ಜಮೈಕಾ(ಆ.25):  IPL ಟೂರ್ನಿಗಾಗಿ 8 ಫ್ರಾಂಚೈಸಿಗಳು ದುಬೈನಲ್ಲಿ ಬೀಡುಬಿಟ್ಟಿದೆ. ಭಾರತೀಯ ಕ್ರಿಕೆಟಿಗರು ಈಗಾಗಲೇ ದುಬೈಗೆ ತೆರಳಿ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಇತ್ತ ವಿದೇಶಿ ಕ್ರಿಕೆಟಿಗರೂ ಕೂಡ ದುಬೈನತ್ತ ಮುಖ ಮಾಡಿದ್ದಾರೆ. ಆದರೆ ಐಪಿಎಲ್ ಫ್ರಾಂಚೈಸಿ ಸೇರಿಕೊಳ್ಳೋ ಮೂಲಕ ಪ್ರತಿ ಕ್ರಿಕೆಟಿಗರು ಕೊರೋನಾ ಪರೀಕ್ಷೆ ಮಾಡಬೇಕಿದೆ. ನೆಗಟೀವ್ ವರದಿ ಇದ್ದರೆ ಮಾತ್ರ ಐಪಿಎಲ್ ಫ್ರಾಂಚೈಸಿ ಸೇರಿಕೊಳ್ಳಲು ಅವಕಾಶವಿದೆ. ನೆಗಟೀವ್ ವರದಿಯೊಂದಿಗೆ ಐಪಿಎಲ್ ಟೂರ್ನಿಗಾಗಿ ಕಾಯುತ್ತಿದ್ದ ವಿಂಡೀಸ್ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್, ಮತ್ತೆ ಎರಡು ಬಾರಿ ಕೊರೋನಾ ಪರೀಕ್ಷೆ ಮಾಡಿಸಿಕೊಂಡಿದ್ದಾರೆ.

ಉಸೇನ್ ಬೋಲ್ಟ್‌ಗೂ ವಕ್ಕರಿಸಿದ ಕೊರೋನಾ; ಕ್ರಿಸ್ ಗೇಲ್‌ಗೂ ಶುರುವಾಯ್ತು ಭೀತಿ..!.

ವಿಶ್ವದ ವೇಗದ ಓಟಗಾರ ಉಸೇನ್ ಬೋಲ್ಟ್ 34ನೇ ಹುಟ್ಟು ಹಬ್ಬ ಪಾರ್ಟಿಯಲ್ಲಿ ಕ್ರಿಸ್ ಗೇಲ್ ಸೇರಿದಂತೆ ಹಲವು ಸೆಲೆಬ್ರೆಟಿಗಳು ಪಾಲ್ಗೊಂಡಿದ್ದರು. ಪಾರ್ಟಿ ಮರುದಿನ ಉಸೇನ್ ಬೋಲ್ಟ್ ಕೊರೋನಾ ವರದಿ ಪ್ರಕಟಗೊಂಡಿದ್ದು, ನೆಗಟೀವ್ ಎಂಬ ರಿಪೋರ್ಟ್ ಬಂದಿದೆ. ಹೀಗಾಗಿ ಗೇಲ್ ಸೇರಿದಂತೆ ಪಾರ್ಟಿಯಲ್ಲಿ ಪಾಲ್ಗೊಂಡ ಸೆಲೆಬ್ರೆಟಿಗಳಲ್ಲಿ ಆತಂಕ ಮನೆ ಮಾಡಿತ್ತು. ಹೀಗಾಗಿ ಪಾರ್ಟಿ ಬಳಿಕ 2 ಬಾರಿ ಕ್ರಿಸ್ ಗೇಲ್ ಕೊರೋನಾ ವೈರಸ್ ಪರೀಕ್ಷೆ ಮಾಡಿಸಿದ್ದಾರೆ. ಇದೀಗ ಎರಡೂ ಪರೀಕ್ಷೆಯಲ್ಲಿ ನೆಗಟೀವ್ ಎಂದು ರಿಪೋರ್ಟ್ ಬಂದಿದೆ.

ಟೀಂ ಇಂಡಿಯಾ ಸ್ಪಿನ್ನರ್ ಚಹಲ್‌ರನ್ನು ಹೀನಾಯವಾಗಿ ಟ್ರೋಲ್‌ ಮಾಡಿದ ಗೇಲ್

ಐಪಿಎಲ್ ಟೂರ್ನಿಗಾಗಿ ದುಬೈಗೆ ತೆರಳುವ ಕ್ರಿಕೆಟಿಗರು 2 ನೆಗಟೀವ್ ಕೊರೋನಾ ವರದಿ ಇರಬೇಕು. ಹೀಗಾಗಿ ಕ್ರಿಸ್ ಗೇಲ್ ಬರ್ತ್‌ಡೇ ಪಾರ್ಟಿ ಬಳಿಕ 2 ಬಾರಿ ಕೊರೋನಾ ಟೆಸ್ಟ್ ಮಾಡಿಸಿಕೊಂಡಿದ್ದಾರೆ. ಇದೀಗ ನೆಗಟೀವ್ ವರದಿ ಹಿಡಿದು ದುಬೈಗೆ ಬಂದಿಳಿದಿದ್ದಾರೆ. 

ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಆಗಿರುವ ಕ್ರಿಸ್ ಗೇಲ್, ಭರ್ಜರಿ ಸಿಕ್ಸರ್‌ಗಳಿಂದಲೇ ಮನೆಮಾತಾಗಿದ್ದಾರೆ. ಸದ್ಯ ಕೊರೋನಾ ಭಯದಿಂದ ಮುದುಡಿರುವ ಜನತೆಗೆ ಗೇಲ್ ಸಿಕ್ಸರ್ ಅಬ್ಬರ  ಹೊಸ ಚೈತನ್ಯ ನೀಡಲಿದೆ.