ಸ್ಕೂಲ್ ಟೀಚರ್ ಡಾನ್ಸ್‌ ನೋಡಿ, ಶಿಕ್ಷಕಿಯ ಸಂಬಳ ಹೆಚ್ಚಿಸುವಂತೆ ಸರ್ಕಾರಕ್ಕೆ ನೆಟ್ಟಿಗರ ಡಿಮ್ಯಾಂಡ್ 

ಶಾಲೆಯಲ್ಲಿ ರೀಲ್ಸ್ ಮಾಡಿ ಹಣ ಗಳಿಸುವ ಅನಿವಾರ್ಯತೆ ಶಿಕ್ಷಕಿಗೆ ಎದುರಾಗಿದೆಯಾ? ಸರ್ಕಾರ ಆಕೆಗೆ ಸಂಬಳ ನೀಡಲ್ಲವಾ? ಇದೇ ರೀತಿ ಶಿಕ್ಷಕಿ ರೀಲ್ಸ್ ಮಾಡುತ್ತಿದ್ದರೆ ಮಕ್ಕಳಿಗೆ ಪಾಠ ಮಾಡೋರು ಯಾರು ಎಂದು ಪ್ರಶ್ನೆ ಮಾಡಲಾಗಿದೆ.

government school teacher dance reels viral netizen said government should increase her salary mrq

ಲಕ್ನೋ: ಉತ್ತರ ಪ್ರದೇಶದ ಸುಲ್ತಾನಪುರ ಗ್ರಾಮದಲ್ಲಿಯ ಸರ್ಕಾರಿ ಶಾಲೆ ಶಿಕ್ಷಕಿ ಡ್ಯಾನ್ಸ್ ಮಾಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ನೆಟ್ಟಿಗರು, ಶಿಕ್ಷಕಿಯ ಸಂಬಳವನ್ನು ಹೆಚ್ಚಿಸುವಂತೆ ಸರ್ಕಾರಕ್ಕೆ ಡಿಮ್ಯಾಂಡ್ ಮಾಡಿದ್ದಾರೆ. ಬಹುಶಃ ಸಮಪರ್ಕಕ ಸಂಬಳ ನೀಡದ ಕಾರಣ ಶಿಕ್ಷಕಿ ರೀಲ್ಸ್ ಮಾಡಿ ಹಣ ಸಂಪಾದನೆ ಮಾಡಲು ಮುಂದಾಗಿರಬಹುದು. ಹಾಗಾಗಿ ಸಂಬಳ ಹೆಚ್ಚಿಸಿದ್ರೆ ಶಿಕ್ಷಕಿ ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡಬಹುದು ಎಂದು ಸೋಶಿಯಲ್ ಮೀಡಿಯಾ ಬಳಕೆದಾರರು ವ್ಯಂಗ್ಯ ಮಾಡಿದ್ದಾರೆ.

ಆಗಸ್ಟ್ 6ರಂದು ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದೆ. ಶಿಕ್ಷಕಿ ಹೀಗೆ ರೀಲ್ಸ್ ಮಾಡಿರೋದಕ್ಕೆ ಗ್ರಾಮಸ್ಥರು ಅಸಮಾಧಾನವನ್ನ ಹೊರ ಹಾಕಿದ್ದಾರೆ. ರೀಲ್ಸ್ ಮಾಡೋದು ಅವರವರ ವೈಯಕ್ತಿಕ ವಿಚಾರವಾಗಿದ್ದು, ಆದರ ಶಾಲಾ ಸಮಯದಲ್ಲಿ ಮಾಡಿರೋದು ತಪ್ಪು ಎಂದು ಸಾರ್ವಜನಿಕರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಶಾಲೆಯಲ್ಲಿ ರೀಲ್ಸ್ ಮಾಡಿ ಹಣ ಗಳಿಸುವ ಅನಿವಾರ್ಯತೆ ಶಿಕ್ಷಕಿಗೆ ಎದುರಾಗಿದೆಯಾ? ಸರ್ಕಾರ ಆಕೆಗೆ ಸಂಬಳ ನೀಡಲ್ಲವಾ? ಇದೇ ರೀತಿ ಶಿಕ್ಷಕಿ ರೀಲ್ಸ್ ಮಾಡುತ್ತಿದ್ದರೆ ಮಕ್ಕಳಿಗೆ ಪಾಠ ಮಾಡೋರು ಯಾರು ಎಂದು ಪ್ರಶ್ನೆ ಮಾಡಲಾಗಿದೆ. ಶಿಕ್ಷಕಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ರೀಲ್ಸ್‌ಗಳನ್ನು ಅಪ್ಲೋಡ್ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಒಂದು ಹುಡುಗನಿಗಾಗಿ ಬಡಿದಾಡಿದ ಇಬ್ಬರು ಯುವತಿಯರು, ಹುಡುಗಂಗೆ 'ಅಲ್ಲಿ' ಮಚ್ಚೆ ಇರಬೇಕೆಂದ ನೆಟ್ಟಿಗರು!

ಒಂದು ಲಕ್ಷಕ್ಕೂ ಅಧಿಕ ವ್ಯೂವ್ ಪಡೆದ ವಿಡಿಯೋ

ಶಾಲೆಯ ಮುಂದೆರೇ ಟೀಚರ್ ಡ್ಯಾನ್ಸ್ ಮಾಡಿದ್ದು, ಕಟ್ಟಡದ ಮೇಲೆ ಪ್ರಾಥಮಿಕ ವಿದ್ಯಾಲಯ,ಬಿಜೆತುವಾ ಡೆವಲಪ್‌ಮೆಂಟ್ ಬ್ಲಾಕ್ ಏರಿಯಾ, ಕಡಿಪುರ್ ಜನ ಶಿಕ್ಷಾ ಕೇಂದ್ರ, ಸುಲ್ತಾನ್‌ಪುರ ಎಂದು ಬರೆಯಲಾಗಿದೆ. ಆಗಸ್ಟ್ 5ರಂದು ಮನೋಜ್ ಶರ್ಮಾ ಲಕ್ನೋ ಯುಪಿ (@ManojSh28986262) ಎಕ್ಸ್ ಖಾತೆಯಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿಕೊಂಡಿದ್ದಾರೆ. ಯುಪಿಯ ಸುಲ್ತಾನ್‌ಪುರದಲ್ಲಿರುವ ಈ ಮೇಡಂ ವೇತನವನ್ನು ಸರ್ಕಾರ ಹೆಚ್ಚಿಸಬೇಕು. ಏಕೆಂದರೆ ಶಾಲಾ ಸಮಯದಲ್ಲಿ ಶಿಕ್ಷಕರು ರೀಲ್ಸ್ ಮಾಡಿ ಹಣ ಸಂಪಾದಿಸುವ ಸ್ಥಿತಿ ಬಂದಿದೆಯಾ? ಸೋಶಿಯಲ್ ಮೀಡಿಯಾ ಪ್ರಕಾರ, ಬಿಎಸ್ಎ ಸರ್ ತನಿಖೆ ನಡೆಸುತ್ತಿದ್ದಾರೆ. ತನಿಖೆ ಇನ್ನು ಸಂಪೂರ್ಣ ಮುಕ್ತಾಯವಾಗಿಲ್ಲ ಎಂದಿದ್ದಾರೆ. ವಿಡಿಯೋದಲ್ಲಿನ ಹಾಡು ಹಾಗೂ ಡ್ಯಾನ್ಸ್ ಚೆನ್ನಾಗಿದೆ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋ 1 ಲಕ್ಷಕ್ಕೂ ಅಧಿಕ ವ್ಯೂವ್ ಪಡೆದುಕೊಂಡಿದೆ.

ನಾಲ್ಕು ಮಕ್ಕಳನ್ನು ಹೆತ್ತು, ಲಿಂಗ ಸಮಾನತೆ ಮೆರೆದ 21 ವರ್ಷದ ಮಹಿಳೆ

Latest Videos
Follow Us:
Download App:
  • android
  • ios