ಕಳೆದ 12 ವರ್ಷಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ ಅನ್ನೋ ಕೂರಗು ಇದೆ. ಆದರೆ ಈ ಬಾರಿ ಪ್ರಶಸ್ತಿ ಗೆಲ್ಲಲಿ ಎಂದು ಅಭಿಮಾನಿಗಳು ದೇವರಲ್ಲಿ ಪ್ರಾರ್ಥನೆ ಮಾಡಿದ್ದಾರೆ. ಅಭಿಮಾನಿಗಳ ವಿಶೇಶ ಪ್ರಾರ್ಥನೆ ಇದೀಗ ವೈರಲ್ ಆಗಿದೆ.

ಮೈಸೂರು(ಮಾ.09): ಮಾರಿ ಕಣ್ಣು, ನಾಯಿ ಕಣ್ಣು, ನರಿ ಕಣ್ಣು ಯಾವುದೇ ಕಣ್ಣಿದ್ದರೂ ಆರ್‌ಸಿಬಿ ತಾಗದಿರಲಿ. ಆರ್‌ಸಿಬಿಗೆ ಜೈ, ತಾಯಿ ಚಾಮುಂಡಿ ಅಮ್ಮ ನಮಗೆ ಕೊಡಬೇಡ ಕೈ ಎಂದು ರಾಯಲ್ ಚಾಲೆಂಜರ್ಸ್ ಮೈಸೂರು ಅಭಿಮಾನಿಗಳು ಚಾಮುಂಡಿ ಅಮ್ಮನ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ.

IPL 2020: ಆರ್‌ಸಿಬಿ ತಂಡದ ಸಹಾಯಕ ಸಿಬ್ಬಂದಿಯ ಸಂಪೂರ್ಣ ಲಿಸ್ಟ್!

RCB ಅಭಿಮಾನಿಗಳ ಗುಂಪು ಚಾಮಂಡಿ ಅಮ್ಮ ದೇವಸ್ಥಾನಕ್ಕೆ ತೆರಳಿ ಆರ್‌ಸಿಬಿ ಧ್ವಜಕ್ಕೆ ಪೂಜೆ ಸಲ್ಲಿಸಿದ್ದಾರೆ. ನಾನು ಕೆಲಸ್ಸಾಗಿ ಬೇಡಲ್ಲ, ಹಳೇ ಹುಡುಗಿ ವಾಪಸ್ ಬರಲಿ ಎಂದು ಕೇಳಿಕೊಳ್ಳಲ್ಲ. ಆದರೆ ಈ ಬಾರಿ ಆರ್‌ಸಿಬಿ ಪ್ರಶಸ್ತಿ ಗೆಲ್ಲಲಿ ಎಂದು ಬೇಡುತ್ತಿದ್ದೇನೆ. ಈ ಬಾರಿ ಆರ್‌ಸಿಬಿ ಪ್ರಶಸ್ತಿ ಗೆಲ್ಲುವ ಹಾಗೆ ಮಾಡು ಎಂದು ಅಭಿಮಾನಿಗಳ ಗುಂಪು ಪಾರ್ಥನೆ ಸಲ್ಲಿಸಿದೆ.

Scroll to load tweet…

ಮತ್ತೊಮ್ಮೆ ಅಭಿಮಾನಿಗಳ ಹೃದಯಗೆದ್ದ RCB..!

ಮಾಡಿಲ್ಲ ತಪ್ಪು ಈ ಸಲ ಬರ್ಬೇಕು ಕಪ್, ಜೈ ಆರ್‌ಸಿಬಿ ಎಂದು ಅಭಿಮಾನಿಗಳ ಗುಂಪು ತಂಡದ ಧ್ವಜಕ್ಕೆ ಆರತಿ ಎತ್ತಿ ಕಾಯಿ ಒಡೆದಿದ್ದಾರೆ. ಈಗಾಗಲೇ ಅಭಿಮಾನಿಗಳು ಬೆಂಗಳೂರು ತಂಡ ಪ್ರಶಸ್ತಿ ಗೆಲ್ಲಲಿ ಎಂದು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಇತ್ತ ಬಲಿಷ್ಠ ತಂಡ ಕಟ್ಟಿರುವ ಆರ್‌ಸಿಬಿ ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದೆ. 

ಮಾರ್ಚ್ 29 ರಿಂದ ಐಪಿಎಲ್ ಟೂರ್ನಿ ಆರಂಭಗೊಳ್ಳಲಿದೆ. ಆದರೆ ಕೊರೋನಾ ವೈರಸ್ ಭೀತಿ ಐಪಿಎಲ್‌ಗೂ ಕಾಡುತ್ತಿದೆ. ಆದರೆ ವೇಳಾಪಟ್ಟಿ ಪ್ರಕಾರ ಐಪಿಎಲ್ ಟೂರ್ನಿ ಆಯೋಜನೆಯಾಗಲಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸ್ಪಷ್ಟಪಡಿಸಿದ್ದಾರೆ. 

News In 100 Seconds: ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"