ವಿವಾದಕ್ಕೆ ಕಾರಣವಾಯ್ತು ಯುಟ್ಯೂಬರ್ ಧೃವ್ ರಾಠಿ ಟ್ವೀಟ್
ತಮ್ಮ ಆಕ್ರಮಣಕಾರಿ ವಿಡಿಯೋಗಳ ಮೂಲಕವೇ ಫೇಮಸ್ ಆಗಿರುವ ಯುಟ್ಯೂಬರ್ ಧೃವ್ ರಾಠಿ, ಟ್ವೀಟ್‌ನಿಂದಾಗಿ ವಿವಾದಕ್ಕೆ ಸಿಲುಕಿದ್ದಾರೆ. ಟ್ವೀಟ್ ಸಹ ಡಿಲೀಟ್ ಮಾಡಿದ್ದಾರೆ.
ನವದೆಹಲಿ: ಯುಟ್ಯೂಬರ್ ಧೃವ್ ರಾಠಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಧೃವ್ ರಾಠಿಯವರ ವಿಡಿಯೋಗಳು ಹೆಚ್ಚು ಸದ್ದು ಮಾಡಿದ್ದವು. ಆದ್ರೆ ಈ ಬಾರಿ ವಿಡಿಯೋ ಅಲ್ಲ. ಧೃವ್ ರಾಠಿಯವರ ಟ್ವೀಟ್ ಚರ್ಚೆಗೆ ಗ್ರಾಸವಾಗಿದೆ. ಕೋಲ್ಕತ್ತಾ ಟ್ರೈನಿ ವೈದ್ಯೆಯ ರೇಪ್ ಆಂಡ್ ಮರ್ಡರ್ ಪ್ರಕರಣ ಸಂಬಂಧ ಧೃವ್ ರಾಠಿ ಟ್ವೀಟ್ ಮಾಡಿದ್ದರು. ಆಗಸ್ಟ್ 9ರಂದು ಟ್ರೈನಿ ವೈದ್ಯೆಯ ಕೊಲೆಯಾಗಿತ್ತು. ವೈದೈಯ ಹತ್ಯೆ ಖಂಡಿಸಿ ದೇಶದಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಪ್ರಕರಣ ಸಂಬಂಧ ಪೊಲೀಸರು ಸಹ ಸಂಜಯ್ ರಾವ್ ಎಂಬಾತನನ್ನು ಬಂಧಿಸಿದ್ದಾರೆ. ತಮ್ಮ ಟ್ವೀಟ್ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ಎಚ್ಚೆತ್ತ ಧೃವ್ ರಾಠಿ ಡಿಲೀಟ್ ಮಾಡಿ ಸ್ಪಷ್ಟನೆಯನ್ನು ನೀಡಿದ್ದಾರೆ.
ಪ್ರಿ ಪ್ರೆಸ್ ಜರ್ನಲ್ ವರದಿ ಪ್ರಕಾರ, ಧೃವ್ ರಾಠಿ ಎಕ್ಸ್ ಖಾತೆಯಲ್ಲಿ ಜಸ್ಟಿಸ್ ಫಾರ್ ನಿರ್ಭಯ-2 ಹೆಸರಿನಲ್ಲಿ ಪೋಸ್ಟ್ ಮಾಡಿಕೊಂಡಿದ್ದರು. ಕೆಲ ಸಮಯದ ಬಳಿಕ ಈ ಟ್ವೀಟ್ ಡಿಲೀಟ್ ಮಾಡಿದ್ದಾರೆ. ಈ ಟ್ವೀಟ್ ಡಿಲೀಟ್ ಮಾಡಿದ್ದಕ್ಕೆ ಪ್ರತಿಕ್ರಿಯಿಸಿರುವ ನೆಟ್ಟಿಗರು, ಪಶ್ವಿಮ ಬಂಗಾಳ ಸರ್ಕಾರಕ್ಕೆ ಹೆದರಿ ಈ ರೀತಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಓರ್ವ ಬಳಕೆದಾರರ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಧೃವ್ ರಾಠಿ, ಕೆಲ ಬಳಕೆದಾರರು ಸಂತ್ರಸ್ತೆಯನ್ನು ನಿರ್ಭಯಾ-2 ಎಂದು ಕರೆದಿದ್ದಕ್ಕೆ ಆಕ್ಷೇಪಿಸಿ ಆ ಪದ ಸೂಕ್ತವಲ್ಲ ಎಂದರು. ನೆಟ್ಟಿಗರ ಈ ಸಲಹೆಯನ್ನು ಗಮನದಲ್ಲಿಟ್ಟುಕೊಂಡು ನಾನು ಟ್ವೀಟ್ ಡಿಲೀಟ್ ಮಾಡಿದ್ದೇನೆ ಅಂತ ಸ್ಪಷ್ಟನೆ ನೀಡಿದ್ದಾರೆ. ಟ್ವೀಟ್‌ನಲ್ಲಿ ಸಂತ್ರಸ್ತೆಯ ಹೆಸರನ್ನು ಉಲ್ಲೇಖ ಮಾಡಿದ್ದಕ್ಕೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ನಡೆದ ರೇಪ್ ಆಂಡ್ ಮರ್ಡರ್ ಪ್ರಕರಣ ಹೃದಯ ವಿದ್ರಾವಕವಾಗಿದೆ. ಈ ಘಟನೆ ಪಶ್ಚಿಮ ಬಂಗಾಳದ ಕಾನೂನು ಮತ್ತು ಸುವ್ಯವಸ್ಥೆಯ ದಯನೀಯ ಸ್ಥಿತಿಯನ್ನ ತೋರಿಸುತ್ತಿದೆ. ವೈದ್ಯರಿಗೆ ಇರೋ ಅಭದ್ರತೆಯನ್ನು ಬಹಿರಂಗಪಡಿಸುತ್ತಿದೆ. ಸಿಬಿಐ ತ್ವರಿತಗತಿಯಲ್ಲಿ ತನಿಖೆ ನಡೆಸಿ ನ್ಯಾಯ ಕೊಡಿಸುವ ಕೆಲಸ ಮಾಡಬೇಕಿದೆ. ಕೊನೆಗೆ ಸಂತ್ರಸ್ತೆಯ ಹೆಸರನ್ನು ಹ್ಯಾಶ್‌ಟ್ಯಾಗ್‌ನಲ್ಲಿ ಬಳಕೆ ಮಾಡಿದ್ದರು. ಸಂತ್ರಸ್ತೆಯ ಹೆಸರು ಬಹಿರಂಗಗೊಳಿಸಿರೋದಕ್ಕೆ ಧೃವ್ ರಾಠಿ ಟೀಕೆಗೆ ಒಳಗಾಗುತ್ತಿದ್ದಾರೆ.
ತಪ್ಪೊಪ್ಪಿಕೊಂಡಿರುವ ಆರೋಪಿ?
ಪಶ್ಚಿಮ ಬಂಗಾಳದಲ್ಲಿ 31 ವರ್ಷದ ವೈದ್ಯೆ ಮೇಲಿನ ಅತ್ಯಾಚಾರ ಹಾಗೂ ಪ್ರಕರಣದ ಆರೋಪಿ ಸಂಜಯ್ ರಾಯ್ ಪೊಲೀಸರ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದು, ‘ಬೇಕಿದ್ದರೆ ನನ್ನನ್ನು ಗಲ್ಲಿಗೇರಿಸಿ’ ಎಂದು ಕೊಂಚವೂ ಪಶ್ಚಾತ್ತಾಪವಿಲ್ಲದೇ ಉದ್ಧಟತನದಿಂದ ಉತ್ತರಿಸಿದ್ದಾನೆ ಎನ್ನಲಾಗಿದೆ.
ಅಯೋಧ್ಯೆಯಲ್ಲಿ ಕಳ್ಳರ ಹಾವಳಿ; ರಾಮಪಥದ ₹50 ಲಕ್ಷ ಮೌಲ್ಯದ 3800 ಬಿದಿರಿನ ಬೀದಿ ದೀಪ, 36 ಪ್ರಾಜೆಕ್ಟರ್ ಕಳವು!
ಸಂಜಯ್‌ಗೆ ಪೊಲೀಸರು ಈ ವೇಳೆಯಲ್ಲಿ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಆಗ ತಾನೇ ಈ ಹೀನ ಕೃತ್ಯವನ್ನು ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಆದರೆ ಈ ಸಂದರ್ಭದಲ್ಲಿ ಆತನಲ್ಲಿ ಕೊಂಚವೂ ಪಶ್ಚಾತ್ತಾಪ ಕಂಡು ಬಂದಿಲ್ಲ. ಬದಲಿಗೆ ಪೊಲೀಸರ ಮುಂದೆಯೂ ಉದ್ಧಟತನ ಮೆರೆದಿದ್ದು, ಬೇಕಿದ್ದರೆ ತನ್ನನ್ನು ಗಲ್ಲಿಗೇರಿಸಿ ಎಂದು ಅಸಡ್ಡೆಯಿಂದ ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ.
ಪೊಲೀಸರ ವಿಚಾರಣೆ ಈತನ ಕುರಿತು ಹಲವು ವಿಚಾರಗಳು ಬಯಲಾಗಿದೆ. ಆರೋಪಿ ಹೀನ ಕೃತ್ಯವನ್ನು ನಡೆಸಿದ ಬಳಿಕ ಮನೆಗೆ ಹೋಗಿದ್ದ . ಸಾಕ್ಷ್ಯನಾಶಕ್ಕಾಗಿ ಬಟ್ಟೆ ಒಗೆದು ಹಾಗೂ ಶೂಗಳಲ್ಲಿದ್ದ ರಕ್ತದ ಕಲೆಗಳನ್ನು ಸ್ವಚ್ಛಗಳಿಸಿದ್ದ. ಅಲ್ಲದೆ, ಅವನ ಮೊಬೈಲ್‌ನಲ್ಲಿಯೂ ಅಶ್ಲೀಲತೆಗೆ ಸಂಬಂಧಿಸಿದ ಹಲವು ವಿಡಿಯೋಗಳಿರುವುದು ಬಯಲಾಗಿದೆ.
ಟ್ರೈನಿ ಡಾಕ್ಟರ್ ರೇಪ್ & ಮರ್ಡರ್ ಕೇಸ್; ನಾಲ್ಕು ಮದ್ವೆಯಾಗಿದ್ದ ಆರೋಪಿಯನ್ನ ಬಿಟ್ ಹೋದ ಮೂರು ಪತ್ನಿಯರು!