ಪ್ರಧಾನಿ ಮೋದಿಗೆ ಇಂದು 70ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ. ಈ ಸಂದರ್ಭ ತಮಿಳುನಾಡಿದ ಬಿಜೆಪಿ ಕಾರ್ಯಕರ್ತರು ವಿಶೇಷವಾಗಿ ವಿಶ್ ಮಾಡಿದ್ದಾರೆ. 70 ಕೆಜಿ ಭಾರತದ ಲಡ್ಡು ತಯಾರಿಸಲಾಗಿದೆ. ತಮಿಳುನಾಡಿದ ಶಿವ ಕಾಮಾಕ್ಷಿ ದೇವಾಲಯಕ್ಕೆ 70 ಕೆಜಿ ಭಾರದ ಲಡ್ಡು ತಯಾರಿಸಿ ನೈವೇದ್ಯ ಮಾಡಲಾಗಿದೆ. ನಂತರ ಪ್ರಸಾದದ ರೂಪದಲ್ಲಿ ಎಲ್ಲರಿಗೂ ಹಂಚಲಾಗಿದೆ.

ದೇವಸ್ಥಾನದ ಹೊರಗೆ ಮೆರವಣಿಗೆ ನಡೆಸಲಾಗಿದ್ದು, ಕಾರ್ಯಕರ್ತರು ಲಡ್ಡನ್ನು ಸಾರ್ವಜನಿಕರಿಗೆ ಹಂಚಿದ್ದಾರೆ. ಪ್ರಧಾನಿ ಮೋದಿ ಹುಟ್ಟಿದ ಹಬ್ಬದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಕಳೆದೊಂದು ವಾರದಿಂದ ಉಚಿತ ಕಣ್ಣಿನ ತಪಾಸಣೆ ಸೇರಿದಂತೆ ಹಲವು ಸಮಾಜಮುಖಿ ಕಾರ್ಯಗಳನ್ನು ನಡೆಸಿದ್ದಾರೆ. ರಕ್ತದಾನ ಶಿಬಿರ, ಆಹಾರ ಸಾಮಾಗ್ರಿ ವಿತರಣೆ ಕಾರ್ಯಕ್ರಮವೂ ನಡೆದಿದೆ.

ಪ್ರಧಾನಿ ಮೋದಿಗೆ ಕಂಗನಾ ಸ್ಪೆಷಲ್ ವಿಶ್: ಏನ್ ಹೇಳಿದ್ದಾರೆ ನೋಡಿ

ಮೋದಿ ಹುಟ್ಟಿದ ಹಬ್ಬದ ಹಿನ್ನೆಲೆಯಲ್ಲಿ ಬಿಜೆಪಿ ಸೇವಾ ಸಪತ್ ಹೆಸರಲ್ಲಿ ಅಭಿಯಾನ ನಡೆಸಲಾಗಿತ್ತು. ದೇಶಾದ್ಯಂತ ಈ ಅಭಿಯಾನದಡಿಯಲ್ಲಿ ಬಿಜೆಪಿ ಕಾರ್ಯಕರ್ತರು ಜನರಿಗೆ ನೆರವಾಗಿದ್ದರು.

ಕಳೆದ ವರ್ಷ ಮೋದಿ ಹುಟ್ಟಿದ ಹಬ್ಬಕ್ಕೆ 568 ಕೆಜಿ ಲಡ್ಡು ತಯಾರಿಸಲಾಗಿತ್ತು. ಸೂರತ್ ಮೂಲದ ವ್ಯಕ್ತಿ 700 ಫೀಟ್ ಕೇಕ್ ತಯಾರಿಸಿದ್ದರು. ಇದು ಸುಮಾರು 70 ಸಾವಿರ ಭಾರವಿತ್ತು. ಇದನ್ನು ಅದೇ ನಗರದ 700 ಜನರು ಸೇರಿ ಕಟ್ ಮಾಡಿದ್ದರು.