ದುಬೈ, (ಅ.30): ಐಪಿಎಲ್-2020 ಟೂರ್ನಿಯಲ್ಲಿ ಕಿಂಗ್ಸ್ ಇಲವೆನ್ ಪಂಜಾಬ್ ತಂಡ  ಆಡಿದ ಮೊದಲ ಪಂದ್ಯದಲ್ಲಿ ಸೋತು 2ನೇ ಮ್ಯಾಚ್‌ನಲ್ಲಿ ಗೆಲುವು ಕಂಡಿತ್ತು,  ನಂತರ ಆಡಿದ 5 ಪಂದ್ಯಗಳಲ್ಲಿ ಸೋಲು ಅನುಭವಿಸಿತ್ತು. 

ಇದೀಗ ಸೋಲಿನ ಸುಳಿಯಿಂದ ಹೊರಬಂದಿರುವ ಕಿಂಗ್ಸ್ ಪಂಜಾಬ್ ಸತ್ತ ಐದು ಪಂದ್ಯಗಳಲ್ಲಿ ಗೆಲುವು ಸಾಧಿಸುವ ಮೂಲಕ ಪಾಯಿಂಟ್ಸ್ ಪಟ್ಟಿಯಲ್ಲಿ 1 ಅಂಕಗಳೊಂದಿಗೆ 4ನೇ ಸ್ಥಾನಕ್ಕೇರಿದೆ. ಅಲ್ಲದೇ ಪ್ಲೇ ಆಫ್‌ ಕನಸು ಕಾಣುತ್ತಿದೆ. ಇನ್ನು ಐದು ಸೋಲಿನ ನಂತರ ಐದು ಪಂದ್ಯ ಗೆದ್ದ ಪಂಜಾಬ್ ಪುಟಿದೆದ್ದಿದ್ದು ಹೇಗೆ? ಎನ್ನುವುದು ಇಲ್ಲಿದೆ.

ಸೋತ್ರೆ ಟೂರ್ನಿಯಿಂದ ಔಟ್, ಗೆದ್ರೆ ಫ್ಲೇ ಆಫ್ ಚಾನ್ಸ್; KXIP vs RR ನಿರ್ಣಾಯಕ ಫೈಟ್!

ಯುನಿವರ್ಸಲ್ ಬಾಸ್ ಎಂಟ್ರಿ

ಹೌದು...ಸತತ ಸೋಲಿನಿಂದ ಕಂಗೆಟ್ಟಿದ್ದ ಕಿಂಗ್ಸ್ ಇಲವೆನ್ ಪಂಜಾಬ್‌ಗೆ ಯುನಿವರ್ಸಲ್ ಬಾಸ್ , ಸ್ಫೋಟಕ ಬ್ಯಾಟ್ಸ್‌ಮನ್ ಆಗಮನದಿಂದ ಅದರಷ್ಟ ಕುಲಾಯಿಸಿದೆ ಎನ್ನಬಹುದು. ಸೋತು ಸುಣ್ಣವಾಗಿದ್ದ ರಾಹುಲ್ ಪಡೆ ಟೂರ್ನಿಯಿಂದ ಹೊರಬೀಳುವ ಹಂತದಲ್ಲಿತ್ತು. ಆದ್ರೆ, ಕ್ರಿಸ್‌ ಗೇಲ್ ಆಗಮನದಿಂದ ಪಂಜಾಬ್‌ ತಂಡದ ಸ್ಥಿತಿ ಬದಲಾಗಿದೆ.ಯಾಕಂದ್ರೆ, ಐಪಿಎಲ್ 2020ರಲ್ಲಿ  ಎಂಟು ಪಂದ್ಯಗಳ ನಂತರ  11ರ ಬಳಗದಲ್ಲಿ ಸೇರಿಕೊಂಡ ಗೇಲ್ ಒನ್‌ಡೌನ್ ಬಂದು ತಂಡದ ರನ್ ವೇಗ ಹೆಚ್ಚುಸುತ್ತಿದ್ದಾರೆ. ಕ್ರಿಸ್ ಗೇಲ್ ಆಡುವ ಬಳಗಕ್ಕೆ ಸೇರ್ಪಡೆಗೊಂಡ ಬಳಿಕ ಕಾಕತಾಳೀಯ ಎಂಬಂತೆ ಎಲ್ಲ ಪಂದ್ಯಗಳಲ್ಲಿ ಗೆಲುವು ಕಾಣುತ್ತಾ ಸಾಗಿದೆ.  

ನಿಕೋಲಸ್‌ ಪೂರನ್‌ ಬ್ಯಾಟಿಂಗ್

ಪ್ರಸಕ್ತ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಅದ್ಭುತ ಲಯದಲ್ಲಿರುವ ಸ್ಟಾರ್‌ ಬ್ಯಾಟ್ಸ್‌ಮನ್‌ ನಿಕೋಲಸ್‌ ಪೂರನ್‌ ಮಿಡಲ್ ಆರ್ಡರ್‌ನಲ್ಲಿ ಪರಿಣಾಮಕಾರಿ ಬ್ಯಾಟಿಂಗ್‌ನಿಂದ ತಂಡದ ರನ್ ರೇಟ್ ಹೆಚ್ಚಿಸುತ್ತಿದ್ದಾರೆ. ಅಲ್ಲದೇ ಅವರು ಮ್ಯಾಚ್‌ ವಿನ್ನಿಂಗ್ ಪ್ರದರ್ಶನ ಕಿಂಗ್ಸ್ ಇಲೆವೆನ್‌ ಪಂಜಾಬ್‌ ತಂಡ ಸೋಲಿನಿಂದ ಪುಟಿದೇಳಲು ಒಂದು ಪ್ರಮುಖ ಕಾರಣವಾಗಿದೆ. 

ಲಯದಲ್ಲಿ ವೇಗದ ಬೌಲರ್ಸ್

ಯೆಸ್...ತಂಡ ಗೆಲ್ಲಬೇಕಾದರೆ ಕೇವಲ ಬ್ಯಾಟಿಂಗ್ ಜೊತೆಗೆ ಬೌಲಿಂಗ್‌ನಲ್ಲೂ ಸ್ಟ್ರಾಂಗ್ ಇರಬೇಕು. ಅದು ಕಿಂಗ್ಸ್ ಪಂಜಾಬ್ ತಂಡಕ್ಕಿದೆ. ಮೊಹಮ್ಮದ್ ಶಮಿ ಅವರಿಗೆ ಅರ್ಷ್‌ದೀಪ್ ಸಿಂಗ್ ಸಾಥ್ ಕೊಡುತ್ತಿದ್ದು, ಡೆತ್ ಓವರ್‌ಗಳಲ್ಲೂ  ಶಿಸ್ತು ಬದ್ಧ ಬೌಲಿಂಗ್ ದಾಳಿ ಮಾಡುತ್ತಿದ್ದಾರೆ. ಸಂಕಷ್ಟದ ಸಮಯದಲ್ಲಿ ತಮ್ಮ ಕರಾರುವಕ್ಕಾದ ಬೌಲಿಂಗ್‌ನಿಂದ ಪಂಜಾಬ್ ಗೆಲುವಿನ ಟ್ರ್ಯಾಕ್‌ಗೆ ಮರಳಿದೆ ಅಂತ ಹೇಳಬಹುದು.

ಕೈ ಹಿಡಿದ ಸ್ಪಿನ್ ಜಾದು

ಯುವ ಸ್ಪಿನ್ನರ್‌ಗಳಾದ ಮುರುಗನ್ ಅಶ್ವಿನ್ ಹಾಗೂ ರವಿ ಬಿಷ್ಣೊಯಿ ಮಾಜಿ ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ಅವರ ಗರಡಿಯಲ್ಲಿ ಚೆನ್ನಲಾಗಿ ಪಳಗುತ್ತಿದ್ದು, ಅವರ ಸಲಹೆಯಂತೆ ಈ ಇಬ್ಬರು ಸ್ಪಿನ್ನರ್‌ಗಳು ಸುಧಾರಿತ ಪ್ರದರ್ಶನ ಬರುತ್ತಿದೆ. ಇದು ತಂಡಕ್ಕೆ ಆಸರೆಯಾಗಿದೆ.

ಬೌಲರ್ ಆದ ಮ್ಯಾಕ್ಸ್‌ವೆಲ್

ಗ್ಲೆನ್ ಮ್ಯಾಕ್ಸ್‌ವೆಲ್ ಪಂಜಾಬ್ ತಂಡದ ಮತ್ತೋರ್ವ ಸ್ಫೋಟಕ ಬ್ಯಾಟ್ಸ್‌ಮನ್. ಆದ್ರೆ, ಅವರ ಬ್ಯಾಟ್‌ನಿಂದ ರನ್ ಬರುತ್ತಿಲ್ಲ.  ಕಳಪೆ ಫಾರ್ಮ್‌ನಲ್ಲಿದ್ರೂ ನಾಯಕ ರಾಹುಲ್,ಮ್ಯಾಕ್ಸ್‌ವೆಲ್‌ ಅವರನ್ನ  11ರ ಬಳಗದಲ್ಲಿ ಆಡಿಸುತ್ತಾ ಬಂದಿದ್ದಾರೆ. ಯಾಕಂದ್ರೆ ಅವರ ಬ್ಯಾಟಿಂಗ್ ಬದಲಿಗೆ ಬೌಲಿಂಗ್‌ನಲ್ಲಿ ಮಿಂಚುತ್ತಿದ್ದಾರೆ.