ಮುಂಬೈ(ಮಾ.22): 13ನೇ ಆವೃತ್ತಿಯ ಐಪಿಎಲ್‌ ಭವಿಷ್ಯನ್ನು ಮಾ.24ರಂದು ಬಿಸಿಸಿಐ ನಿರ್ಧರಿಸಲಿದೆ ಎಂದು ಮಾಧ್ಯಮಗಳು ವರದಿ ಪ್ರಕಟಿಸಿವೆ. 

IPL 2020ಗೆ ತಯಾರಿ ನಡೆಸುತ್ತಿರುವ ಬಿಸಿಸಿಐಗೆ ಶಾಕ್ ನೀಡಿದ ಕೇಂದ್ರ ಕ್ರೀಡಾ ಸಚಿವ ರಿಜಿಜು!

ಕೊರೋನಾ ಸೋಂಕಿನ ಭೀತಿಯಿಂದ ಏ.15ರ ವರೆಗೂ ಟೂರ್ನಿಯನ್ನು ಅಮಾನತುಗೊಳಿಸಿರುವ ಬಿಸಿಸಿಐ, ತಮ್ಮ ಮುಂದಿರುವ ಆಯ್ಕೆಗಳನ್ನು ಪರಿಶೀಲಿಸುತ್ತಿದೆ. ಸೋಂಕು ವ್ಯಾಪಕವಾಗಿ ಹರಡುತ್ತಿರುವ ಕಾರಣ, ಪಂದ್ಯಾವಳಿ ನಡೆಸುವುದು ಅಸಾಧ್ಯ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎನ್ನುವುದನ್ನು ಅರಿತಿರುವ ಬಿಸಿಸಿಐ, ಮಾ.24ಕ್ಕೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಎಲ್ಲಾ 8 ತಂಡಗಳ ಮಾಲಿಕರ ಜತೆ ಸಭೆ ನಡೆಸಲಿದೆ. ಸಭೆಯಲ್ಲಿ ಟೂರ್ನಿ ಭವಿಷ್ಯ ನಿರ್ಧಾರವಾಗಲಿದೆ ಎನ್ನಲಾಗಿದೆ.

ಐಪಿಎಲ್‌ ನಡೆದರೂ ವಿದೇಶಿ ಆಟಗಾರರು ಬರೋದಿಲ್ಲ?

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ 2020ರ ಐಪಿಎಲ್ ಟೂರ್ನಿಯು ಮಾರ್ಚ್ 29ರಿಂದ ಆರಂಭವಾಗಬೇಕಿತ್ತು. ಸಾಮಾನ್ಯವಾಗಿ ಬಿಸಿಸಿಐ ಸಭೆಗಳು ಹೋಟೆಲ್‌ಗಳಲ್ಲಿ ನಡೆಯುತ್ತವೆ. ಆದರೆ ಕೊರೋನಾ ಭೀತಿಯಿಂದಾಗಿ ಐಪಿಎಲ್ ಆಡಳಿತ ಸಮಿತಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ಫ್ರಾಂಚೈಸಿಗಳ ಜತೆ ಟೂರ್ನಿ ನಡೆಯಬೇಕೇ? ಬೇಡವೇ ಎನ್ನುವುದರ ಕುರಿತು ಚರ್ಚಿಸಲಿದೆ ಎನ್ನಲಾಗಿದೆ.