ಅಬು ಧಾಬಿ(ಅ.28): ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇ ಆಫ್ ಸ್ಥಾನ ಖಚಿತಪಡಿಸಿಕೊಳ್ಳಲು ಹೋರಾಟಕ್ಕೆ ಸಜ್ಜಾಗಿದೆ. ಉಭಯ ತಂಡಗಳು 14 ಅಂಕಗಳನ್ನು ಸಂಪಾದಿಸಿ ಕ್ರಮವಾಗಿ 1 ಮತ್ತು 2ನೇ ಸ್ಥಾನದಲ್ಲಿದೆ. ಈ ಮಹತ್ವದ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.

RCB ತಂಡದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಶಿವಂ ದುಬೆ, ಡೇಲ್ ಸ್ಟೇನ್ ಹಾಗೂ ಜೊಶ್ ಫಿಲಿಪ್ ತಂಡ ಸೇರಿಕೊಂಡಿದ್ದಾರೆ.  ರೋಹಿತ್ ಶರ್ಮಾ ಇಂಜುರಿಯಿಂದ ಚೇತರಿಸಿಕೊಂಡಿಲ್ಲ. ಹೀಗಾಗಿ ರೋಹಿತ್ ಸೇವೆ ಲಭ್ಯವಿಲ್ಲ. 

 

ರಾಯಲ್ ಚಾಲೆಂಜರ್ಸ್ ಬೆಂಗಳೂರು 11ರಲ್ಲಿ 7 ಪಂದ್ಯ ಗೆದ್ದು 14 ಅಂಕ ಸಂಪಾದಿಸಿದೆ. ಇತ್ತ ಮುಂಬೈ ಕೂಡ 14 ಅಂಕ ಸಂಪಾದಿಸಿದೆ. ಉತ್ತಮ ನೆಟ್‌ರನ್ ಹೊಂದಿರು ಮುಂಬೈ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.