ಪ್ರೆಗ್ಮೆಂಟ್ ಖುಷಿಗೆ ಪಟಾಕಿ ಸಿಡಿಸಿ ಸಂಭ್ರಮಿಸಿದ 9 ವರ್ಷದ ಬಾಲಕಿ, ಸರ್ಪ್ರೈಸ್ ಆದ ಗುಡ್ ನ್ಯೂಸ್!
9 ವರ್ಷದ ಬಾಲಕಿ ಪ್ರೆಗ್ನೆಂಟ್. ಆದರೆ ಇಲ್ಲಿ ಆತಂಕವಿಲ್ಲ,ಅಪ್ರಾಪ್ತ ಬಾಲಕಿಯಲ್ಲಿ ದುಗುಡವಿಲ್ಲ, ಪೋಷಕರಲ್ಲಿ ಅಯ್ಯೋ ಹೀಗಾಯ್ತಲ್ಲ ಅನ್ನೋ ಸಂಕಟವಿಲ್ಲ. ಈ ಬಾಲಕಿ ಪ್ರೆಗ್ನೆಂಟ್ ಆದ ಖುಷಿಯಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾಳೆ.
ಇರಾಕ್(ನ.17) ಭಾರತದಲ್ಲಿ ಹುಡುಗಿಯ ಮದುವೆ ವಯಸ್ಸು 18. ಅಪ್ರಾಪ್ತ ವಯಸ್ಸಿನಲ್ಲಿ ಮದುವೆ, ಗರ್ಭದಾರಣೆ ನಿಯಮ ಉಲ್ಲಂಘನೆಯಾಗಿದೆ. ಆದರೆ ಮುಸ್ಲಿಮ್ ರಾಷ್ಟ್ರ ಇರಾಕ್‌ನಲ್ಲಿ ಹಾಗಲ್ಲ. ಇಲ್ಲೊಬ್ಬ ಪುಟ್ಟ ಹೆಣ್ಣುಮಗಳ ವಯಸ್ಸು 9. ಆಟವಾಡಿ, ನಲಿದು ಕುಣಿಯಬೇಕಿದ್ದ ಈ ಬಾಲಕಿ ಇದೀಗ ಪ್ರಗ್ನೆಂಟ್. ಈ ಖುಷಿಯನ್ನು ಸ್ವತಃ 9 ವರ್ಷದ ಬಾಲಕಿ ಆಚರಿಸಿಕೊಂಡಿದ್ದಾಳೆ. ಪಟಾಕಿ ಸಿಡಿಸಿ, ಅತ್ಯಂತ ಖುಷಿಯಿಂದ ಬಾಲಕಿ ತನ್ನ ಪ್ರೆಗ್ನೆಂಟ್‌ನ್ನು ಆಚರಿಸಿಕೊಂಡಿದ್ದಾಳೆ. ಈ ವಿಡಿಯೋ ಇದೀಗ ಭಾರಿ ಕೋಲಾಹಲ ಸೃಷ್ಟಿಸಿದೆ. ಅಂತಾರಾಷ್ಟ್ರೀಯ ಮಕ್ಕಳ ಹಕ್ಕುಗಳ ಘಟಕ ಸೇರಿದಂತೆ ಹಲವರು ಇರಾಕ್ ವಿರುದ್ಧ ಕೆಂಡ ಕಾರಿದ್ದಾರೆ. ಆದರೆ ಯಾವುದೇ ಪ್ರಯೋಜನವಿಲ್ಲ.
ಇರಾಕ್‌ನ ಈ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಕೋಲಾಹಲ ಸೃಷ್ಟಿಸಿದೆ. ಈ ವಿಡಿಯೋ ಹಾಗೂ ಹರಿದಾಡುತ್ತಿರುವ ಮಾಹಿತಿ ಪ್ರಕಾರ 9 ವರ್ಷದ ಬಾಲಕಿ ಗರ್ಭಿಣಿಯಾಗಿದ್ದಾಳೆ. ಹೆಚ್ಚು ಕಡಿಮ 3 ರಿಂದ 5 ತಿಂಗಳು. ಈಕೆ ತನ್ನ ತಾಯಿಯಾಗುತ್ತಿರುವ ಖುಷಿನ್ನು ಕಲರ್ ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದಾಳೆ. ಮುಖದಲ್ಲಿ ಸಂತೋಷ, ನಗು ಎಲ್ಲವೂ ಇದೆ. ಕಾರಣ ಈ ಬಾಲಕಿಗೆ ಇರಾಕ್‌ನ ಎಲ್ಲಾ ಹೆಣ್ಣುಮಕ್ಕಳಂತೆ ಇದುವೇ ಸಂಭ್ರಮಿಸುವ ಮಾರ್ಗ.ಆದರೆ ಈ ವಿಡಿಯೋ ಗದ್ದಲ ಶುರುವಾಗುತ್ತಿದ್ದಂತೆ ಹಲವು ಸಂಘಟನೆಗಳು ಇದರ ವಿರುದ್ಧ ಆಕ್ರೋಶ ಹೊರಹಾಕಿದೆ.
ಹೆಣ್ಣಿನ ಮದುವೆಯ ಕನಿಷ್ಠ ವಯಸ್ಸು 18 ಅಲ್ಲ ಕೇವಲ 9, ಹೊಸ ಕಾಯ್ದೆ ಮಂಡಿಸಿದ ಇರಾಕ್!
ಇರಾಕ್‌ನಲ್ಲಿ ಹೆಣ್ಣುಮಕ್ಕಳ ಕಾನೂನು ಬದ್ಧ ವಿವಾಹ ವಯಸ್ಸು 9. ನಿಮಗೆ ಅಚ್ಚರಿಯಾಗಬಹುದು. ಇದು ಗತಗಾಲದಲ್ಲಿ ಮಾಡಿದ ನಿಯಮವಲ್ಲ. 2024ರ ಆಗಸ್ಟ್ ತಿಂಗಳಲ್ಲಿ ರೂಪಿಸಿದ ನಿಯಮ. ಇದಕ್ಕೂ ಮೊದಲು ಇರಾಖ್‌ನಲ್ಲಿ ಮದುವೆ ವಯಸ್ಸು 18. ಆದರೆ ಕಳೆದ ಹಲವು ದಶಕಗಳಿಂದ ಇರಾಕ್‌ನಲ್ಲಿ ಪ್ರಾಥಮಿಕ ಶಾಲಾ ಮಟ್ಟದಲ್ಲೇ ಹಣ್ಣುಮಕ್ಕಳನ್ನು ಮದುವೆ ಮಾಡುತ್ತಿರುವುದು ಸಾಮಾನ್ಯವಾಗಿದೆ. ಪ್ರಾಥಮಿ ಶಾಲೆಗಳಲ್ಲಿ ಮಕ್ಕಳು ಗರ್ಭಿಣಿಯಾಗುತ್ತಿದ್ದಾರೆ. ಅಪ್ರಾಪ್ತ ಹೆಣ್ಣು ಮಕ್ಕಳು ತಾಯಿಯಾಗುತ್ತಿದ್ದಾರೆ.
ಮುಸ್ಲಿಮ ರಾಷ್ಟ್ರ ಇರಾಕ್‌ನಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ, ಹೆಣ್ಣುಮಕ್ಕಳು, ಮಹಿಳೆಯರ ಹಕ್ಕು ಉಲ್ಲಂಘನೆಗಳು ಅನ್ವಯಿಸುವುದಿಲ್ಲ. ಈ ಕುರಿತು ಆಕ್ರೋಶ, ಪ್ರತಭಟನೆ ಹೊರಹಾಕಿದರೂ ಯಾವುದೇ ಪ್ರಯೋಜನವಾಗುವುದಿಲ್ಲ. ಸರ್ಕಾರವೇ ಹೆಣ್ಮುಮಕ್ಕಳ ಮದುವೆ ವಯಸ್ಸನ್ನು 9 ವರ್ಷಕ್ಕೆ ಇಳಿಸಿದೆ. ಗಂಡು ಮಕ್ಕಳ ಮದುವೆ ವಯಸ್ಸು 15ಕ್ಕೆ ಇಳಿಕೆ ಮಾಡಿದೆ. ಭಾರತ ಸೇರಿದಂತೆ ಬಹುತೇಕ ರಾಷ್ಟ್ರಗಳಲ್ಲಿ ಮದುವೆಯ ಕನಿಷ್ಠ ವಯಸ್ಸು 18.
ಇರಾನ್ to ಈಜಿಪ್ಟ್: ಇಲ್ಲಿದೆ ಕನಿಷ್ಠ ವಿವಾಹ ವಯಸ್ಸು ಹೊಂದಿರುವ 8 ದೇಶ