ಅಬುದಾಬಿ(ಅ. 30)  ಯುನಿವರ್ಸ್   ಬಾಸ್ ಕ್ರಿಸ್ ಗೇಲ್ ಅಬ್ಬರಕ್ಕೆ ರಾಜಸ್ಥಾನ ರಾಯಲ್ಸ್ ಭರ್ಜರಿ ಉತ್ತರ ನೀಡಿದ್ದು ಭರ್ಜರಿ ಜಯ ಸಾಧಿಸಿದೆ. 186  ರನ್ ಟಾರ್ಗೆಟ್ ಇನ್ನು 15 ಚೆಂಡು ಬಾಕಿ ಇರುವಂತೆ ಮುಗಿಸಿದೆ. ಈ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ರಾಜಸ್ಥಾನ ಜಿಗಿದಿದೆ. ಮಹತ್ವದ ಪಂದ್ಯದಲ್ಲಿ ಜಯ ದಾಖಲಿಸಿದೆ.

ಆರಂಭದಲ್ಲಿಯೇ ಹಿಂದಿನ ಪಂದ್ಯದಲ್ಲಿ ಶತಕ ಸಾಧಿಸಿದ್ದ ಸ್ಟೋಕ್ಸ್ ಅಬ್ಬರಿಸಿದರು.  ಇದಾದ ಮೇಲೆ ರಾಬಿನ್ ಉತ್ತಪ್ಪ ಕೊಡುಗೆ ನೀಡಿದರು. ಅಲ್ಲಿಂದ ಮುಂದೆ ಸಾಮ್ಸನ್ ಅಬ್ಬರ ಕೊನೆಯಲ್ಲಿ ನಾಯಕ ಸ್ಮಿತ್ ಮತ್ತು ಬಟ್ಲರ್ ಸ್ಫೋಟ ರಾಜಸ್ಥಾನಕ್ಕೆ ಜಯ ತಂದುಕೊಟ್ಟಿತು. ಯಾವ ಹಂತದಲ್ಲಿಯೂ ರಾಜಸ್ಥಾನ ಹತ್ತು ರನ್ ಎವರೇಜ್ ಇಳಿಯಲು ಆಸ್ಪದವನ್ನೇ ಕೊಡಲಿಲ್ಲ.

ಯಾರೂ ಮಾಡದ ದಾಖಲೆ ಬರೆದ ಕ್ರಿಸ್ ಗೇಲ್

ಟಾಸ್ ಗೆದ್ದು ಚೇಸ್ ಮಾಡುತ್ತೇವೆ ಎಂದು ಹೇಳಿದ್ದ ರಾಜಸ್ಥಾನ ಜಯ ತನ್ನದಾಗಿರಿಸಿಕೊಂಡಿತು.  ಈ ಮೂಲಕ ಪ್ಲೇ ಆಪ್ ರೇಸ್ ಮತ್ತಷ್ಟು ಕುತೂಹಲಕಾರಿಯಾಗಿ ಮಾರ್ಪಟ್ಟಿದೆ. 

ಮೊದಲು ಬ್ಯಾಟಿಂಗ್ ಮಾಡಿದ್ದ ಪಂಜಾಬ್ ಗೆ ಗೇಲ್ ಆಸರೆಯಾಗಿ ನಿಂತರು. ಕೊನೆ ಓವರ್ ತನಕ ಆಡಿದ ಗೇಲ್ ಕೇವಲ ಒಂದು ರನ್ ನಿಂದ ಶತಕ ವಂಚಿತರಾದರು.  ರನ್ ಗಳಿಸಿದರು. ಸತತ ಐದು ಗೆಲುವು ದಾಖಲಿಸಿರುವ ಪಂಜಾಬ್ ಗೆ ಇದು ಅತ್ಯಂತ ಪ್ರಮುಖ ಪಂದ್ಯವಾಗಿತ್ತು.