Asianet Suvarna News Asianet Suvarna News

IPL 2020: ಸತತ 4ನೇ ಸೋಲಿನ ಭೀತಿ​ಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್

13ನೇ ಆವೃತ್ತಿಯ ಐಪಿಎಲ್ ಟೂರ್ನಿಯ 51ನೇ ಪಂದ್ಯದಲ್ಲಿ ಬಲಿಷ್ಠ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗುತ್ತಿದ್ದು, ಈ ಪಂದ್ಯಕ್ಕೆ ದುಬೈ ಅಂತಾರಾಷ್ಟ್ರೀಯ ಮೈದಾನ ಆತಿಥ್ಯ ವಹಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

IPL 2020 Delhi Capitals takes on Mumbai Indians in Dubai kvn
Author
Dubai - United Arab Emirates, First Published Oct 31, 2020, 1:15 PM IST

ದುಬೈ(ಅ.31): ಆರಂಭ​ದಲ್ಲಿ ಅಬ್ಬ​ರಿಸಿ ನಿರ್ಣಾ​ಯಕ ಘಟ್ಟ​ದಲ್ಲಿ ಲಯ ಕಳೆ​ದು​ಕೊಂಡು ಸತತ 3 ಸೋಲು ಕಂಡಿ​ರುವ ಡೆಲ್ಲಿ ಕ್ಯಾಪಿ​ಟಲ್ಸ್‌, ಶನಿ​ವಾರ ಇಲ್ಲಿ ನಡೆ​ಯ​ಲಿ​ರುವ ಪಂದ್ಯ​ದಲ್ಲಿ ಈಗಾ​ಗಲೇ ಪ್ಲೇ-ಆಫ್‌ಗೆ ಅರ್ಹತೆ ಗಿಟ್ಟಿ​ಸಿ​ರುವ ಹಾಲಿ ಚಾಂಪಿ​ಯನ್‌ ಮುಂಬೈ ಇಂಡಿ​ಯನ್ಸ್‌ ತಂಡ​ವನ್ನು ಎದು​ರಿ​ಸ​ಲಿದೆ. 

ಡೆಲ್ಲಿ 12 ಪಂದ್ಯ​ಗ​ಳಿಂದ 14 ಅಂಕ ಗಳಿ​ಸಿದ್ದು, ಪ್ಲೇ-ಆಫ್‌ನಲ್ಲಿ ಸ್ಥಾನ ಖಚಿತಪಡಿ​ಸಿ​ಕೊ​ಳ್ಳ​ಲು ಬಾಕಿ ಇರುವ 2 ಪಂದ್ಯ​ಗ​ಳಲ್ಲಿ ಒಂದರಲ್ಲಿ ಗೆಲ್ಲ​ಬೇ​ಕಿದೆ. ಎರ​ಡ​ರಲ್ಲೂ ಸೋತ​ರೆ ನೆಟ್‌ ರನ್‌ರೇಟ್‌ ಲೆಕ್ಕಾ​ಚಾರ ಪರಿ​ಗ​ಣನೆಗೆ ಬರ​ಲಿದ್ದು, ಡೆಲ್ಲಿ ಹೊರ​ಬಿ​ದ್ದ​ರೂ ಬೀಳ​ಬ​ಹುದು. ಅಂತಹ ಸ್ಥಿತಿ ತಲು​ಪುವು​ದನ್ನು ತಪ್ಪಿ​ಸಿ​ಕೊ​ಳ್ಳಲು ಶ್ರೇಯಸ್‌ ಅಯ್ಯರ್‌ ಪಡೆ ಎದುರು ನೋಡು​ತ್ತಿದೆ. ಮತ್ತೊಂದೆಡೆ ಮುಂಬೈ ಉಳಿ​ದಿ​ರುವ 2 ಪಂದ್ಯ​ಗ​ಳಲ್ಲಿ ಜಯಿಸಿ, ಅಗ್ರಸ್ಥಾನ ಭದ್ರಪಡಿ​ಸಿ​ಕೊ​ಳ್ಳುವ ಗುರಿ ಹೊಂದಿ​ದೆ.

ಸ್ಟೋಕ್ಸ್, ಸ್ಯಾಮ್ಸನ್ ಆಟದೆದಿರು ಗೇಲ್ ಅಬ್ಬರ ಥಂಡಾ; ಗೆದ್ದು ಬೀಗಿದ ರಾಜಸ್ಥಾನ

ಪಿಚ್‌ ರಿಪೋರ್ಟ್‌: ಇಲ್ಲಿ 2 ದಿನ​ಗಳ ಹಿಂದೆ ನಡೆದ ಚೆನ್ನೈ-ಕೆಕೆ​ಆರ್‌ ಪಂದ್ಯ​ದಲ್ಲಿ ಪಿಚ್‌ ನಿಧಾ​ನಗತಿ​ಯ​ಲ್ಲಿ​ದ್ದಿದ್ದು ಸ್ಪಷ್ಟವಾಗಿತ್ತು. ಹೀಗಾಗಿ, ಕ್ರೀಸ್‌ನಲ್ಲಿ ನೆಲೆ​ಯೂರಿ ಆಡುವ ಬ್ಯಾಟ್ಸ್‌ಮನ್‌ಗಳ ಪಾತ್ರ ಮಹ​ತ್ವ​ದಾ​ಗ​ಲಿದೆ. 160-170 ಉತ್ತಮ ಮೊತ್ತ.

ಸಂಭ​ವ​ನೀಯ ಆಟ​ಗಾ​ರರ ಪಟ್ಟಿ

ಮುಂಬೈ ಇಂಡಿಯನ್ಸ್: ಕ್ವಿಂಟನ್ ಡಿ ಕಾಕ್‌, ಇಶಾನ್ ಕಿಶನ್‌, ಸೂರ್ಯಕುಮಾರ್ ಯಾದವ್, ಸೌರಭ್ ತಿವಾ​ರಿ, ಹಾರ್ದಿಕ್ ಪಾಂಡ್ಯ‌, ಕೃನಾಲ್ ಪಾಂಡ್ಯ‌, ಕೀರಾನ್ ಪೊಲ್ಲಾರ್ಡ್‌(ನಾ​ಯ​ಕ​), ಜೇಮ್ಸ್ ಪ್ಯಾಟಿ​ನ್ಸನ್‌, ರಾಹುಲ್ ಚಹರ್‌, ಟ್ರೆಂಟ್ ಬೌಲ್ಟ್‌, ಜಸ್ಪ್ರೀತ್ ಬುಮ್ರಾ.

ಡೆಲ್ಲಿ ಕ್ಯಾಪಿಟಲ್ಸ್: ಶಿಖರ್ ಧವನ್‌, ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್‌(ನಾ​ಯ​ಕ), ರಿಷಭ್ ಪಂತ್‌, ಶಿಮ್ರೋನ್ ಹೆಟ್ಮೇ​ಯರ್‌, ಮಾರ್ಕಸ್ ಸ್ಟೋಯ್ನಿಸ್‌, ಅಕ್ಷರ್ ಪಟೇಲ್‌, ರವಿಚಂದ್ರನ್ ಅಶ್ವಿನ್‌, ಕಗಿಸೋ ರಬಾಡ, ಆನ್ರಿಚ್ ನೋಕಿಯಾ, ತುಷಾರ್ ದೇಶ​ಪಾಂಡೆ.

ಸ್ಥಳ: ದುಬೈ, 
ಪಂದ್ಯ ಆರಂಭ: ಮಧ್ಯಾಹ್ನ 3.30ಕ್ಕೆ, 
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್
 

Follow Us:
Download App:
  • android
  • ios