ಲಾಲ್ಡುಹೋಮಾ ಮುಖ್ಯಮಂತ್ರಿಯಾಗಿ ಶುಕ್ರವಾರ ಪ್ರಮಾಣವಚನ ಸ್ವೀಕರಿಸಿದರು. ಅವರು ಮಿಜೋರಾಂನ 6ನೇ ಮುಖ್ಯಮಂತ್ರಿ. ಈ ಹಿಂದೆ ಅಧಿಕಾರದಲ್ಲಿದ್ದ ಮಿಜೋ ನ್ಯಾಷನಲ್ ಪ್ರಂಟ್ ಪಕ್ಷ ಹಾಗೂ ಹಿಂದಿನ ಮುಖ್ಯಮಂತ್ರಿ ಝೋರಂತಂಗಾ ಸಮಾರಂಭದಲ್ಲಿ ಭಾಗಿಯಾಗಿದ್ದರು.
ಐಜ್ವಾಲ್ (ಡಿಸೆಂಬರ್ 9, 2023): ಮಿಜೋರಾಂನಲ್ಲಿ ಝೋರಾಂ ಪೀಪಲ್ಸ್ ಮೂಮೆಂಟ್ (ಝಡ್‌ಪಿಎಂ) ಪಕ್ಷದ ನಾಯಕ ಲಾಲ್ಡುಹೋಮಾ ಮುಖ್ಯಮಂತ್ರಿಯಾಗಿ ಶುಕ್ರವಾರ ಪ್ರಮಾಣವಚನ ಸ್ವೀಕರಿಸಿದರು. ಅವರು ಮಿಜೋರಾಂನ 6ನೇ ಮುಖ್ಯಮಂತ್ರಿ.
ಇವರಿಗೆ ರಾಜ್ಯಪಾಲ ಹರಿ ಬಾಬು ಕಂಭಂಪತಿ ಪ್ರಮಾಣ ಬೋಧಿಸಿದರು. ಈ ಹಿಂದೆ ಅಧಿಕಾರದಲ್ಲಿದ್ದ ಮಿಜೋ ನ್ಯಾಷನಲ್ ಪ್ರಂಟ್ ಪಕ್ಷ ಹಾಗೂ ಹಿಂದಿನ ಮುಖ್ಯಮಂತ್ರಿ ಝೋರಂತಂಗಾ ಸಮಾರಂಭದಲ್ಲಿ ಭಾಗಿಯಾಗಿದ್ದರು.
ಇದನ್ನು ಓದಿ: ಇಂದಿರಾ ಗಾಂಧಿ ಭದ್ರತಾ ಅಧಿಕಾರಿಯೇ ಮಿಜೋರಾಂ ಮುಂದಿನ ಸಿಎಂ! ಮಾಜಿ IPS ಅಧಿಕಾರಿ ರಾಜಕೀಯ ಹಾದಿ ಇಲ್ಲಿದೆ..
ಲಾಲ್ಡುಹೋಮಾ ಅವರೊಂದಿಗೆ 11 ಸಚಿವರು ಪ್ರಮಾಣವಚನ ಸ್ವೀಕರಿಸಿದರು. ಮಿಜೋರಾಂನ 40 ವಿಧಾನಸಭೆ ಸೀಟುಗಳಲ್ಲಿ ಮುಖ್ಯಮಂತ್ರಿ ಸೇರಿ 12 ಮಂದಿ ಸಚಿವರಾಗಬಹುದಾಗಿದೆ. 40 ಸ್ಥಾನದ ವಿಧಾನಸಭೆಯಲ್ಲಿ ಲಾಲ್ಡುಹೋಮಾ ಅವರ ಝಡ್‌ಪಿಎಂ 27 ಸ್ಥಾನಗಳನ್ನು ಗೆಲ್ಲುವುದರ ಮೂಲಕ ಭರ್ಜರಿ ಗೆಲುವು ಸಾಧಿಸಿತ್ತು.
ಇದನ್ನು ಓದಿ: ಮೋದಿ ದೂರವಿಟ್ಟು ತಮ್ಮ ಕ್ಷೇತ್ರದಲ್ಲೇ ಸೋತ ಮಿಜೋರಾಂ ಸಿಎಂ, ಡೆಪ್ಯುಟಿ ಸಿಎಂ: ZPM ಗೆ ಅಧಿಕಾರ ನೀಡಿದ ಮತದಾರ ಪ್ರಭು!
