ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ ಹಲವು ಬಾರಿ ವಯಸ್ಸು ಕೇವಲ ನಂಬರ್ ಅನ್ನೋದನ್ನು ಸಾಬೀತುಮಾಡಿದ್ದಾರೆ. ಇದೀಗ ಬ್ಯಾಟ್ ಹಿಡಿಯದೆ 6 ತಿಂಗಳಾದರೂ ಅಬ್ಬರಿಸಬಲ್ಲೇ ಅನ್ನೋದನ್ನು ತೋರಿಸಿದ್ದಾರೆ. IPL 2020ರ ಅಭ್ಯಾಸದಲ್ಲಿ ಧೋನಿ ಸಿಕ್ಸರ್ ಸುರಿಮಳೆ ಸುರಿಸಿದ್ದಾರೆ.
ಚೆನ್ನೈ(ಮಾ.06): ಐಪಿಎಲ್ 2020 ಟೂರ್ನಿ ಆರಂಭಕ್ಕೆ ಕೆಲ ದಿನಗಳು ಮಾತ್ರ ಬಾಕಿ. ಎಲ್ಲಾ ತಂಡಗಳು ಅಭ್ಯಾಸ ಮಾಡುತ್ತಿದೆ. ಚೆನ್ನೈ ಸೂಪರ್ ಕಿಂಗ್ಸ್ ಅಭ್ಯಾಸ ಇದೀಗ ಇತರ ತಂಡಗಳಿಗೆ ನಡುಕು ಹುಟ್ಟಿಸಿದೆ. ಚಿಪಾಕ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ CSK ಅಭ್ಯಾಸದಲ್ಲಿ ಎಂ.ಎಸ್.ಧೋನಿ ಸಿಕ್ಸರ್ ಸುರಿಮಳೆ ಸುರಿಸಿದ್ದಾರೆ.
ಇದನ್ನೂ ಓದಿ: ಧೋನಿ ಅಭ್ಯಾಸ ನೋಡಲು ಕ್ರೀಡಾಂಗಣ ಫುಲ್, ಬ್ಯಾರಿಕೇಡ್ ಹಾರಿದ ಅಭಿಮಾನಿ!
2019ರ ವಿಶ್ವಕಪ್ ಟೂರ್ನಿ ಬಳಿಕ ಎಂ.ಎಸ್.ಧೋನಿ ಕ್ರಿಕೆಟ್ ಬ್ಯಾಟ್ ಹಿಡಿದಿಲ್ಲ. ಕುಟುಂಬದ ಜೊತೆ, ಪ್ರವಾಸ, ಜಾಹೀರಾತು ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಧೋನಿ ತೊಡಗಿಸಿಕೊಂಡಿದ್ದರು. ಸರಿಸುಮಾರು 6 ತಿಂಗಳುಗಳಿಂತಲೂ ಹೆಚ್ಚು ಕಾಲು ಧೋನಿ ಕ್ರಿಕೆಟ್‌ನಿಂದ ದೂರ ಉಳಿದಿದ್ದರು. ಸುದೀರ್ಘ ದಿನಗಳ ಬಳಿಕ ಅಭ್ಯಾಸಕ್ಕಿಳಿದ ಧೋನಿ ಸತತ 5 ಎಸೆತವನ್ನು ಸಿಕ್ಸರ್ ಸಿಡಿಸಿದ್ದಾರೆ.
ಇದನ್ನೂ ಓದಿ: ಚೆನ್ನೈಯಲ್ಲಿ ಈಗಲೇ ಶುರುವಾಗಿದೆ IPL, ಅಭಿಮಾನಿಗಳು ಫುಲ್ ಖುಷ್!
ಕ್ರಿಕೆಟ್ ಆಡದೆ ವರ್ಷಗಳು ಉರುಳಿದರೂ ಕ್ಲಾಸ್ ಶಾಶ್ವತ ಅನ್ನೋದನ್ನು ಧೋನಿ ಸಾಬೀತುಮಾಡಿದ್ದಾರೆ. ವಿಶ್ವಕಪ್ ಟೂರ್ನಿ ಬಳಿಕ ಟೀಂ ಇಂಡಿಯಾದಿಂದ ದೂರ ಸರಿದ ಧೋನಿ ವಿದಾಯ ಹೇಳಲಿದ್ದಾರೆ ಅನ್ನೋ ಮಾತುಗಳು ಕೇಳಿ ಬಂದಿತ್ತು. ಧೋನಿ ವಿರುದ್ಧ ಸತತ ಟೀಕೆಗಳು ಕೇಳಿ ಬಂದಿತ್ತು. ಇದೀಗ ಎಲ್ಲಾ ಟೀಕೆಗಳಿಗೆ ಧೋನಿ ಬ್ಯಾಟ್ ಮೂಲಕವೇ ಉತ್ತರ ನೀಡಿದ್ದಾರೆ.
