ನಗು ಆರೋಗ್ಯಕ್ಕೆ ಉತ್ತಮ, ಆದರೆ ಕಾರ್ಯಕ್ರಮದಲ್ಲಿ ಕಿಸಕ್ಕನೆ ನಕ್ಕ ಅಧಿಕಾರಿಗೆ ಸರ್ಕಾರದ ನೋಟಿಸ್!

ಅದು ಸಾರ್ವಜನಿಕ ಕಾರ್ಯಕ್ರಮ, ಹಿರಿಯ ಅಧಿಕಾರಿಗಳು ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.ಇದರ ನಡುವೆ ಕಿರಿಯ ಅಧಿಕಾರಿಯೊಬ್ಬರು ಕಿಸಕ್ಕನೆ ನಕ್ಕಿದ್ದಾರೆ. ಇಷ್ಟೇ ನೋಡಿ,  ಜಿಲ್ಲಾಧಿಕಾರಿಗಳು ಅಧಿಕಾರಿಗೆ ನೋಟಿಸ್ ನೀಡಿದ ಘಟನೆ ನಡೆದಿದೆ.
 

Govt Official receives show cause notice for laughing in public hearing Madhya Pradesh ckm

ಭೋಪಾಲ್(ನ.17) ಆರೋಗ್ಯವಾಗಿರಬೇಕಾದರೆ ಮನಸ್ಸು ತುಂಬಿ, ಹೃದಯ ತುಂಬಿ ನಗಬೇಕು ಎಂದು ವೈದ್ಯರು ಹೇಳುತ್ತಾರೆ. ಒತ್ತಡದ ಬದುಕು, ಯಾಂತ್ರೀಕ ಬದುಕಿನಲ್ಲಿ ಮನುಷ್ಯರು ನಗುವುದನ್ನೇ ಮರೆಯುತ್ತಿದ್ದಾರೆ. ಹೀಗಾಗಿ ಬೆಳಗ್ಗೆ ಹಾಗೂ ಸಂಜೆ ನಗರ ಪ್ರದೇಶಗಳ ಹಲೆವೆಡೆ ಲಾಫಿಂಗ್ ಕ್ಲಬ್‌ಗಳು ಕಾರ್ಯನಿರ್ವಹಿಸುತ್ತಿದೆ.  ಆದರೆ ಇಲ್ಲೊಬ್ಬ ಸರ್ಕಾರಿ ಅಧಿಕಾರಿ ನಕ್ಕ ಕಾರಣಕ್ಕೆ ನೋಟಿಸ್ ಪಡೆದಿದ್ದಾರೆ.  ಸಾರ್ವಜನಿಕ ಕಾರ್ಯಕ್ರಮದಲ್ಲಿ ಯಾವುದೋ ಆಲೋಚನೆಯಲ್ಲಿ ನಕ್ಕಿದ್ದಾರೆ. ಒಂದೇ ಸಮನೆ ನಕ್ಕ ಅಧಿಕಾರಿಗೆ ಇದೀಗ ಸಂಕಷ್ಟ ಶುರುವಾಗಿದೆ. ಜಿಲ್ಲಾಧಿಕಾರಿಗಳ ಕಚೇರಿಯಿಂದ ನೋಟಿಸ್ ಬಂದಿದೆ. ಹಿರಿಯ ಅಧಿಕಾರಿಗಳು ಒಂದು ಸುತ್ತಿನ ವಾರ್ನಿಂಗ್ ನೀಡಿದ ಘಟನೆ ಮಧ್ಯ ಪ್ರದೇಶದ ಚತ್ತಾರ್‌ಪುರದಲ್ಲಿ ನಡೆದಿದೆ.

ಜಿಲ್ಲಾಧಿಕಾರಿಗಳ ಕಚೇರಿಯ ಇ ಗವರ್ನೆನ್ಸ್ ಅಸಿಸ್ಟೆಂಟ್ ಮ್ಯಾನೇಜರ್ ಕೆಕೆ ತಿವಾರಿ ನಕ್ಕ ಕಾರಣಕ್ಕೆ ನೋಟಿಸ್ ಪಡೆದಿದ್ದಾರೆ. ಸರ್ಕಾರದ ಸೂಚನೆಯಂತೆ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಹಾಗೂ ಅದಕ್ಕೆ ಪರಿಹಾರ ಸೂಚಿಸುವ ಕಾರ್ಯಕ್ರಮ ಮಧ್ಯಪ್ರದೇಶದಲ್ಲಿ ನಡೆಯುತ್ತಿದೆ. ಹೀಗೆ ಚತ್ತಾರ್‌ಪುರ್ ಜಿಲ್ಲೆಯಲ್ಲಿ ಅಕ್ಟೋಬರ್ 30 ರಂದು ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಕಾರ್ಯಕ್ರಮ ಆಯೋಜಿಸಲಾಗಿತ್ತು. 

ಮದುವೆ ಮುಗಿಯುವವರೆಗೂ ಮದುಮಕ್ಕಳು ನಗುವಂತಿಲ್ಲ! ಅಪ್ಪಿ ತಪ್ಪಿ ನಕ್ಕರೆ ಸ್ಥಳದಲ್ಲೇ ಡಿವೋರ್ಸ್​

ಈ ಕಾರ್ಯಕ್ರಮಕ್ಕೆ, ಉಪ ಜಿಲ್ಲಾಧಿಕಾರಿ ಸೇರಿದಂತೆ ಹಲವು ಸರ್ಕಾರಿ ಅಧಿಕಾರಿಗಳು ಭಾಗವಹಿಸಿದ್ದರು. ಸಾರ್ವಜನಿಕರು ತಮ್ಮ ಅಹವಾಲು, ಕುಂದು ಕೊರತೆ, ಸಮಸ್ಯೆಗಳ ಪಟ್ಟಿ ಹಿಡಿದು ಆಗಮಿಸಿದ್ದರು. ಇ ಗವರ್ನೆನ್ಸ್ ಅಧಿಕಾರಿಗಳಿಗೆ ಇಲ್ಲಿ ಹೆಚ್ಚಿನ ಕೆಲಸ. ಅಹವಾಲುಗಳನ್ನು ವೆಬ್‌ಸೈಟ್‌ನಲ್ಲಿ ದಾಖಲಿಸಿಕೊಳ್ಳುವುದು ಸೇರಿದಂತೆ ಹಲವು ಕೆಲಸಗಳನ್ನು ಸ್ಥಳದಲ್ಲೇ ಮಾಡಬೇಕು.  ಹೀಗೆ ಸಾರ್ವಜನಿಕರು ಅಹವಾಲು ಸ್ವೀಕರಿಸುತ್ತಿರುವ ವೇಳೆ ಅಧಿಕಾರಿ ಕೆಕೆ ತಿವಾರಿ ಕಿಸಕ್ಕನೆ ನಕ್ಕಿದ್ದಾರೆ. ಇವರ ನಗು ಸ್ವಲ್ಪ ಜೋರಾಗಿದೆ. ಎಲ್ಲರೂ ಇವರನ್ನೇ ನೋಡುವಷ್ಟರ ಮಟ್ಟಿಗೆ ನಕ್ಕಿದ್ದಾರೆ.

ಇದು ಉಪ ಜಿಲ್ಲಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಸಾರ್ವಜನಿಕ ಕಾರ್ಯಕ್ರಮದಲ್ಲಿ ಅಧಿಕಾರಿ ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ, ಕರ್ತವ್ಯದಲ್ಲಿ ಲೋಪ ಎಸಗಿದ್ದಾರೆ, ಇತರರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಸೇರಿದಂತೆ ಹಲವು ಆರೋಪಗಳನ್ನು ಕೆಕೆ ತಿವಾರಿ ಮೇಲೆ ಹೊರಿಸಿ  ಜಿಲ್ಲಾಧಿಕಾರಿಗಳು ನೋಟಿಸ್ ನೀಡಿದ್ದಾರೆ. 

ಇತ್ತ ಉಪ ಜಿಲ್ಲಾಧಿಕಾರಿ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.ನೋಟಿಸ್ ಹೇಗೆ ಹೋಗಿದೆ ಅನ್ನೋದು ಗೊತ್ತಿಲ್ಲ. ಈ ಕುರಿತು ವರದಿ ಕೇಳಿದ್ದೇನೆ ಎಂದು ಮಿಲಿಂದ್ ನಾಗದೇವ್ ಹೇಳಿದ್ದಾರೆ. ಇತ್ತ ಕೆಕೆ ತಿವಾರಿ ಕೂಡ ಘಟನೆ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಶೋಕಾಸ್ ನೋಟಿಸ್‌ಗೆ ಈಗಾಗಲೇ ಉತ್ತರಿಸಿದ್ದೇನೆ ಎಂದಿದ್ದಾರೆ.

Latest Videos
Follow Us:
Download App:
  • android
  • ios