ಕೋಲ್ಕೊತಾ(ಡಿ.21): ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಹರಾಜಿನಲ್ಲಿ ಮೂಲ ಬೆಲೆಗೆ ಕೋಲ್ಕತಾ ನೈಟ್‌ ರೈಡ​ರ್ಸ್ ಪಾಲಾಗಿರುವ 48 ವರ್ಷದ ಪ್ರವೀಣ್‌ ತಾಂಬೆ, 20ರ ಹರೆಯದ ಯುವಕನಂತೆ ತಂಡಕ್ಕೆ ಚೈತನ್ಯ ತುಂಬುವಲ್ಲಿ ನೆರವಾಗುತ್ತೇನೆ ಎಂದಿದ್ದಾರೆ. 

ಇದನ್ನೂ ಓದಿ: ಕರಾಚಿಯನ್ಸ್ ಲೀಗ್ ತಂಡ ಸೇರಿಕೊಂಡ ಪ್ರವೀಣ್ ತಾಂಬೆ!

ನನ್ನ ಅನುಭವವೇ ನನಗೆ ಶ್ರೀರಕ್ಷೆ. ಕೆಕೆಆರ್ ತಂಡದಲ್ಲಿ ಪಾಸಿಟಿವಿಟಿ ತರೋ ಮೂಲಕ ಈ ಬಾರಿಯ ಟ್ರೋಫಿ ಗೆಲುವಿಗೆ ಎಲ್ಲಾ ಪ್ರಯತ್ನ ಮಾಡುತ್ತೇನೆ  ಎಂದು ಹೇಳಿಕೊಂಡಿದ್ದಾರೆ. ಗುರುವಾರ ನಡೆದ ಹರಾಜಿನಲ್ಲಿ ಕೆಕೆಆರ್‌ ತಂಡ ಮುಂಬೈನ ಲೆಗ್‌ ಸ್ಪಿನ್ನರ್‌ ತಾಂಬೆ ಅವರನ್ನು .20 ಲಕ್ಷಕ್ಕೆ ಖರೀದಿಸಿತ್ತು. 

ಇದನ್ನೂ ಓದಿ: IPL 2020: ಹರಾಜಿನ ಬಳಿಕ KKR ತಂಡದ ಸಂಪೂರ್ಣ ವಿವರ!.

ಐಪಿಎಲ್‌ನಲ್ಲಿ ತಾಂಬೆ ರಾಜಸ್ಥಾನ ರಾಯಲ್ಸ್‌ ತಂಡದ ಪರ ಆಡಿದ್ದರು. 42ರ ಹರೆಯಲ್ಲಿ ತಾಂಬೆ ಪ್ರತಿಭೆ ವಿಶ್ವಮಟದಲ್ಲಿ ಸದ್ದು ಮಾಡಿತ್ತು. ರಣಜಿ ಹಾಗೂ ದೇಸಿ ಟೂರ್ನಿಗಳಲ್ಲಿ ಆಡುತ್ತಿದ್ದ ತಾಂಬೆ ಅವರನ್ನು ರಾಹುಲ್ ದ್ರಾವಿಡ್ ನಾಯಕತ್ವದ ರಾಜಸ್ಥಾನ ರಾಯಲ್ಸ್ ಗುರುತಿಸಿತ್ತು. ಸದ್ಯ ತಾಂಬೆಗೆ  18 ವರ್ಷದ ಮಗನಿದ್ದಾನೆ.