Asianet Suvarna News Asianet Suvarna News

IPL 2020: ಸಿಎಸ್‌ಕೆ ಅಭ್ಯಾಸಕ್ಕೆ ಫ್ಯಾನ್ಸ್ ನಿರ್ಬಂಧಿಸಲು ಮುಂದಾದ ಸರ್ಕಾರ?

ಐಪಿಎಲ್ 2020ರ ಟೂರ್ನಿಗಾಗಿ ಚೆನ್ನೈ ಸೂಪರ್ ಕಿಂಗ್ಸ್ ಭರ್ಜರಿ ತಯಾರಿ ನಡೆಸುತ್ತಿದೆ. ಅಭ್ಯಾಸಕ್ಕೆ ಎಂ.ಎಸ್.ಧೋನಿ ಸೇರಿಕೊಂಡ ಬಳಿಕ ಅಭ್ಯಾಸ ನೋಡಲು ಚೆಪಾಕ್ ಮೈದಾನಕ್ಕೆ ಅಭಿಮಾನಿಗಳು ಆಗಮಿಸುತ್ತಿದ್ದಾರೆ. ಕ್ರೀಡಾಂಗಣ ಸಂಪೂರ್ಣ ಭರ್ತಿಯಾಗುತ್ತಿದೆ. ಇದೀಗ ಸಿಎಸ್‌ಕೆ ಎಲ್ಲಾ ಅಭಿಮಾನಿಗಳಿಗೆ ನಿರ್ಬಂಧ ಹೇರಲು ಮುಂದಾಗಿದೆ.

IPL 2020 Csk may restrict fans from practice due to coronavirus
Author
Bengaluru, First Published Mar 9, 2020, 7:15 PM IST

ಚೆನ್ನೈ(ಮಾ.09): ಚೆನ್ನೈ ಸೂಪರ್ ಕಿಂಗ್ಸ್ ಅಭ್ಯಾಸ ವೀಕ್ಷಿಸಲು ಅಭಿಮಾನಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ವಿಶೇಷವಾಗಿ ಎಂ.ಎಸ್.ಧೋನಿಯನ್ನು ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಇದೀಗ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸುತ್ತಿರುವುದು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ತಲೆನೋವಾಗಿದೆ. ಇತ್ತ ತಮಿಳುನಾಡು ಸರ್ಕಾರ ಅಭಿಮಾನಿಗಳಿಗೆ ನಿರ್ಬಂಧ ಹೇರಲು ಮುಂದಾಗಿದೆ.

ಇದನ್ನೂ ಓದಿ: 6,6,6,6,6 ಧೋನಿ ಸುನಾಮಿ, CSK ಅಭ್ಯಾಸದ MSD ಸಿಕ್ಸರ್ ಸುರಿಮಳೆ!

ನಿರ್ಬಂಧ ನಿರ್ಧಾರಕ್ಕೆ ಅಭಿಮಾನಿಗಳು ಹೆಚ್ಚುತ್ತಿರುವುದು ಕಾರಣವಲ್ಲ. ಬದಲಾಗಿದೆ. ತಮಿಳುನಾಡಿನಲ್ಲಿ ಕೊರೋನಾ ವೈರಸ್ ಪತ್ತೆಯಾಗಿದೆ. ಈ ಹಿನ್ನಲೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಸರ್ಕಾರದ ಅಂತಿಮ ನಿರ್ಧಾರಕ್ಕೆ ಕಾಯುತ್ತಿದೆ. ವೈರಸ್ ಹರಡದಂತೆ ಮನ್ನಚ್ಚರಿಕಾ ಕ್ರಮವಾಗಿ ಅಭಿಮಾನಿಗಳಿಗೆ ನಿರ್ಬಂಧ ಹೇರುವ ಸಾಧ್ಯತೆ ಹೆಚ್ಚಿದೆ. ಶೀಘ್ರದಲ್ಲೇ ಸರ್ಕಾರ, ಸಿಎಸ್‌ಕೆ ತಂಡದ ಜೊತೆ ಮಾತುಕತೆ ನಡೆಸಲಿದೆ.

ಧೋನಿ ಅಭ್ಯಾಸ ನೋಡಲು ಕ್ರೀಡಾಂಗಣ ಫುಲ್, ಬ್ಯಾರಿಕೇಡ್ ಹಾರಿದ ಅಭಿಮಾನಿ

ಸಿಎಸ್‌ಕೆ ಆಟಗಾರರಿಗೆ ಮ್ಯಾನೇಜ್ಮೆಂಟ್ ಖಡಕ್ ಸೂಚನೆ ನೀಡಿದೆ. ಅಭಿಮಾನಿಗಳ ಜೊತೆ ಕೈಕುಲುವ, ಸೆಲ್ಫಿ ಸೇರಿದಂತೆ ಯಾವುದೇ ಆತ್ಮೀಯತೆ ಉತ್ತಮವಲ್ಲ ಎಂದಿದೆ. ಇನ್ನು ಆಟಗಾರರು ತಂಗುವ ಹೊಟೆಲ್‌ಗಳಲ್ಲೂ ಎಚ್ಚರಿಕೆ ವಹಿಸಲಾಗಿದೆ. ಮಾರ್ಚ್ 29 ರಿಂದ 13ನೇ ಆವೃತ್ತಿ ಐಪಿಎಲ್ ಟೂರ್ನಿ ಆರಂಭವಾಗಲಿದೆ.

News In 100 Seconds: ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"

Follow Us:
Download App:
  • android
  • ios