ಕೋಲ್ಕತಾ(ಡಿ.19): 13ನೇ ಆವೃತ್ತಿ ಐಪಿಎಲ್ ಟೂರ್ನಿ ಆರಂಭಕ್ಕೆ ಇನ್ನು ಕೆಲ ತಿಂಗಳು ಬಾಕಿ ಇದೆ. ಆದರೆ ಐಪಿಎಲ್ ಜ್ವರ ಈಗಲೇ ಆರಂಭಗೊಂಡಿದೆ. ಇದಕ್ಕೆ ಕಾರಣ ಆಟಗಾರರ ಹರಾಜು. ಐಪಿಎಲ್ ಆಕ್ಷನ್‌ನಿಂದ 2020ರ ಐಪಿಎಲ್ ಟೂರ್ನಿಗೆ ಈಗಲೇ ಅಭಿಮಾನಿಗಳು ತಯಾರಿ ನಡೆಸುತ್ತಿದ್ದಾರೆ. ಇದರ ಬೆನಲ್ಲೇ ಬಿಸಿಸಿಐ ಐಪಿಎಲ್ ವೇಳಾಪಟ್ಟಿ ಪ್ರಕಟಿಸಲು ಮುಂದಾಗಿದೆ.

ಇದನ್ನೂ ಓದಿ: IPL 2020: ಹರಾಜಿಗೆ ಮುನ್ನ ಮತ್ತೆ 6 ಆಟಗಾರರ ಸೇರ್ಪಡೆ

ಬಿಸಿಸಿಐ ಮೂಲಗಳ ಪ್ರಕಾರ 2020ರ ಐಪಿಎಲ್ ಟೂರ್ನಿ 2019ರ ಮಾರ್ಚ್ 28 ರಿಂದ ಆರಂಭಗೊಳ್ಳಲಿದ್ದು, ಮೇ 24ಕ್ಕೆ ಅಂತ್ಯವಾಗಲಿದೆ. ಈಗಾಗಲೇ 8 ಫ್ರಾಂಚೈಸಿಗಳ ಜೊತೆ ಐಪಿಎಲ್ ಗರ್ವನಿಂಗ್ ಕೌನ್ಸಿಲ್ ಚರ್ಚೆ ನಡೆಸಿದೆ. ದಿನಾಂಕ ಕುರಿತು ಮಾಹಿತಿ ನೀಡಿದೆ. ಫ್ರಾಂಚೈಸಿಗಳು ಕೂಡ ಬಿಸಿಸಿಐ ದಿನಾಂಕಕ್ಕೆ ಗ್ರೀನ್ ಸಿಗ್ನಲ್ ನೀಡಿದೆ ಅನ್ನೋ ಮಾಹಿತಿ ಹೊರಬಿದ್ದಿದೆ.

ಇದನ್ನೂ ಓದಿ: ಇಂದು IPL ಆಟಗಾರರ ಹರಾಜು; ಯಾರಿಗೆ ಸಿಗುತ್ತೆ ಜಾಕ್‌ಪಾಟ್..?.

2020ರ ಐಪಿಎಲ್ ಟೂರ್ನಿಯಲ್ಲಿ ನೋ ಬಾಲ್ ಅಂಪೈರ್ ಸೇರಿದಂತೆ ಹಲವು ಹೊಸ ನಿಯಮಗಳು ಪರಿಚಯಿಸಲಾಗುತ್ತಿದೆ. ವಿಶೇಷವಾಗಿ ಫುಟ್ಬಾಲ್ ಟೂರ್ನಿಲ್ಲಿರುವಂತೆ ಲೋನ್ ಮೂಲಕ ಸರಣಿ ನಡುವೆ ಮತ್ತೊಂದು ತಂಡಕ್ಕೆ ವರ್ಗಾವಣೆ ಪ್ರಕ್ರಿಯೆಗೂ ಚಾಲನೆ ನೀಡುವ ಸಾಧ್ಯತೆ ಇದೆ. ಮಿಡ್ ವೇ ಲೋನ್ ಮೂಲಕ, ಟೂರ್ನಿಯ ಮಧ್ಯಭಾಗದಲ್ಲಿ ಒಂದು ತಂಡದಿಂದ ಮತ್ತೊಂದು ತಂಡಕ್ಕೆ ಆಟಗಾರರನ್ನು ವರ್ಗಾಣವವಣೆ ಆಗಲು ಅವಕಾಶವಿದೆ.