ಜೋಹಾನ್ಸ್‌ಬರ್ಗ್[ಡಿ.21]: ಅದೇನೋ ಗೊತ್ತಿಲ್ಲ ಕಣ್ರೀ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೂ ಐಪಿಎಲ್ ಕಪ್’ಗೂ ಆಗಿ ಬರೊಲ್ಲ ಅಂತ ಕಾಣುತ್ತೆ. ಕಳೆದ 12 ವರ್ಷಗಳಿಂದ ಐಪಿಎಲ್ ಕಪ್ RCB ಪಾಲಿಗೆ ಗಗನ ಕುಸುಮವಾಗಿಯೇ ಉಳಿದಿದೆ. 

 ಹರಾಜಿನ ಬೆನ್ನಲ್ಲೇ ಉಳಿದ ತಂಡಗಳಿಗೆ ಎಚ್ಚರಿಕೆ ಕೊಟ್ಟ ಕೊಹ್ಲಿ!

ಮೂರು ಬಾರಿ ಐಪಿಎಲ್ ಟೂರ್ನಿಯಲ್ಲಿ ಬೆಂಗಳೂರು ತಂಡ ಫೈನಲ್ ಪ್ರವೇಶಿಸಿದ್ದರೂ, ಕಪ್ ಗೆಲ್ಲಲು ಸಾಧ್ಯವಾಗಿಲ್ಲ. ಆದರೀಗ 13ನೇ ಆವೃತ್ತಿಯಲ್ಲಿ ನಮ್ಮ ಬೆಂಗಳೂರು ತಂಡ ಕಪ್ ಗೆಲ್ಲುತ್ತೆ ಅನ್ನೋದು ಅಸಂಖ್ಯಾತ RCB ಅಭಿಮಾನಿಗಳ ನಂಬಿಕೆಯಾಗಿದೆ. ಹೀಗಿರುವಾಗಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ವೇಗಿ ಡೇಲ್ ಸ್ಟೇನ್, ತಮ್ಮ ತಂಡದ ಪರ ಬೌಲಿಂಗ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣವಾದ ಟ್ವಿಟರ್’ನಲ್ಲಿ ಅನಿಶ್ ಕಿಶೋರ್ ಎನ್ನುವವರು, ಮುಂಬರುವ ಆವೃತ್ತಿಯಲ್ಲಾದರೂ RCB ಕಪ್ ಗೆಲ್ಲುತ್ತಾ ಎಂದು ಸ್ಟೇನ್ ಅವರನ್ನು ಪ್ರಶ್ನಿಸಿದ್ದಾರೆ.

RCB ಸೇರಿದ ಕನ್ನಡಿಗ ಪವನ್ ದೇಶಪಾಂಡೆ ಜೊತೆ ಸುವರ್ಣನ್ಯೂಸ್.ಕಾಂ Exclusive ಮಾತು!

ಇದಕ್ಕೆ ಡೇಲ್ ಸ್ಟೇನ್ ನಾನಿದ್ದೀನಿ ಅಲ್ವಾ, ಹಾಗಾಗಿ ಈ ಸರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಪ್ ಗೆಲ್ಲಲಿದೆ ಎಂದು ಉತ್ತರಿಸಿದ್ದಾರೆ.

ದಕ್ಷಿಣ ಆಫ್ರಿಕಾದ ಅನುಭವಿ ವೇಗಿ ಡೇಲ್ ಸ್ಟೇನ್ ಇದುವರೆಗೂ 92 ಐಪಿಎಲ್ ಪಂದ್ಯಗಳನ್ನಾಡಿ 96 ವಿಕೆಟ್ ಕಬಳಿಸಿದ್ದಾರೆ. ಕಳೆದ ಆವೃತ್ತಿಯಲ್ಲಿ ಸತತ ಆರು ಪಂದ್ಯಗಳನ್ನು ಸೋತು ಸುಣ್ಣವಾಗಿದ್ದ ರಾಯಲ್ ಚಾಲೆಂಜರ್ಸ್ ತಂಡಕ್ಕೆ ಟೂರ್ನಿಯ ಮಧ್ಯದಲ್ಲಿ ಸೇರಿಕೊಂಡಿದ್ದರು. ಡೇಲ್ ಸ್ಟೇನ್ RCB ಸೇರಿಕೊಂಡ ಬಳಿಕ 3 ಪಂದ್ಯಗಳನ್ನು ಗೆದ್ದು ಪ್ಲೇ ಆಫ್ ಆಸೆ ಜೀವಂತವಾಗಿರಿಸಿಕೊಂಡಿತ್ತು. ಆದರೆ ಭುಜದ ನೋವಿನ ಸಮಸ್ಯೆಯಿಂದಾಗಿ ಡೇಲ್ ಸ್ಟೇನ್ ಐಪಿಎಲ್’ನಿಂದ ಹೊರಬಿದ್ದಿದ್ದರು. ಅದಾದ ಬಳಿಕ ಏಕದಿನ ವಿಶ್ವಕಪ್’ನಿಂದಲೂ ಹೊರಗುಳಿಯಬೇಕಾಯಿತು. ಹೀಗಾಗಿ RCB ಸ್ಟೇನ್ ಅವರನ್ನು ಕೈಬಿಟ್ಟಿತ್ತು. ಆದರೆ ಡಿಸೆಂಬರ್ 19ರಂದು ಕೋಲ್ಕತಾದಲ್ಲಿ ನಡೆದ ಐಪಿಎಲ್ ಆಟಗಾರರ ಹರಾಜಿನಲ್ಲಿ ಮತ್ತೆ RCB ತಂಡ ಮೂಲ ಬೆಲೆ 2 ಕೋಟಿಗೆ ಸ್ಟೇನ್ ಅವರನ್ನು ಖರೀದಿಸಿದೆ.