Asianet Suvarna News Asianet Suvarna News

ಮಕ್ಕಳಿಗೆ ಕೊರೋನಾ ಲಸಿಕೆ: ಗುಡ್‌ನ್ಯೂಸ್‌ ಕೊಟ್ಟ ಝೈಡಸ್‌ ಸಂಸ್ಥೆ!

* ತುರ್ತು ಬಳಕೆಗೆ ಕೇಂದ್ರ ಸರ್ಕಾರದಿಂದ ಅನುಮತಿ ಪಡೆದ ಝೈಡಸ್‌ ಕ್ಯಾಡಿಲಾ ಸಂಸ್ಥೆ,

* ಅಕ್ಟೋಬರ್‌ ಮಧ್ಯಭಾಗದ ವೇಳೆಗೆ ಝೈಕೋವ್‌-ಡಿ ಲಸಿಕೆ ಮಾರುಕಟ್ಟೆಗೆ ಬಿಡುಗಡೆ

* ಮಾಸಿಕ 1 ಕೋಟಿ ಲಸಿಕೆ ಉತ್ಪಾದಿಸಲಿದ್ದೇವೆ

Zydus Cadila hoping to supply ZyCoV D COVID 19 vaccine by end of September pod
Author
Bangalore, First Published Aug 22, 2021, 1:00 PM IST

ನವದೆಹಲಿ(ಆ.22): ತುರ್ತು ಬಳಕೆಗೆ ಶುಕ್ರವಾರವಷ್ಟೇ ಕೇಂದ್ರ ಸರ್ಕಾರದಿಂದ ಅನುಮತಿ ಪಡೆದ ಅಹಮದಾಬಾದ್‌ ಮೂಲದ ಝೈಡಸ್‌ ಕ್ಯಾಡಿಲಾ ಸಂಸ್ಥೆ, ಅಕ್ಟೋಬರ್‌ ಮಧ್ಯಭಾಗದ ವೇಳೆಗೆ ಝೈಕೋವ್‌-ಡಿ ಲಸಿಕೆಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಹೇಳಿದೆ.

ಈ ಕುರಿತು ಮಾಹಿತಿ ನೀಡಿರುವ ಸಂಸ್ಥೆಯ ಮುಖ್ಯಸ್ಥ ಶಾರ್ವಿಲ್‌ ಪಟೇಲ್‌ ‘ಅಕ್ಟೋಬರ್‌ ಮಧ್ಯಭಾಗದಲ್ಲಿ ಲಸಿಕೆ ಬಿಡುಗಡೆಯಾಗಲಿದ್ದು, ಮಾಸಿಕ 1 ಕೋಟಿ ಲಸಿಕೆ ಉತ್ಪಾದಿಸಲಿದ್ದೇವೆ. ಲಸಿಕೆಯ ದರದ ಬಗ್ಗೆ 1-2 ವಾರದಲ್ಲೇ ಸ್ಪಷ್ಟನೆ ನೀಡಲಿದ್ದೇವೆ. ಈ ಲಸಿಕೆ ವಿಶ್ವದಲ್ಲೇ ಅತೀ ವೇಗವಾಗಿ ಹಬ್ಬುವ ಡೆಲ್ಟಾತಳಿಯ ವಿರುದ್ಧವೂ ಪರಿಣಾಮಕಾರಿಯಾಗಿದೆ ಎಂದು ತಿಳಿಸಿದ್ದಾರೆ.

ಅಲ್ಲದೆ ಇನ್ನೊಂದು ವಾರದಲ್ಲಿ 3-12ರ ವಯೋಮಾನದ ಮಕ್ಕಳ ಮೇಲೆ ಲಸಿಕೆ ಪ್ರಯೋಗಕ್ಕೆ ಅನುಮತಿ ಕೋರುವುದಾಗಿ ಅವರು ತಿಳಿಸಿದ್ದಾರೆ. ಝೈಕೋವ್‌-ಡಿ,. 12 ವರ್ಷ ಮೇಲ್ಪಟ್ಟಎಲ್ಲಾ ವ್ಯಕ್ತಿಗಳು ಬಳಸಬಹುದಾದ ಮೂರು ಡೋಸ್‌ ಮಾದರಿಯ ಕೋವಿಡ್‌ ಲಸಿಕೆಯಾಗಿದೆ.

Latest Videos
Follow Us:
Download App:
  • android
  • ios