ದುಬೈ(ಸೆ.08): ಕೊರೋನಾ ವೈರಸ್ ಕಾರಣ ದುಬೈನಲ್ಲಿ ಆಯೋಜಿಸುವ ಐಪಿಎಲ್ ಟೂರ್ನಿ ಇದೇ ಸೆಪ್ಟೆಂಬರ್ 19 ರಿಂದ ಆರಂಭಗೊಳ್ಳುತ್ತಿದೆ. ಇದಕ್ಕಾಗಿ ಭರ್ಜರಿ ಅಭ್ಯಾಸ ನಡೆಯುತ್ತಿದೆ. ಇದರ ನಡುವೆ ಟೀಂ ಇಂಡಿಯಾ ಮಾಜಿ ಕೋಚ್ ಅನಿಲ್ ಕುಂಬ್ಳೆ ಐಪಿಎಲ್ ಟೂರ್ನಿಯಲ್ಲಿರುವ ಭಾರತೀಯ ಕೋಚ್ ಹಾಗೂ ವಿದೇಶಿ ಕೋಚ್ ಕುರಿತು ಬೆಳಕು ಚೆಲ್ಲಿದ್ದಾರೆ.

IPL 2020: ದುಬೈ ಪಿಚ್‌ನಲ್ಲಿ ಉತ್ತಮ ಮೊತ್ತ ಎಷ್ಟು? ಇಲ್ಲಿದೆ RCB ಲೆಕ್ಕಾಚಾರ!.

8 ಫ್ರಾಂಚೈಸಿಗಳ ಪೈಕಿ 7 ತಂಡದಲ್ಲಿ ವಿದೇಶಿ ಕೋಚ್‌ಗಳಿದ್ದಾರೆ. ಇದು ಭಾರತೀಯ ಸಂಪನ್ಮೂಲವನ್ನು ಸೂಕ್ತ ರೀತಿ ಬಳಕೆ ಮಾಡಿಲ್ಲ ಅನ್ನೋದನ್ನು ಸೂಚಿಸುತ್ತದೆ. ಭಾರತದಲ್ಲಿ ಹೆಡ್ ಕೋಚ್‌ ಸೂಕ್ತ ಮಾರ್ಗದರ್ಶಕರಿದ್ದಾರೆ. ಆದರೆ ಅವಕಾಶ ಸಿಕ್ಕಿಲ್ಲ ಎಂದು ಅನಿಲ್ ಕುಂಬ್ಳೆ ಹೇಳಿದ್ದಾರೆ. ಐಪಿಎಲ್ ತಂಡದಲ್ಲಿ ಹೆಚ್ಚು ಭಾರತೀಯ ಕೋಚ್‌ಗಳನ್ನು ಕಾಣಬಯುಸುತ್ತೇನೆ ಎಂದು ಕುಂಬ್ಳೆ ಹೇಳಿದ್ದಾರೆ.

ಕೊಹ್ಲಿ To ಪಂತ್: 10 ಲಕ್ಷದಿಂದ ಆರಂಭಿಸಿ 17 ಕೋಟಿಗೂ ಅಧಿಕ ಸ್ಯಾಲರಿ ಪಡೆಯುತ್ತಿರುವ ಕ್ರಿಕೆಟರ್ಸ್!

ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಮುಖ್ಯ ಕೋಚ್ ಆಗಿರುವ ಅನಿಲ್ ಕುಂಬ್ಳೆ, ಈ ಭಾರಿಯ ಹರಾಜಿನಲ್ಲಿ ಪ್ರತಿಭಾನ್ವಿತರಿಗೆ ಹೆಚ್ಚು ಮಣೆ ಹಾಕಿದ್ದರು. ಭಾರತದ ಕ್ರಿಕೆಟ್ ಸಂಪನ್ಮೂಲವನ್ನು ಐಪಿಎಲ್ ಟೂರ್ನಿಯಲ್ಲಿ ಸರಿಯಾಗಿ ಬಳಕೆ ಮಾಡಿಕೊಂಡಿಲ್ಲ ಎಂದು ಕುಂಬ್ಳೆ ಹೇಳಿದ್ದಾರೆ.

ಐಪಿಎಲ್ 8 ತಂಡದ ಕೋಚ್ ವಿವರ:

ಕಿಂಗ್ಸ್ ಇಲೆವೆನ್ ಪಂಜಾಬ್- ( ಅನಿಲ್ ಕುಂಬ್ಳೆ) ಭಾರತೀಯ ಕೋಚ್
ರಾಯಲ್ ಚಾಲೆಂಜರ್ಸ್ ಬೆಂಗಳೂರು - (ಸೈಮನ್ ಕ್ಯಾಟಿಚ್) ವಿದೇಶಿ ಕೋಚ್
ಕೋಲ್ಕತಾ ನೈಟ್ ರೈಡರ್ಸ್ -(ಬ್ರೆಂಡನ್ ಮೆಕಲಮ್) ವಿದೇಶಿ ಕೋಚ್
ಮುಂಬೈ ಇಂಡಿಯನ್ಸ್ -(ಮಹೇಲಾ ಜಯವರ್ಧನೆ) ವಿದೇಶಿ ಕೋಚ್
ರಾಜಸ್ಥಾನ ರಾಯಲ್ಸ್ - (ಆ್ಯಂಡ್ರೂ ಮೆಕ್‌ಡೋನಾಲ್ಡ್) ವಿದೇಶಿ ಕೋಚ್
ಸನ್ ರೈಸರ್ಸ್ ಹೈದರಾಬಾದ್-(ಟ್ರೆವೊರ್ ಬೈಲಿಸ್) ವಿದೇಶಿ ಕೋಚ್
ಡೆಲ್ಲಿ ಕ್ಯಾಪಿಟಲ್ಸ್ -( ರಿಕಿ ಪಾಂಟಿಂಗ್) ವಿದೇಶಿ ಕೋಚ್
ಚೆನ್ನೈ ಸೂಪರ್ ಕಿಂಗ್ಸ್( ಸ್ಟೀಫನ್ ಫ್ಲೆಮಿಂಗ್ ವಿದೇಶಿ ಕೋಚ್