Asianet Suvarna News Asianet Suvarna News

ಸಿಎಂ ನಿವಾಸದ ಎದುರೇ ಅಪ್ಪಿಕೊಂಡು ಮುದ್ದಿಸುತ್ತಾ ತುಟಿಗೆ ತುಟಿ ಸೇರಿಸಿದ ಜೋಡಿ; ವಿಡಿಯೋ ವೈರಲ್

ಕಾರ್‌ನಲ್ಲಿ ಜೋಡಿ ಸನ್‌ರೂಫ್ ತೆಗೆದು ಹೊರ ಬಂದಿದ್ದಾರೆ. ಅಲ್ಲಿಯೇ ಒಬ್ಬರಿಗೊಬ್ಬರು ಮುದ್ದಿಸುತ್ತಾ ಅಪ್ಪಿಕೊಂಡು ತಂಪಾದ ಗಾಳಿಯಲ್ಲಿ ತುಟಿಗೆ ತುಟಿ ಸೇರಿಸಿದ್ದಾರೆ.

Young Couple Kiss On Top Of Moving Car Near CM Residence s In Lucknow video viral mrq
Author
First Published Aug 6, 2024, 4:52 PM IST | Last Updated Aug 6, 2024, 4:52 PM IST

ಲಕ್ನೋ: ನಡುರಸ್ತೆಯಲ್ಲಿಯೇ ಮೈಮರೆತು ಎಲ್ಲೆಂದರಲ್ಲಿ ಜೋಡಿಗಳು ಕಿಸ್ ಮಾಡುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಅದರಲ್ಲಿಯೂ ಚಲಿಸುತ್ತಿರುವ ಬೈಕ್, ಕಾರ್‌ ಸನ್ ರೂಫ್ ತೆರೆದು ಚುಂಬಿಸೋದು ಟ್ರೆಂಡ್ ಬದಲಾಗಿದೆ. ಚೆನ್ನೈನ ವಾಹನ ದಟ್ಟನೆಯ ರಸ್ತೆಯಲ್ಲಿ ಕಾನೂನು ವಿದ್ಯಾರ್ಥಿ ತನ್ನ ಗೆಳತಿ  ಜೊತೆ ಎಂಜಾಯ್ ಮಾಡಿ ಬಂಧನಕ್ಕೊಳಗಾಗಿದ್ದಾನೆ. ಇದೀಗ ಉತ್ತರ ಪ್ರದೇಶದ ಲಕ್ನೋ ನಗರದ ಸಿಎಂ ನಿವಾಸದ ರಸ್ತೆಯಲ್ಲಿಯೇ ಜೋಡಿ ಅಸಭ್ಯವಾಗಿ ವರ್ತನೆ ತೋರಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ವೇಗವಾಗಿ ಚಲಿಸುತ್ತಿದ್ದ ಕಾರ್‌ನಲ್ಲಿ ಜೋಡಿ ಸನ್‌ರೂಫ್ ತೆಗೆದು ಹೊರ ಬಂದಿದ್ದಾರೆ. ಅಲ್ಲಿಯೇ ಒಬ್ಬರಿಗೊಬ್ಬರು ಮುದ್ದಿಸುತ್ತಾ ಅಪ್ಪಿಕೊಂಡು ತಂಪಾದ ಗಾಳಿಯಲ್ಲಿ ತುಟಿಗೆ ತುಟಿ ಸೇರಿಸಿದ್ದಾರೆ. ಈ ವಿಡಿಯೋದಲ್ಲಿ ಕಾರ್ ನಂಬರ್ UP 78, GB 0130 ಎಂದು ಸ್ಪಷ್ಟವಾಗಿ ಕಾಣಿಸುತ್ತದೆ. ಸಾಮಾನ್ಯವಾಗಿ ಸಿಎಂ ನಿವಾಸ ಅಂದ್ರೆ ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿರುತ್ತದೆ. ಆದ್ರೂ ಯಾವುದೇ ಅಂಜಿಕೆ ಇಲ್ಲದೇ ಜೋಡಿ ಕಿಸ್ ಮಾಡಿಕೊಂಡಿದ್ದಾರೆ.

ಸ್ಪಾ ಗರ್ಲ್ ಅಂತೇಳಿ ಅದನ್ನೆಲ್ಲಾ ಮಾಡ್ತಿದ್ಳು… ರೈಡ್ ನಡೆಸಿದ ಪೊಲೀಸರಿಗೆ ಒದ್ದು, ಶೂ ಎಸೆದ ಲೇಡಿ

ಈ ವಿಡಿಯೋದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇಂತಹವರಿಂದಲೇ ನಮ್ಮ ದೇಶದ ಸಂಸ್ಕೃತಿ ನಾಶವಾಗುತ್ತಿದೆ. ಸಂಸ್ಕೃತಿಯನ್ನು ನಾಶ ಮಾಡುತ್ತಿರುವ ಅಶ್ಲೀಲ ದಂಪತಿ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಹಿಂದೂ ಸಂಘಟನೆಗಳ ಮುಖಂಡರು ಪೊಲೀಸರನ್ನು ಆಗ್ರಹಿಸಿದ್ದಾರೆ. ಸಾರ್ವಜನಿಕವಾಗಿ ಅಸಭ್ಯ ರೀತಿಯಲ್ಲಿ ವರ್ತಿಸಿರೋ ಜೋಡಿ ಯಾರೂ ಎಂದು ತಿಳಿದು ಬಂದಿಲ್ಲ. ಈ ವಿಡಿಯೋವನ್ನು @anujjournalist1 ಎಂಬ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದ್ದು, ಲಕ್ನೋ ಟ್ರಾಫಿಕ್ ಪೊಲೀಸರಿಗೆ ಟ್ಯಾಗ್ ಮಾಡಲಾಗಿದೆ. ಈ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಪೊಲೀಸರು, ಈ ಸಂಬಂಧ ಪರಿಶೀಲನೆ ನಡೆಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ವಿದ್ಯಾರ್ಥಿಗಳ ಚುಂಬನ 

ಉತ್ತಮ ಪ್ರದೇಶದ ಗೌತಮ ಬುದ್ಧ ನಗರದಲ್ಲಿರುವ ಯುನಿವರ್ಸಿಟಿ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಕಿಸ್ ಮಾಡುತ್ತಾ ಮೈಮರೆತ ವಿಡಿಯೋ ಸಹ ವೈರಲ್ ಆಗುತ್ತಿದೆ. ಕ್ಲಾಸ್‌ರೂಮ್‌ನಲ್ಲಿ ಭೇಟಿಯಾದ ಜೋಡಿ ಕಿಸ್ ಮಾಡಿದ್ದು, ಕೆಲ ವಿದ್ಯಾರ್ಥಿಗಳು ಈ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಯುನಿವರ್ಸಿಟಿಯ ಆಡಳಿತ ಮಂಡಳಿ ವಿರುದ್ಧ ಪೋಷಕರು ಆಕ್ರೋಶ ಹೊರ ಹಾಕಿದ್ದು, ಕ್ಲಾಸ್‌ರೂಮ್‌ನಲ್ಲಿ ಇಂತಹ ಘಟನೆಗಳು ನಡೆಯುತ್ತಿರೋದು ಅಸಹ್ಯ. ವೈರಲ್ ಆಗಿರುವ ಕಿಸ್ಸಿಂಗ್ ವಿಡಿಯೋ ಬಗ್ಗೆ ನೋಯ್ಡಾ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಆದ್ರೆ ಕಾಲೇಜು ಆಡಳಿತ ಮಂಡಳಿ ಯಾವುದೇ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ. 

ಕಾರ್ ಸನ್‌ರೂಫ್ ತೆರೆದು ಕೈಯಲ್ಲಿ ಎಣ್ಣೆ ಹಿಡಿದು ಬ್ಯುಸಿ ರೋಡ್‌ಲ್ಲಿ ಗೆಳತಿ ಜೊತೆ ಕಾನೂನು ವಿದ್ಯಾರ್ಥಿಯ ಮೋಜು ಮಸ್ತಿ

Latest Videos
Follow Us:
Download App:
  • android
  • ios