ದುಬೈ(ಸೆ.20):  ಚುಟುಕು ಕ್ರಿಕೆಟ್‌ನ ಮತ್ತೊಂದು ರೋಚಕ ಪಂದ್ಯಕ್ಕೆ ದುಬೈ ಕ್ರೀಡಾಂಗಣ ಸಾಕ್ಷಿಯಾಗಲಿದೆ. 13ನೇ ಆವೃತ್ತಿ ಐಪಿಎಲ್ ಟೂರ್ನಿಯ 2ನೇ ಲೀಗ್ ಪಂದ್ಯದಲ್ಲಿ ಟಾಸ್ ಗೆದ್ದ ಕಿಂಗ್ಸ್ ಇಲೆವೆನ್ ಪಂಜಾಬ್   ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ನಾಯಕ ಕೆಎಲ್ ರಾಹುಲ್ ಸೇರಿದಂತೆ ನಾಲ್ವರು ಕನ್ನಡಿಗರು ಪಂಜಾಬ್ ತಂಡದ ಪ್ಲೇಯಿಂಗ್ 11ನಲ್ಲಿ ಕಾಣಿಸಿಕೊಂಡಿದ್ದಾರೆ.ಕನ್ನಡಿಗರಾದ ಮಯಾಂಗ್ ಅಗರ್ವಾಲ್, ಕರುಣ್ ನಾಯರ್ ಹಾಗೂ ಕೆ ಗೌತಮ್ ಪಂಜಾಬ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

IPL 2020: ಹೊಸ ಲುಕ್‌ನಲ್ಲಿ ಕಾಣಿಸಿಕೊಂಡ ಧೋನಿಗೆ ಸಿಂಗಂ ಹೆಸರಿಟ್ಟ ಫ್ಯಾನ್ಸ್!

ಅನಿಲ್ ಕುಂಬ್ಳೆ ಮಾರ್ಗದರ್ಶನದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿ ಕನ್ನಡಿಗರೇ ತುುಂಬಿಕೊಂಡಿದ್ದಾರೆ.  ಪ್ರಸಕ್ತ ವರ್ಷ ನಾಯಕನಾಗಿ ಬಡ್ತಿ ಪಡೆದಿರುವ ಕೆಎಲ್ ರಾಹುಲ್ ತಂಡ ಶುಭಾರಂಭದ ವಿಶ್ವಾಸದಲ್ಲಿದೆ. ಸ್ಫೋಟಕ ಬ್ಯಾಟ್ಸ್‌ಮನ್ ಹಾಗೂ ಉತ್ತಮ ಬೌಲರ್ಸ್ ಹೊಂದಿರುವ ಪಂಜಾಬ್ ಸಮತೋಲನದಿಂದ ಕೂಡಿದೆ.

 

ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೂಡ ಸ್ಫೋಟಕ ಬ್ಯಾಟ್ಸ್‌ಮನ್‌ಗಳನ್ನೇ ಹೊಂದಿದೆ. ಜೊತೆಗೆ ರಿಕಿ ಪಾಂಟಿಂಗ್ ಕೋಚಿಂಗ್ ಕೂಡ ಡೆಲ್ಲಿ ತಂಡದ ಲಕ್ ಬದಲಿಸುತ್ತಾ ಅನ್ನೋ ಕುತೂಹಲ ಎಲ್ಲರಲ್ಲಿ ಮನೆ ಮಾಡಿದೆ.