ಯುವಕನೋರ್ವ ಹೈವೇಯಲ್ಲಿ ದಿಕ್ಕು ತೋರಿಸುವ ಸೈನ್ ಬೋರ್ಡ್ ಅಥವಾ ದ್ವಾರದ ಮೇಲೆ ನಿಂತು ಯುವಕನೋರ್ವ ಫುಶ್‌ಅಪ್ ಮಾಡುತ್ತಿರುವ ವೀಡಿಯೋವೊಂದು ಯೋಗ ದಿನದಂದು ವೈರಲ್ ಆಗಿದ್ದು, ಅನೇಕರು ಈ ವೀಡಿಯೋ ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಇಂದು ಅಂತಾರಾಷ್ಟ್ರೀಯ ಯೋಗ ದಿನ ವಿಶ್ವದಾದ್ಯಂತ ಕೋಟ್ಯಾಂತರ ಜನ ಯೋಗ ಮಾಡುವ ಮೂಲಕ ಈ ಯೋಗ ದಿನದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ. ಅನೇಕರು ತಮ್ಮ ವಿಭಿನ್ನ ಯೋಗ ಭಂಗಿಗಳ ಫೋಟೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಯೋಗ ದಿನದ ಶುಭಾಶಯ ಕೋರಿದ್ದಾರೆ. ಜೊತೆಗೆ ಯೋಗ ಮಾಡುವಂತೆ ಇತರರಿಗೂ ಪ್ರೋತ್ಸಾಹಿಸುತ್ತಿದ್ದಾರೆ. ಭಾರತ ಮಾತ್ರವಲ್ಲದೇ ಇಡೀ ಜಗತ್ತೇ ಇಂದು ಈ ಯೋಗದಿನದಲ್ಲಿ ಭಾಗಿಯಾಗಿದೆ. ಈ ಮಧ್ಯೆ ಯುವಕನ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೌದು ಯುವಕನೋರ್ವ ಹೈವೇಯಲ್ಲಿ ದಿಕ್ಕು ತೋರಿಸುವ ಸೈನ್ ಬೋರ್ಡ್ ಅಥವಾ ದ್ವಾರದ ಮೇಲೆ ನಿಂತು ಯುವಕನೋರ್ವ ಫುಶ್‌ಅಪ್ ಮಾಡುತ್ತಿರುವ ವೀಡಿಯೋವೊಂದು ಯೋಗ ದಿನದಂದು ವೈರಲ್ ಆಗಿದ್ದು, ಅನೇಕರು ಈ ವೀಡಿಯೋ ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.
sambalpuri_mahani ಎಂಬ ಇನ್ಸ್ಟಾ ಪೇಜ್‌ನಿಂದ ಈ ವೀಡಿಯೋ ಅಪ್‌ಲೋಡ್ ಆಗಿದ್ದು, When we take desi bht besi ಎಂದು ಬರೆದುಕೊಂಡಿದ್ದಾರೆ ಅಂದರೆ ನಾವು ಕಳ್ಳಭಟ್ಟಿ ಸರಾಯಿಯನ್ನು ಹೆಚ್ಚು ಕುಡಿದಾಗ ಎಂಬುದು ಇದರ ಅರ್ಥವಂತೆ, ಇದರ ಜೊತೆಗೆ ಅವರು ನಾವು ಇಂತಹ ಅಪಾಯಕಾರಿ ಸಾಹಸಗಳನ್ನು ಪ್ರೋತ್ಸಾಹಿಸುವುದಿಲ್ಲ, ಕೇವಲ ಮನೋರಂಜನೆಗೋಸ್ಕರ ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಒಡಿಶಾದ ಪಾಟ್ನಾಗರ್ ನಗರದ (Patnagarh town) ಬೊಲ್ನಗೀರ್ ಪ್ರದೇಶದ (Bolangir district) ವೀಡಿಯೋ ಇದು ಎನ್ನಲಾಗುತ್ತಿದ್ದು, ಅಲ್ಲಿನ ಹೆದ್ದಾರಿಯ ದ್ವಾರವೊಂದರ ಮೇಲೆ ಯುವಕನೋರ್ವ ಬಿಂದಾಸ್ ಆಗಿ ಯೋಗ ಮಾಡುತ್ತಿದ್ದಾನೆ. ಯುವಕ ಯಾವುದೇ ಹೆದರಿಕೆ ಇಲ್ಲದೇ ಯೋಗ ಮಾಡುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ.
ಗ್ರಾಹಕನ ಮುಖಕ್ಕೆ ಕಾಫಿ ಎರಚಿದ ಮೆಕ್‌ಡೊನಾಲ್ಡ್ ಸಿಬ್ಬಂದಿ: ವೀಡಿಯೋ ವೈರಲ್
ಎತ್ತರದ ಕಬ್ಬಿಣದ ಟವರ್ ಮೇಲೆ ಆತ ಯಾವುದೇ ಅಂಜಿಕೆ ಇಲ್ಲದೇ 8ಕ್ಕೂ ಹೆಚ್ಚು ಪುಶ್‌ಅಪ್‌ಗಳನ್ನು ಮಾಡುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಅಂದಹಾಗೆ ಈ ವೀಡಿಯೋವನ್ನು ಏಪ್ರಿಲ್ 30 ರಂದು ಪೋಸ್ಟ್ ಮಾಡಲಾಗಿದ್ದು, 7 ಲಕ್ಷಕ್ಕೂ ಅಧಿಕ ಜನ ಈ ವೀಡಿಯೋವನ್ನು ವೀಕ್ಷಿಸಿದ್ದಾರೆ. ಅನೇಕರು ವೀಡಿಯೋ ನೋಡಿ ಕಾಮೆಂಟ್ ಮಾಡಿದ್ದು, ಭಾನುವಾರ ಜಿಮ್ ಕ್ಲೋಸ್ ಇರುತ್ತದೆ. ಹೀಗಾಗಿ ಈ ಯುವಕ ಬೇರೆ ಮಾರ್ಗ ಹುಡುಕಿಕೊಂಡಿದ್ದಾನೆ. ಇದೊಂದು ಒಳ್ಳೆ ಐಡಿಯಾ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಈ ವೀಡಿಯೋವನ್ನು ಮೂರು ಬಾರಿ ನೋಡಿದ ನಂತರ ಅದರ ಮೇಲೊಬ್ಬರು ಪುಶ್‌ಅಪ್ ಮಾಡ್ತಿದ್ದಾರೆ ಎಂಬುದು ನನಗೆ ಕಾಣಿಸಿತು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ವೀಡಿಯೋ ಯೋಗದಿನದಂದು ಸಖತ್ ವೈರಲ್ ಆಗಿದೆ.
ಫಿಫಾ ವಿಶ್ವಕಪ್‌ನಲ್ಲಿ ವೈರಲ್ ಆಗಿದ್ದ ಮಾಡೆಲ್ ಮತ್ತೆ ಪ್ರತ್ಯಕ್ಷ; ಪಡ್ಡೆ ಹುಡುಗರ ಕಣ್ಣಿಗೆ ಹಬ್ಬ
