Asianet Suvarna News Asianet Suvarna News

IPL 2020: ದುಬೈ ಪಿಚ್‌ನಲ್ಲಿ ಉತ್ತಮ ಮೊತ್ತ ಎಷ್ಟು? ಇಲ್ಲಿದೆ RCB ಲೆಕ್ಕಾಚಾರ!

ಐಪಿಎಲ್ ಟೂರ್ನಿ ಅಂದರೆ ಹೊಡಿ ಬಡಿ ಆಟ. ಅದರಲ್ಲೂ ಭಾರತದ ಬ್ಯಾಟಿಂಗ್ ಟ್ರ್ಯಾಕ್ ಪಿಚ್‌ಗಳಲ್ಲಿ ರನ್ ಮಳೆ ಸುರಿಯುತ್ತದೆ. ಇನ್ನು 200ರ ಗಡಿ ದಾಟಿದರೂ ಚೇಸ್ ಮಾಡುತ್ತಾರೆ. ಆದರೆ ಈ ಬಾರಿ ದುಬೈನಲ್ಲಿ ಐಪಿಎಲ್ ನಡೆಯುತ್ತಿರುವ ಕಾರಣ ದುಬೈ ಪಿಚ್‌ಗಳಲ್ಲಿ ಉತ್ತಮ ಮೊತ್ತ ಎಷ್ಟು? ಇಲ್ಲಿದೆ ವಿವರ.

IPL 2020 score of 150 to 160 will be a competitive one in Dubai track says rcb director
Author
Bengaluru, First Published Sep 8, 2020, 8:43 PM IST

ದುಬೈ(ಸೆ.08): ಐಪಿಎಲ್ ಟೂರ್ನಿ ಆರಂಭಕ್ಕೆ ಕೆಲ ದಿನ ಮಾತ್ರ ಬಾಕಿ ಇದೆ. ಸೆಪ್ಟೆಂಬರ್ 19ರಿಂದ ದುಬೈನಲ್ಲಿ ಐಪಿಎಲ್ ಟೂರ್ನಿ ಆಯೋಜನೆಯಾಗುತ್ತಿದೆ. ಕೊರೋನಾ ವೈರಸ್ ಕಾರಣ ದುಬೈಗೆ ಟೂರ್ನಿ ಸ್ಥಳಾಂತರ ಮಾಡಲಾಗಿದೆ. ಭಾರತದಲ್ಲಿ ಬಹುತೇಕ ಬ್ಯಾಟಿಂಗ್ ಟ್ರ್ಯಾಕ್‌ಗಳೇ ಇವೆ. ಆದರೆ ದುಬೈ, ಅಭುದಾಬಿಯಲ್ಲಿ ಗೆಲುವಿನ ಮೊತ್ತ ಎಷ್ಟು ಅನ್ನೋ ಲೆಕ್ಕಾಚಾರ ಶುರುವಾಗಿದೆ. ಇದಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಉತ್ತರ ಕಂಡುಕೊಂಡಿದೆ.

IPL 2020: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸಂಪೂರ್ಣ ವೇಳಾಪಟ್ಟಿ!

ದುಬೈ ಹಾಗೂ ಅಭುದಾಬಿ ಪಿಚ್‌ಗಳಲ್ಲಿ 150 ರಿಂದ 160 ರನ್ ಗೆಲುವಿನ ಮೊತ್ತವಾಗಿದೆ ಎಂದು RCB ತಂಡದ ನಿರ್ದೇಶಕ ಮೈಕ್ ಹಸನ್ ಹೇಳಿದ್ದಾರೆ. ಸರಾಸರಿ ಮೊತ್ತ ದಾಟಿದರೆ ಗೆಲುವು ಸುಲಭವಾಗಲಿದೆ ಎಂದು ಮೈಕ್ ಹೈಸನ್ ಹೇಳಿದ್ದಾರೆ. ಇದೀಗ ಇತರ ತಂಡಗಳು RCB ಹೇಳಿದ ಸರಾಸರಿ ಮೊತ್ತದ ಲೆಕ್ಕಾಚಾರ ಹಾಕುತ್ತಿದೆ.

ಕೊಹ್ಲಿ To ಪಂತ್: 10 ಲಕ್ಷದಿಂದ ಆರಂಭಿಸಿ 17 ಕೋಟಿಗೂ ಅಧಿಕ ಸ್ಯಾಲರಿ ಪಡೆಯುತ್ತಿರುವ ಕ್ರಿಕೆಟರ್ಸ್!

ಬೆಂಗಳೂರು ಬ್ಯಾಟಿಂಗ್ ಸಹಕಾರಿ ಪಿಚ್ ಆಗಿದೆ. ಚಿಕ್ಕ ಬೌಂಡರಿ ಇರುವುದರಿಂದ ಪ್ರತಿ ಬಾರಿ ಹೈಸ್ಕೋರ್ ಹಾಗೂ ದಾಖಲೆ ನಿರ್ಮಾಣವಾಗಿದೆ. ಆದರೆ ದುಬೈ ಹಾಗೂ ಅಭುದಾಬಿ ಕ್ರೀಡಾಂಗಣ ಸಂಪೂರ್ಣ ಬ್ಯಾಟಿಂಗ್ ಟ್ರ್ಯಾಕ್ ಅಲ್ಲ. ಹೀಗಾಗಿ ಈ ಸರಾಸರಿ ಮೊತ್ತದತ್ತ ತಂಡ ಗಮನ ಹರಿಸಿದರೆ ಉತ್ತಮ ಎಂದು ಮೈಕ್ ಹಸನ್ ಹೇಳಿದ್ದಾರೆ.

ಅಭುದಾಬಿಯಲ್ಲಿ ವೇಗಿಗಳು ಹೆಚ್ಚಿನ ಯಶಸ್ಸು ಪಡೆಯಲಿದ್ದಾರೆ. ಇಲ್ಲಿ ಸ್ಪಿನ್ನರ್‌ಗಳು ವಿಕೆಟ್‌ಗಾಗಿ ಹರಸಾಹಸ ಪಡಬೇಕು. ಇನ್ನು ದುಬೈ ಹಾಗೂ ಶಾರ್ಜಾ ಪಿಚ್‌ಗಳಲ್ಲಿ ಸ್ಪಿನ್ನರ್ಸ್ ಪ್ರಾಬಲ್ಯ ಸಾಧಿಸಲು ಸಾಧ್ಯವಿದೆ ಎಂದು ಮೈಕ್ ಹೇಳಿದ್ದಾರೆ. ಪಿಚ್‌ಗೆ ಅನುಗುಣವಾಗಿ ತಂಡದ ಪ್ಲೇಯಿಂಗ್ ಇಲೆವೆನ್ ಆಯ್ಕೆ ಮಾಡಲಾಗುವುದು ಎಂದು ಮೈಕ್ ಹೇಳಿದ್ದಾರೆ.

Follow Us:
Download App:
  • android
  • ios