7 ವರ್ಷದ ಕ್ರಿಕೆಟಿಗ ಪ್ರವೀಣ್ ತಾಂಬೆ ಇದೀಗ ಮತ್ತೆ ಸ್ಪಿನ್ ಮೋಡಿ ಮಾಡಲು ಸಜ್ಜಾಗಿದ್ದಾರೆ. 41ನೇ ವಯಸ್ಸಿಗೆ ಐಪಿಲ್ ಟೂರ್ನಿಯಲ್ಲಿ ಸ್ಥಾನ ಗಿಟ್ಟಿಸಿದ ಪ್ರವೀಣ್ ತಾಂಬೆ ಇದೀಗ 47ನೇ ವಯಸ್ಸಿನಲ್ಲಿ ವಿದೇಶಿ ಲೀಗ್‌ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. 

ಮುಂಬೈ(ಅ.31): ಐಪಿಎಲ್ ಟೂರ್ನಿಯಿಂದ ಬೆಳಕಿಗೆ ಬಂದ ಹಿರಿಯ ಕ್ರಿಕೆಟಿಗ ಪ್ರವೀಣ್ ತಾಂಬೆ ಮಾಡಿದ ಮೋಡಿ ಎಲ್ಲರಿಗೂ ಗೊತ್ತೆ ಇದೆ. 2013ರ ಐಪಿಎಲ್ ಟೂರ್ನಿಯಲ್ಲಿ ಪ್ರವೀಣ್ ತಾಂಬೆ ಸ್ಪಿನ್ ಮ್ಯಾಜಿಕ್ ಮೂಲಕ 28 ವಿಕೆಟ್ ಕಬಳಿಸಿದ್ದರು.

41ನೇ ವಯಸ್ಸಿಗೆ ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಮಿಂಚಿದ ಪ್ರವೀಣ್ ತಾಂಬೆ ಬಳಿಕ ಅವಕಾಶ ಗಿಟ್ಟಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇದೀಗ 47ರ ಹರೆಯದಲ್ಲಿ ಪ್ರವೀಣ್ ತಾಂಬೆ ಟಿ10 ಲೀಗ್ ಟೂರ್ನಿ ಆಡಲು ಸಜ್ಜಾಗಿದ್ದಾರೆ. 

ನವೆಂಬರ್ 23 ರಿಂದ ಆರಂಭಗೊಳ್ಳಲಿರುವ 2ನೇ ಆವೃತ್ತಿಯ ಟಿ10 ಕ್ರಿಕೆಟ್ ಲೀಗ್ ಟೂರ್ನಿಯಲ್ಲಿ ಪ್ರವೀಣ್ ತಾಂಬೆ ಕರಾಚಿಯನ್ಸ್ ತಂಡ ಸೇರಿಕೊಂಡಿದ್ದಾರೆ. ಶೇನ್ ವಾರ್ನ್ ಸೇರಿದಂತೆ ಹಲವು ದಿಗ್ಗಜ ಕ್ರಿಕೆಟಿಗರನ್ನೊಳಗೊಂಡ ತಂಡದಲ್ಲಿ ಇದೀಗ ಪ್ರವೀಣ್ ತಾಂಬೆ ಕೂಡ ಕಣಕ್ಕಿಳಿಯುತ್ತಿದ್ದಾರೆ. ಪ್ರವೀಣ್ ತಾಂಬೆ ಆಯ್ಕೆಯನ್ನ ಕರಾಚಿಯನ್ ತಂಡ ಟ್ವೀಟ್ ಮೂಲಕ ಬಹಿರಂಗ ಪಡಿಸಿದೆ. 

Scroll to load tweet…