ಪ್ರಧಾನಿ ನರೇಂದ್ರ ಮೋದಿ ನಿನ್ನೆಯಷ್ಟೇ ತಮ್ಮ 70ನೇ ವರ್ಷದ ಹುಟ್ಟು ಹಬ್ಬ ಆಚರಿಸಿದ್ದಾರೆ. ಜಗತ್ತಿನ ಹಲವು ಭಾಗಗಳಿಂದ ಪ್ರಧಾನಿ ಮೋದಿಗೆ ಅಭಿಮಾನಿಗಳು ವಿಶ್ ಮಾಡಿದ್ದಾರೆ.

ಬಹಳಷ್ಟು ಜನ ವಿನೂತನವಾಗಿ ಪ್ರಧಾನಿ ಹುಟ್ಟಿದ ಹಬ್ಬವನ್ನು ಆಚರಿಸಿದ್ದಾರೆ. ಒಬ್ಬ ವ್ಯಕ್ತಿ ಮೋದಿಜೀ ಎಂದು 24 ಗಂಟೆ ಜಪಿಸಿದ್ದಾನೆ. ಯೂಟ್ಯೂಬರ್ ಅನ್ಮೋಲ್ ಬಕಯ ಲೈವ್ ಮಾಡಿ ತನ್ನ ಯೂಟ್ಯೂಬ್ ಚಾನೆಲ್ ಮೂಲಕ ಮೋದೀಜಿ ಎಂದು ಪ್ರಧಾನಿ ಹೆಸರು ಜಪಿಸಿದ್ದಾನೆ.

ಪ್ರಧಾನಿ ಮೋದಿಯ 70ನೇ ವರ್ಷದ ಬರ್ತ್‌ಡೇಗೆ 70 ಕೆಜಿಯ ಲಡ್ಡು..!

ಕಳೆದ ಕೆಲವು ವರ್ಷಗಳಲ್ಲಿ ಪ್ರಧಾನಿ ಮೋದಿ ಬಗ್ಗೆ ನಾನು ಪಾಸಿಟಿವ್ ಮತ್ತು ನೆಗೆಟಿವ್ ಸುದ್ದಿಗಳನ್ನೂ ಕೇಳಿದ್ದೇನೆ. ವೈಯಕ್ತಿವಾಗಿ ದೇಶಕ್ಕೆ ಅವರು ಮಾಡಿದ ಸೇವೆಗೆ ಅವರನ್ನು ಗೌರವಿಸುತ್ತೇನೆ. ಪ್ರಧಾನಿಗೆ ನನ್ನ ಬೆಂಬಲ ಯಾವಾಗಲೂ ಇರುತ್ತದೆ. ಇದು ಅವರಿಗೆ ಗೌರವ ಸೂಚಿಸುವ ಒಂದು ರೀತಿ ಅಷ್ಟೇ, ಹೆಚ್ಚೇನಿಲ್ಲ ಎಂದಿದ್ದಾರೆ.

ಮೋಟಿವೇಷನಲ್ ಕೋಟ್ಸ್ ಸ್ಟಿಕ್ ಮಾಡಿರೋ ವಾಲ್ ಮುಂದೆ ಕೂತು ಪ್ರಧಾನಿ ಹೆಸರು ಜಪಿಸಿದ್ದಾನೆ. ನೀವು ಈ ವಿಡಿಯೋ ಮೊದಲ ಬಾರಿ ನೋಡುತ್ತಿದ್ದರೆ ಸ್ವಲ್ಪ ಹೊತ್ತು ನೋಡಿ. ಮಿನಿಮಮ್ ಮಿನ್ಯುಟ್ಸ್ ಇಲ್ಲಿ ಕಳೆಯುವ ಮೂಲಕ ವಿಡಿಯೋ ಪ್ರಧಾನಿಗೆ ತಲುಪಲು ನೆರವಾಗಿ ಎಂದಿದ್ದಾರೆ. ಲೈವ್‌ಸ್ಟ್ರೀಮ್‌ಗೆ 2.9 ಲಕ್ಷ ವ್ಯೂಸ್ ಬಂದಿದ್ದು, 15 ಸಾವಿರ ಲೈಕ್ಸ್ ಬಂದಿದೆ.

ನಮೋ 70: ನವಭಾರತಕ್ಕೆ ನರೇಂದ್ರ ಮೋದಿ ಎಂಬ ಹೆದ್ದಾರಿ!

"