ದುಬೈ(ಅ.05): ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಹೋರಾಟ ಈಗಾಗಲೇ ಹಲವು ಕುತೂಹಲಗಳಿಗೆ ಕಾರಣವಾಗಿದೆ. ಇದರ ನಡುವೆ ಡೆಲ್ಲಿ ಕ್ಯಾಪಿಟಲ್ಸ್ ವಿಶೇಷ ಜರ್ಸಿ ಮೂಲಕ ಕಣಕ್ಕಿಳಿಯುತ್ತಿದೆ ಹಲವು ಬಣ್ಣಗಳ ಈ ಜರ್ಸಿ ಮೂಲಕ ಭಾರತದ ವಿವಿಧತೆಯಲ್ಲಿ ಏಕತೆಯನ್ನು ಸಾರಲಿದೆ. ಇಷ್ಟೇ ಅಲ್ಲ ಫ್ರಾಂಚೈಸಿ ಮಾಲೀಕತ್ವ ಹೊಂದಿರು JSW ಸಹ ಸಂಸ್ಥೆಯಾದ JSW ಪೈಂಟ್ಸ್ ಪ್ರಮೋಶನ್ ಮಾಡಲಿದೆ.

ಡೆಲ್ಲಿ ವಿರುದ್ಧ ಹೋರಾಟಕ್ಕೆ ಬದಲಾವಣೆ ಮಾಡ್ತಾರಾ ಕೊಹ್ಲಿ? ಇಲ್ಲಿದೆ ಸಂಭವನೀಯ ತಂಡ!

ಭಾರತದಲ್ಲಿ ಕಳೆದ ಹಲವು ವರ್ಷಗಳಿಂದ JSW ಕ್ರೀಡೆಗೆ ನೆರವು ನೀಡುತ್ತಿದೆ. ಹಲವು ಕ್ರೀಡೆ ಹಾಗೂ ಕ್ರೀಡಾಪಟು, ತಂಡಗಳಿಗೆ JSW ಪ್ರಾಯೋಜಕತ್ವ ನೀಡುವ ಮೂಲಕ ಭಾರತದ ಕ್ರೀಡಾ ಪ್ರತಿಭಗಳಿಗೆ ವೇದಿಕೆಯಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ಜೊತೆ ಪ್ರಾಯೋಜಕತ್ವ ಒಪ್ಪಂದದಲ್ಲಿರುವ JSW ಪೈಂಟ್ಸ್ ಇದೀಗ ವಿಶೇಷವಾಗಿ ಹಲವು ಬಣ್ಣಗಳ ಜರ್ಸಿಯನ್ನು ಡೆಲ್ಲಿ ತಂಡಕ್ಕೆ ನೀಡಿದೆ.

IPL 2020: ಡೆಲ್ಲಿ ಕ್ಯಾಪಿಟಲ್ಸ್‌ ಮೇಲಿಂದು ಸವಾರಿ ಮಾಡುತ್ತಾ RCB..?

ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಈ ಪಂದ್ಯಕ್ಕೆ ಡೆಲ್ಲಿ ತಂಡ ವಿನೂತನ ಜರ್ಸಿ ತೊಡಲಿದೆ. ಈ ಜರ್ಸಿ ಬ್ರ್ಯಾಂಡ್ ಪ್ರಮೋಶನ್ ಮಾತ್ರವಲ್ಲ, ಜೊತೆಗೆ JSW ಕ್ರೀಡಾ ಸೇವೆಗೆ ಗೌರವ ಸೂಚಿಸುವ ಕಾರ್ಯವಾಗಿದೆ ಎಂದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಿಇಒ ಧೀರಜ್ ಮಲ್ಹೋತ್ರ ಹೇಳಿದ್ದಾರೆ.