ಇನ್‌ಸ್ಟಾಗ್ರಾಂ ರೀಲ್ಸ್‌ಗಾಗಿ ಸಿಮ್ರನ್ ರಸ್ತೆ ನಡುವೆ ನಿಂತು ಭರ್ಜರಿ ಸ್ಟೆಪ್ಸ್ ಹಾಕಿದ್ದಾಳೆ. ಆದರೆ ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಪೊಲೀಸರು ದೂರು ದಾಖಲಿಸಿಕೊಂಡು ಸಿಮ್ರನ್ ನೋಟಿಸ್ ಜಾರಿ ಮಾಡಿದ್ದಾರೆ. ಅಷ್ಟಕ್ಕು ಆ ವಿಡಿಯೋದಲ್ಲಿ ಏನಿದೆ? 

ಲಖನೌ(ಮೇ.10) ರೀಲ್ಸ್ ಹುಚ್ಚಾಟಕ್ಕೆ ಹಲವು ಜೀವಗಳು ಬಲಿಯಾಗಿದೆ. ಲೈಕ್ಸ್, ಕಮೆಂಟ್‌ಗಾಗಿ ಮಾಡುವ ಕಸರತ್ತಿನಿಂದ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ರೀಲ್ಸ್ ಟ್ರೆಂಡ್ ಹೆಚ್ಚಾಗುತ್ತಿದ್ದಂತೆ ಅಪಾಯವೂ ಹೆಚ್ಚಾಗುತ್ತಿದೆ. ಇದೀಗ ಖ್ಯಾತ ಯೂಟ್ಯೂಬರ್ ಸಿಮ್ರನ್ ಯಾದವ್ ಇನ್‌ಸ್ಟಾಗ್ರಾಂ ರೀಲ್ಸ್ ಮಾಡಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಿಮ್ರನ್ ಯಾದವ್ ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಸಿಮ್ರನ್ ಯಾದವ್‌ಗೆ ನೋಟಿಸ್ ನೀಡಿದ್ದಾರೆ. ಸಿಮ್ರನ್ ಯಾದವ್ ಮೇಲೆ ಎರಡೆರಡು ಪ್ರಕರಣ ದಾಖಲಾಗಿದೆ. 

ಸಿಮ್ರನ್ ಯಾದವ್ ಸಾರ್ವಜನಿಕ ರಸ್ತೆಯಲ್ಲಿ ರೀಲ್ಸ್ ವಿಡಿಯೋ ಮಾಡಿದ್ದಾರೆ. ಆದರೆ ಹಾಡಿಗೆ ಹೆಜ್ಜೆ ಹಾಕುತ್ತಾ ಪಿಸ್ತೂಲ್ ತೋರಿಸಿದ್ದಾರೆ. ಪಿಸ್ತೂಲ್ ಪ್ರದರ್ಶನ, ಪಿಸ್ತೂಲ್ ವಿಜ್ರಂಭಣೆ ಮಾಡಿದ ಕಾರಣಕ್ಕೆ ಸಿಮ್ರನ್ ವಿರುದ್ಧ ದೂರು ದಾಖಲಾಗಿದೆ. ಇಷ್ಟೇ ಅಲ್ಲ ಸಾರ್ವಜನಿಕ ರಸ್ತೆಯಲ್ಲಿ ವಿಡಿಯೋ ಶೂಟ್ ಮಾಡು ಮೂಲಕ ವಾಹನ ಸವಾರರು ಹಾಗೂ ಇತರರ ಸಂಚಾರಕ್ಕೆ ಅಡಚಣೆ ಮಾಡಿದ್ದಾರೆ. ಇಷ್ಟೇ ಅಲ್ಲ ಇದರಿಂದ ಅಪಾಯಗಳಾಗುವ ಸಾಧ್ಯತೆ ಹೆಚ್ಚು. ಹೀಗಾಗಿ ಲಖನೌ ಪೊಲೀಸರು ಸಿಮ್ರನ್ ಯಾದವ್ ವಿರುದ್ದ ಕ್ರಮಕ್ಕೆ ಮುಂದಾಗಿದ್ದಾರೆ.

ಇಂಜಿನಿಯರಿಂಗ್ ಓದ್ತಿದ್ರೂ ನೋ ಕಾಮನ್‌ಸೆನ್ಸ್: ರೀಲ್ಸ್ ಮಾಡ್ತಾ ರೈಲಡಿಗೆ ಬಿದ್ದು ಯುವತಿ ಸಾವು

ಸಿಮ್ರನ್ ಯಾದವ್ ಹಾಡಿನ ದೃಶ್ಯದಲ್ಲಿ ಬಳಸಿರುವ ಪಿಸ್ತೂಲ್ ಕುರಿತು ಉತ್ತರ ನೀಡುವಂತೆ ಪೊಲೀಸರು ನೋಟಿಸ್‌ನಲ್ಲಿ ಸೂಚಿಸಿದ್ದಾರೆ. ಪಿಸ್ತೂಲ್ ಹಿಡಿದು ಸಾರ್ವಜನಿಕ ಸ್ಥಳದಲ್ಲೆ ವಿಜ್ರಂಭಣೆ ಮಾಡಲಾಗಿದೆ. ಈ ಮೂಲಕ ಕಾನೂನು ಉಲ್ಲಂಘಿಸಲಾಗಿದೆ. ಹೀಗಾಗಿ ಲಖನೌ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ. 

Scroll to load tweet…

;

ಪ್ರಕರಣ ದಾಖಲಾಗುತ್ತಿದ್ದಂತೆ ಸಿಮ್ರನ್ ಯಾದವ್ ತಮ್ಮ ಖಾತೆಯಿಂದ ವಿಡಿಯೋ ಡಿಲೀಟ್ ಮಾಡಿದ್ದಾರೆ. ಆದರೆ ಈ ವಿಡಿಯೋ ಭಾರಿ ವೈರಲ್ ಆದ ಕಾರಣ ಹಲವರು ತಮ್ಮ ತಮ್ಮ ಖಾತೆಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಇಷ್ಟೇ ಅಲ್ಲ ಪೊಲೀಸರು ಹಾಗೂ ಅಧಿಕಾರಿಗಳನ್ನು ಟ್ಯಾಗ್ ಮಾಡಿ ಕ್ರಮಕ್ಕೆ ಆಗ್ರಹಿಸಿದ್ದಾರೆ. ಇದೇ ವೇಳೆ ಈ ರೀತಿ ಸಾರ್ವಜನಿಕ ಪ್ರದೇಶದಲ್ಲಿ ಪಿಸ್ತೂಲ್, ತೋರಿಸುವುದು, ಸಂಚಾರಕ್ಕೆ ಅಡಚಣೆ ಮಾಡಿರುವುದಕ್ಕೆ ಕ್ರಮ ಕೈಗೊಳ್ಳಿ ಎಂದು ಪೊಲೀಸರಲ್ಲಿ ಆಗ್ರಹಿಸಿದ್ದಾರೆ.

ಜಾಲಿ ರೈಡ್ ಹೋದ ಸ್ಪೈಡರ್‌ಮ್ಯಾನ್-ಸ್ಪೈಡರ್‌ವುಮೆನ್‌ಗೆ ಶಾಕ್, ವಿಡಿಯೋ ಪೋಸ್ಟ್ ಮಾಡಿ ಅರೆಸ್ಟ್ ಆದ ಜೋಡಿ!

ರೀಲ್ಸ್‌ಗಾಗಿ ಇತ್ತೀಚೆಗೆ ನಿಯಮ ಉಲ್ಲಂಘನೆ, ಇತರರ ಜೀವಕ್ಕೆ ಅಪಾಯ ತರಬಲ್ಲ ಸ್ಟಂಟ್‌ಗಳನ್ನು ಮಾಡಲಾಗುತ್ತಿದೆ. ಇಂತಹ ಪ್ರಕರಣಗಳಲ್ಲಿ ಪೊಲೀಸರು ಕಟ್ಟಿ ನಿಟ್ಟಿನ ಕ್ರಮಕೈಗೊಳ್ಳಬೇಕು. ಇಂತಹ ಹುಚ್ಚಾಟ ಅಂತ್ಯವಾಗಬೇಕು ಎಂದು ಸಾಮಾಜಿಕ ಮಾಧ್ಯಮದಲ್ಲಿ ಹಲವರು ಆಗ್ರಹಿಸಿದ್ದಾರೆ