ಕೋಲ್ಕತಾ[ಡಿ.20]: 2016ರ ಐಪಿಎಲ್ ಚಾಂಪಿಯನ್ ಸನ್‌ರೈಸರ್ಸ್ ಹೈದರಾಬಾದ್ ಈ ಬಾರಿಯ ಆಟಗಾರರ ಹರಾಜಿನಲ್ಲಿ ಸಾಕಷ್ಟು ಅಳೆದು ತೂಗಿ ತಂಡವನ್ನು ಖರೀದಿಸಿದೆ. 2020ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಕೇವಲ 6.9 ಕೋಟಿ ಖರ್ಚು ಮಾಡಿ 7 ಆಟಗಾರರನ್ನು ಖರೀದಿಸಿದೆ. 

IPL 2020: ಹರಾಜಿನ ಬಳಿಕ ಮುಂಬೈ ಇಂಡಿಯನ್ಸ್ ಫುಲ್ ಲಿಸ್ಟ್!

ಹೌದು, ಹೈದರಾಬಾದ್ ತಂಡವು ಕೋಲ್ಕತಾದಲ್ಲಿ ನಡೆದ ಹರಾಜಿನಲ್ಲಿ ದೇಶಿ ಕ್ರಿಕೆಟಿಗರನ್ನು ಖರೀದಿಸಲು ಸನ್‌ರೈಸರ್ಸ್ ತಂಡ ಹೆಚ್ಚಿನ ಆಸಕ್ತಿ ತೋರಿತು. ಭಾರತ ಅಂಡರ್ 19 ತಂಡದ ನಾಯಕ ಪ್ರಿಯಂ ಗರ್ಗ್ ಹಾಗೂ ವಿರಾಟ್ ಸಿಂಗ್ ಅವರನ್ನು 1.9 ಕೋಟಿ ನೀಡಿ ಖರೀದಿಸಿತು. ಇನ್ನು ಆಸೀಸ್ ಆಲ್ರೌಂಡರ್ ಮಿಚೆಲ್ ಮಾರ್ಷ್ ಅವರನ್ನು 2 ಕೋಟಿ ನೀಡಿ ತನ್ನ ತೆಕ್ಕೆಗೆ ಸೆಳೆಯುವಲ್ಲಿ ಬೆಂಗಳೂರು ತಂಡ ಯಶಸ್ವಿಯಾಯಿತು.

ಅನ್ ಸೋಲ್ಡ್ ಆಗಿ ಅಚ್ಚರಿ ಮೂಡಿಸಿದ ಟಾಪ್ 10 ಕ್ರಿಕೆಟಿಗರು

ಹರಾಜಿನ ಬಳಿಕ ಸನ್‌ರೈಸರ್ಸ್ ಹೈದರಾಬಾದ್ ತಂಡದಲ್ಲಿ 25 ಆಟಗಾರರು ಸ್ಥಾನ ಪಡೆದಿದ್ದು, 17 ಭಾರತೀಯ ಹಾಗೂ 8 ವಿದೇಶಿ ಆಟಗಾರರು ಸೇರಿದ್ದಾರೆ. ಹೀಗಿದೆ ನೋಡಿ ಸನ್‌ರೈಸರ್ಸ್ ಹೈದರಾಬಾದ್ ತಂಡ

1 ಕೇನ್ ವಿಲಿಯ್ಸನ್
2 ಡೇವಿಡ್ ವಾರ್ನರ್
3 ಮನೀಶ್ ಪಾಂಡೆ
4 ವಿಜಯ್ ಶಂಕರ್
5 ರಶೀದ್ ಖಾನ್
6 ಮೊಹಮ್ಮದ್ ನಬೀ
7 ಅಭಿಷೇಕ್ ಶರ್ಮಾ
8 ಜಾನಿ ಬೇರ್’ಸ್ಟೋ
9 ವೃದ್ದಿಮಾನ್ ಸಾಹ
10 ಶ್ರೀವತ್ಸ್ ಗೋಸ್ವಾಮಿ
11 ಭುವನೇಶ್ವರ್ ಕುಮಾರ್
12 ಸಂದೀಪ್ ಶರ್ಮಾ
13 ಸಿದ್ಧಾರ್ಥ್ ಕೌಲ್
14 ಶಾಹಬಾಜ್ ನದೀಮ್
15 ಬಿಲ್ಲಿ ಸ್ಟ್ಯಾನ್’ಲೇಕ್
16 ಬಾಸಿಲ್ ಥಂಪಿ
17 ತಂಗವೇಲು ನಟರಾಜನ್
18 ವಿರಾಟ್ ಸಿಂಗ್
19 ಪ್ರಿಯಂ ಗರ್ಗ್
20 ಮಿಚೆಲ್ ಮಾರ್ಷ್
21 ಸಂದೀಪ್ ಭಾವನಕ
22 ಫ್ಯಾಬಿಯನ್ ಅಲೆನ್
23 ಅಬ್ದುಲ್ ಶಮದ್
24 ಸಂಜಯ್ ಯಾದವ್
25 ಖಲೀಲ್ ಅಹಮ್ಮದ್