13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡ ಚಾಂಪಿಯನ್ ಆಗುವುದರೊಂದಿಗೆ ಅಧಿಕೃತವಾಗಿ ಟೂರ್ನಿಗೆ ತೆರೆ ಬಿದ್ದಿದೆ. ಈ ಆವೃತ್ತಿ ಸಾಕಷ್ಟು ರೋಚಕ ಹಾಗೂ ಸ್ಪರ್ಧಾತ್ಮಕ ಪಂದ್ಯಗಳಿಗೆ ಸಾಕ್ಷಿಯಾಯಿತು.ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಈ ವರ್ಷ ಹೆಸರಿಗಷ್ಟೇ ದುಬೈ, ಆರ್‌ಸಿಬಿ ತಂಡದ ತವರು, ಮುಂಬೈ ತಂಡಕ್ಕೆ ಅಬುಧಾಬಿ ತವರು ಎನ್ನಲಾಗಿತ್ತು. ಆದರೆ ಯಾವ ತಂಡಕ್ಕೂ ತವರಿನ ಲಾಭ ದೊರೆಯಲಿಲ್ಲ. ತವರು ಅಭಿಮಾನಿಗಳ ಬೆಂಬಲ ಸಿಗಲಿಲ್ಲ. ಈ ಆವೃತ್ತಿ ಅತ್ಯಂತ ಸ್ಪರ್ಧಾತ್ಮಕಗೊಳ್ಳಲು ಇದೇ ಪ್ರಮುಖ ಕಾರಣ.