Asianet Suvarna News Asianet Suvarna News

IPL 2020 ಹ್ಯಾಟ್ರಿಕ್ ಗೆಲುವಿನ ಕನವರಿಕೆಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್..!

13ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಹನ್ನೊಂದನೇ ಪಂದ್ಯದಲ್ಲಿಂದು ಬಲಿಷ್ಠ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಕಿಯಾಗುತ್ತಿವೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

IPL 2020 Delhi Capital eye on Hat trick win against SRH in this tournament kvn
Author
Abu Dhabi - United Arab Emirates, First Published Sep 29, 2020, 8:53 AM IST

ಅಬುಧಾಬಿ(ಸೆ.29): ಐಪಿಎಲ್‌ 13ನೇ ಆವೃತ್ತಿ ಆರಂಭವಾದಗಿನಿಂದ ಇಲ್ಲಿಯವರೆಗೂ ಕ್ರಿಕೆಟ್‌ ಅಭಿಮಾನಿಗಳಿಗೆ ರಸದೌತಣ ಊಣಬಡಿಸಿದೆ. ಮಂಗಳ​ವಾರ ಮತ್ತೊಂದು ರೋಚಕ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ಆಡಿರುವ 2 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿರುವ ಡೆಲ್ಲಿ ಕ್ಯಾಪಿಟಲ್ಸ್‌, ಟೂರ್ನಿಯಲ್ಲಿ ಗೆಲುವನ್ನೇ ಕಾಣದ ಸನ್‌ರೈಸರ್ಸ್‌ ಹೈದ್ರಾಬಾದ್‌ ಎದುರು ಸೆಣಸಲಿದೆ.

ಆತ್ಮವಿಶ್ವಾಸದಲ್ಲಿ ಡೆಲ್ಲಿ: ಆಡಿರುವ ಮೊದಲೆರೆಡು ಪಂದ್ಯದಲ್ಲಿ ಗೆದ್ದಿರುವ ಡೆಲ್ಲಿ ಕ್ಯಾಪಿಟಲ್ಸ್‌ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ. ತಂಡ ಅತ್ಯು​ತ್ತಮ ಬ್ಯಾಟ್ಸ್‌ಮನ್‌ಗಳನ್ನು ಹೊಂದಿದೆ. ಆಲ್ರೌಂಡರ್‌ ಮಾರ್ಕಸ್‌ ಸ್ಟೋಯ್ನಿಸ್‌, ಆರಂಭಿಕ ಬ್ಯಾಟ್ಸ್‌ಮನ್‌ ಪೃಥ್ವಿ ಶಾ, ರಿಷಭ್‌ ಪಂತ್‌ ಅತ್ಯದ್ಭುತ ಪ್ರದ​ರ್ಶ​ನದ ಮೂಲಕ ಭರ​ವಸೆ ಮೂಡಿ​ಸಿ​ದ್ದಾರೆ. ವೇಗಿ ರಬಾಡ ತಂಡದ ಬೌಲಿಂಗ್‌ ಪಡೆಯನ್ನು ಮುನ್ನ​ಡೆ​ಸ​ಲಿದ್ದಾರೆ. ಅನುಭವಿ ಸ್ಪಿನ್ನರ್‌ ಅಮಿತ್‌ ಮಿಶ್ರಾ ಹಾಗೂ ಅಕ್ಷರ್‌ ಪಟೇಲ್‌, ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕುವ ಸಾಮರ್ಥ್ಯ ಹೊಂದಿದ್ದಾರೆ.

ಸೂಪರ್ ಓವರ್ ಮ್ಯಾಜಿಕ್; ಕೊನೆಗೂ ಗೆದ್ದು ಬೀಗಿದ ಆರ್‌ಸಿಬಿ

ಕೇನ್‌ಗೆ ಸಿಗುತ್ತಾ ಅವ​ಕಾಶ?: ಹೈದ್ರಾಬಾದ್‌ ಬ್ಯಾಟಿಂಗ್‌ ಕ್ರಮಾಂಕದ ಬಗ್ಗೆ ನಾಯಕ ಡೇವಿಡ್‌ ವಾರ್ನರ್‌ ಆತಂಕ ವ್ಯಕ್ತಪಡಿಸಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿನ ಬ್ಯಾಟ್ಸ್‌ಮನ್‌ಗಳು ಸಮರ್ಥವಾಗಿ ರನ್‌ಗಳಿಸದೆ ಇರುವುದು ತಂಡದ ಫಲಿತಾಂಶದ ಮೇಲೆ ಪರಿಣಾಮ ಬೀರಿದೆ ಎಂದಿದ್ದಾರೆ. ನ್ಯೂಜಿ​ಲೆಂಡ್‌ ನಾಯಕ ಕೇನ್‌ ವಿಲಿ​ಯ​ಮ್ಸನ್‌ ಕಣ​ಕ್ಕಿ​ಳಿ​ಯುವ ನಿರೀಕ್ಷೆ ಇದೆ. ವಾರ್ನರ್‌ ಹಾಗೂ ಬೇರ್‌ಸ್ಟೋವ್‌ ಮೇಲೆ ಹೆಚ್ಚು ಜವಾ​ಬ್ದಾರಿ ಇದೆ. ಮನೀಶ್‌ ಪಾಂಡೆ ಪ್ರಮುಖ ಪಾತ್ರ ವಹಿ​ಸ​ಲಿ​ದ್ದಾರೆ. ಕೆಳ ಮಧ್ಯಮ ಕ್ರಮಾಂಕ ಅತ್ಯಂತ ದುರ್ಬಲವಾ​ಗಿದೆ. ಈ ಸಮಸ್ಯೆಗೆ ಸನ್‌ರೈಸರ್ಸ್ ಪರಿ​ಹಾರ ಕಂಡು​ಕೊ​ಳ್ಳ​ಬೇ​ಕಿದೆ. ಸ್ಪಿನ್‌ ಅಸ್ತ್ರ ಎನಿ​ಸಿ​ಕೊಂಡಿ​ರುವ ರಶೀದ್‌ ಖಾನ್‌ ವಿಕೆಟ್‌ ಕೀಳು​ವಲ್ಲಿ ಹಿಂದೆ ಬಿದ್ದಿ​ರು​ವುದು ಸಹ ಸನ್‌ರೈಸ​ರ್ಸ್‌ಗೆ ತಲೆನೋವು ತಂದಿದೆ.

ಸಂಭವನೀಯ ಆಟಗಾರರ ಪಟ್ಟಿ:

ಡೆಲ್ಲಿ: ಪೃಥ್ವಿ ಶಾ, ಶಿಖರ್‌ ಧವನ್‌, ಶಿಮ್ರೊನ್‌ ಹೆಟ್ಮೇಯರ್‌, ಶ್ರೇಯಸ್‌ ಅಯ್ಯರ್‌ (ನಾಯಕ), ರಿಷಭ್‌ ಪಂತ್‌, ಮಾರ್ಕಸ್‌ ಸ್ಟೋಯ್ನಿಸ್‌, ಅಕ್ಷರ್‌ ಪಟೇಲ್‌, ಅಮಿತ್‌ ಮಿಶ್ರಾ, ಕಗಿಸೋ ರಬಾಡ, ಅನ್ರಿಚ್‌ ನೋಕಿ​ಯೆ, ಅವೇಶ್‌ ಖಾನ್‌.

ಹೈದ್ರಾಬಾದ್‌: ಡೇವಿಡ್‌ ವಾರ್ನರ್‌ (ನಾಯಕ), ಜಾನಿ ಬೇರ್‌ಸ್ಟೋ, ಮನೀಶ್‌ ಪಾಂಡೆ, ಸಾಹ, ವಿಲಿ​ಯ​ಮ್ಸನ್‌/ ನಬಿ, ರಶೀದ್‌ ಖಾನ್‌, ಅಭಿಷೇಕ್‌ ಶರ್ಮಾ, ಪ್ರಿಯಂ ಗರ್ಗ್‌, ಭುವನೇಶ್ವರ್‌ ಕುಮಾರ್‌, ಖಲೀಲ್‌ ಅಹ್ಮದ್‌, ಟಿ. ನಟರಾಜನ್‌.

ಪಿಚ್‌ ರಿಪೋರ್ಟ್‌

ಅಬುದಾಬಿ ಪಿಚ್‌ ಸ್ಪಿನ್‌ ಸ್ನೇಹಿಯಾಗಿದೆ. ಆದರೆ ಆರಂಭದಲ್ಲಿ ವೇಗಿಗಳಿಗೆ ಹೆಚ್ಚಿನ ಲಾಭ ದೊರಕಿದೆ. ಈಗಾಗಲೇ ಐಪಿಎಲ್‌ ಟೂರ್ನಿಯ 3 ಪಂದ್ಯಗಳು ಇಲ್ಲಿ ನಡೆದಿದ್ದು, ತಂಡವೊಂದು 180 ರಿಂದ 200 ರನ್‌ಗಳನ್ನು ಸೇರಿಸಬಲ್ಲದು. ಈ ಎಲ್ಲಾ ಪಂದ್ಯದಲ್ಲೂ ಬೌಲರ್‌ಗಳು ಪಂದ್ಯದ ಗತಿ ಬದಲಿಸಿದ್ದಾರೆ.

ಪಂದ್ಯ ಆರಂಭ: ರಾತ್ರಿ 7.30
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌
 

Follow Us:
Download App:
  • android
  • ios