ಅಬು ಧಾಬಿ(ಸೆ.20):  ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳು ಎಂ.ಎಸ್.ಧೋನಿಯನ್ನು ಪ್ರೀತಿಯಿಂದ ತಲೈವಾ ಎಂದು ಕರೆಯುತ್ತಾರೆ. 13ನೇ ಆವೃತ್ತಿ ಐಪಿಎಲ್ ಟೂರ್ನಿಯ ಮೊದಲ ಪಂದ್ಯದ ಬಳಿಕ ಕೆಲ ಅಭಿಮಾನಿಗಳು  ಸಿಂಗಂ ಧೋನಿ ಎಂದಿದ್ದಾರೆ. ಇದಕ್ಕೆ ಕಾರಣ ಧೋನಿಯ ಹೊಸ ಬಿಯರ್ಡ್ ಸ್ಟೈಲ್.

IPL 2020: ಉದ್ಘಾಟನಾ ಪಂದ್ಯದಲ್ಲಿ ಮುಂಬೈಗೆ ಸೋಲುಣಿಸಿದ CSK!

ಅಬು ಧಾಬಿಯಲ್ಲಿ ನಡೆದ ಉದ್ಘಾಟನಾ ಪಂದ್ಯದ ಟಾಸ್‌ಗೆ ಆಗಮಿಸಿದ ಧೋನಿ ಅಭಿಮಾನಿಗಳಿಗೆ ಅಚ್ಚರಿ ನೀಡಿದರು. ತಮ್ಮ ಬಿಯರ್ಡ್ ಸ್ಟೈಲ್‌ನಲ್ಲಿ ಬದಲಾವಣೆ ಮಾಡಿಕೊಂಡಿದ್ದರು. ಹೊಸ ಬಿಯರ್ಡ್ ಸ್ಟೈಲ್ ನೋಡಿದ ಸಿಎಸ್‌ಕೆ ಅಭಿಮಾನಿಗಳು ತಮಿಳು ನಟ ಸೂರ್ಯ ಅವರ ಸಿಂಗಂ ಚಿತ್ರದ ಸ್ಟೈಲ್ ರೀತಿ ಇದೆ ಎಂದಿದ್ದಾರೆ. ಇಷ್ಟೇ ಅಲ್ಲ ಸಿಂಗಂ ಧೋನಿ ಎಂದು ಹೆಸರಿಟ್ಟಿದ್ದಾರೆ.

CSK ಮ್ಯಾಚ್ ಗೆದ್ದಿದ್ದು ಹೇಗೆ? ಇಲ್ಲಿದೆ ಪಂದ್ಯದ ಟರ್ನಿಂಗ್ ಪಾಂಯ್ಟ್‌!

ಮುಂಬೈ ಇಂಡಿಯನ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 5 ವಿಕೆಟ್ ಗೆಲುವು ಸಾಧಿಸಿ ಶುಭಾರಂಭ ಮಾಡಿದೆ. ಇಷ್ಟೇ ಅಲ್ಲ 2019 ವಿಶ್ವಕಪ್ ಟೂರ್ನಿ ಸೆಮಿಫೈನಲ್ ಪಂದ್ಯದ ಬಳಿಕ ಕಾಣಿಸಿಕೊಂಡ ಧೋನಿ, ಮತ್ತೆ ಅದೇ ಚಾಣಾಕ್ಷ ಕ್ಯಾಪ್ಟೆನ್ಸಿ ತೋರಿಸಿದ್ದಾರೆ. ಇಷ್ಟೇ ಅಲ್ಲ ಫಿಟ್ ಆಗಿರುವುದಾಗಿ ಸಾಬೀತುಪಡಿಸಿದ್ದಾರೆ.