳನ್ನು ಇತರೆ ಮೈದಾನದಲ್ಲಿ ಆಡಿತ್ತು. ಶಾರ್ಜಾ ಹೊರತುಪಡಿಸಿ, ಉಳಿದ 2 ಕ್ರೀಡಾಂಗಣಗಳು ದೊಡ್ಡದಾಗಿವೆ. ಇದೀಗ ಮತ್ತೆ ಶಾರ್ಜಾ ಮೈದಾನದಲ್ಲಿ ಡೆಲ್ಲಿ ಎದುರು ಸೆಣಸಲು ಸಜ್ಜಾಗಿದ್ದು, ಜಯದ ವಿಶ್ವಾಸದಲ್ಲಿದೆ.

ಬಲಿಷ್ಠ ಬ್ಯಾಟಿಂಗ್ ಪಡೆ: ರಾಜಸ್ಥಾನ ತಂಡ ಅಂತಿಮ 11ರ ಆಟಗಾರರಿಂದ ಸಮರ್ಥ ಪ್ರದರ್ಶನ ಹೊರಬರುತ್ತಿಲ್ಲ. ಅಗ್ರ ಕ್ರಮಾಂಕ ಬ್ಯಾಟಿಂಗ್‌ನಲ್ಲಿ ಸಂಪೂರ್ಣ ವೈಫಲ್ಯ ಕಾಣುತ್ತಿದೆ. ಆಲ್ರೌಂಡರ್ ಬೆನ್‌ಸ್ಟೋಕ್ಸ್ ತಂಡಕ್ಕೆ ಸೇರ್ಪಡೆಗೊಳ್ಳುವ ನಿರೀಕ್ಷೆಯಲ್ಲಿ ರಾಜಸ್ಥಾನವಿದೆ. ಆದರೆ ಸ್ಟೋಕ್ಸ್ ಕ್ವಾರಂಟೈನ್ ನಲ್ಲಿದ್ದು, ಅ.11ರ ನಂತರ ಸ್ಟೋಕ್ಸ್ ಲಭ್ಯರಿರಲಿದ್ದಾರೆ. ಕೊನೆಯ 3 ಪಂದ್ಯಗಳಲ್ಲಿ ಸಂಜು, ಸ್ಮಿತ್ ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸಿದ್ದಾರೆ. ಮುಂದಿನ ಪಂದ್ಯಗಳಲ್ಲಾದರೂ ನಿರೀಕ್ಷಿತ ಪ್ರದರ್ಶನ ಹೊರಬರಬೇಕಿದೆ. ಆರ್ಚರ್ ಬೌಲಿಂಗ್ ವಿಭಾಗವನ್ನು ಮುನ್ನಡೆಸುತ್ತಿದ್ದಾರೆ. 

IPL IPL 2020: ಹೈದಾರಾಬಾದ್ ಎದುರು ಪಂಜಾಬ್ ಹೀನಾಯ ಸೋಲು ಕಂಡಿದ್ದೇಗೆ?

ಆತ್ಮವಿಶ್ವಾಸದಲ್ಲಿ ಡೆಲ್ಲಿ: ಶ್ರೇಯಸ್ ಅಯ್ಯರ್ ನೇತೃತ್ವದ ಡೆಲ್ಲಿ ತಂಡ ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್‌ನಲ್ಲಿ ಅತ್ಯದ್ಭುತ ಪ್ರದರ್ಶನ ತೋರುತ್ತಿದೆ. ಆಡಿರುವ 5 ಪಂದ್ಯಗಳಲ್ಲಿ 4ರಲ್ಲಿ ಗೆದ್ದಿದ್ದು, 8 ಅಂಕಗಳಿಂದ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಶ್ರೇಯಸ್ ಅಯ್ಯರ್, ಪೃಥ್ವಿ ಶಾ, ರಿಷಭ್ ಪಂತ್, ಮಾರ್ಕಸ್ ಸ್ಟೋಯ್ನಿಸ್ ಲಯದಲ್ಲಿದ್ದಾರೆ. ಬೌಲಿಂಗ್ ವಿಭಾಗವನ್ನು ವೇಗಿ ರಬಾಡ ಮುನ್ನಡೆಸು ತ್ತಿದ್ದು, ಸ್ಪಿನ್ನರ್ ಗಳಾದ ಅಶ್ವಿನ್, ಅಕ್ಷರ್ ಹೆಚ್ಚಿನ ಬಲ ನೀಡಿದ್ದಾರೆ.

ಪಿಚ್ ರಿಪೋರ್ಟ್: ಶಾರ್ಜಾ ಪಿಚ್ ಸ್ಪಿನ್ ಸ್ನೇಹಿಯಾಗಿದೆ. ಈ ಕ್ರೀಡಾಂಗಣ ಸಣ್ಣದಾಗಿರುವ ಕಾರಣದಿಂದ ಇಲ್ಲಿ ಸಿಕ್ಸರ್‌ಗಳ ಹಬ್ಬ ನಿರೀಕ್ಷಿಸಲಾಗಿದೆ. ಇಲ್ಲಿ ಇದುವರೆಗೂ 4 ಪಂದ್ಯಗಳು ನಡೆದಿದ್ದು 3ರಲ್ಲಿ ಮೊದಲು ಬ್ಯಾಟ್ ಮಾಡಿದ ತಂಡ ಜಯ ಸಾಧಿಸಿದೆ. 4 ಪಂದ್ಯದಲ್ಲೂ 200ಕ್ಕೂ ಹೆಚ್ಚು ಮೊತ್ತ ದಾಖಲಾಗಿದೆ
 

Latest Videos
Follow Us:
Download App:
  • android
  • ios