ನವದೆಹಲಿ(ಜೂ.28): ಮಾತುಕತೆ ಮೂಲಕ ಶಾಂತಿಯುತ ಮಾರ್ಗದಲ್ಲಿ ಭಾರತದ ಜತೆಗಿನ ಗಡಿ ಸಂಘರ್ಷ ಬಗೆಹರಿಸಿಕೊಳ್ಳುವ ಮಾತುಗಳನ್ನು ಒಂದೆಡೆ ಆಡುತ್ತಿರುವ ಚೀನಾ ಮತ್ತೊಂದೆಡೆ ತನ್ನ ಕುತಂತ್ರಿ ಬುದ್ಧಿ ತೋರಿಸಿದೆ. ಪ್ಯಾಂಗಾಂಗ್‌ ಸರೋವರದ ದಕ್ಷಿಣ ದಂಡೆಯಲ್ಲಿನ ಭಾರತಕ್ಕೆ ಸೇರಿದ ಜಾಗದಲ್ಲಿ ಹೆಲಿಪ್ಯಾಡ್‌ ನಿರ್ಮಾಣ ಮಾಡುತ್ತಿದೆ. ಭಾರಿ ಸಂಖ್ಯೆಯ ಯೋಧರನ್ನೂ ನಿಯೋಜನೆ ಮಾಡಿದೆ. ಇದು ಎರಡೂ ದೇಶಗಳ ನಡುವಣ ಸಂಘರ್ಷಕ್ಕೆ ಮತ್ತಷ್ಟುತುಪ್ಪ ಸುರಿದಿದೆ.

ಚೀನಾ ವಸ್ತು ಬಹಿಷ್ಕರಿಸಲು ಭಾರತದ ಆಟೋಮೊಬೈಲ್ ಕ್ಷೇತ್ರ ಹಿಂದೇಟು!

ಬಾಲಿವುಡ್‌ನ ‘3 ಈಡಿಯಟ್ಸ್‌’ ಸಿನಿಮಾ ಕ್ಲೈಮಾಕ್ಸ್‌ ಚಿತ್ರೀಕರಣ ನಡೆದಿರುವ ಪ್ಯಾಂಗಾಂಗ್‌ ಸರೋವರದಲ್ಲಿ ಒಟ್ಟು 8 ‘ಫಿಂಗರ್‌’ (ಕಡಿದಾದ ಜಾಗ)ಗಳಿವೆ. 8ನೇ ಫಿಂಗರ್‌ನಿಂದಾಚೆಗೆ ಚೀನಾದ ಗಡಿ ಆರಂಭವಾಗುತ್ತದೆ. ಆದರೆ 2ನೇ ಫಿಂಗರ್‌ವರೆಗೂ ತನ್ನ ಜಾಗ ಇದೆ ಎಂದು ಚೀನಾ ಮೊಂಡು ವಾದ ಮಾಡುತ್ತಲೇ ಬಂದಿತ್ತು. ಮೇ ಆರಂಭದಲ್ಲಿ ಭಾರತದ ಜತೆ ಬೇಕಂತಲೇ ಸಂಘರ್ಷ ತೆಗೆದ ಚೀನಾ, ಪಾಂಗಾಂಗ್‌ ಸರೋವರದ 4ನೇ ಫಿಂಗರ್‌ ಬಳಿ ನೆಲೆಗಳನ್ನು ಸ್ಥಾಪಿಸಿಕೊಂಡಿತ್ತು. ಇದೀಗ ಅದೇ ಜಾಗದಲ್ಲಿ ಹೆಲಿಪ್ಯಾಡ್‌ ನಿರ್ಮಾಣ ಆರಂಭಿಸಿದೆ.

ಭಾರತ ಜೊತೆ ಸಂಘರ್ಷ: ಮಡಿದ ಸೈನಿಕರಿಗೆ ಚೀನಾ ಪತ್ರಿಕೆ ಕಂಬನಿ!

ಏಪ್ರಿಲ್‌ನಲ್ಲಿ ಯಾವ ಪರಿಸ್ಥಿತಿ ಇತ್ತೋ ಅದೇ ಸ್ಥಿತಿಯನ್ನು ಕಾಯ್ದುಕೊಳ್ಳಬೇಕು ಎಂಬುದು ಭಾರತದ ಆಗ್ರಹ. ಆದರೆ ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜನೆಗೊಂಡಿರುವ ಚೀನಿ ಸೈನಿಕರು, ವಾಪಸ್‌ ಹೋಗುವ ಪ್ರಶ್ನೆಯೇ ಇಲ್ಲ ಎಂಬ ಧಿಮಾಕು ಮೆರೆಯುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.