ನವದೆಹಲಿ(ಅ.23): ಸೆಲ್ಫೀ ತೆಗೆದು ಸೋಷಿಯಲ್ ಮೀಡಿಯಾಗೆ ಪೋಸ್ಟ್ ಮಾಡೋ ಅಭ್ಯಾಸ ಇದೆಯಾ...? ಹಾಗಾದ್ರೆ ಈ ಸುದ್ದಿ ಸ್ವಲ್ಪ ಭಯಹುಟ್ಟಿಸಬಹುದು. ಒಂದು ಸಲ ನಿಮ್ಮ ಆಕ್ಷೇಪಾರ್ಹ ಫೊಟೋ ಏನಾದರೂ ಸೋಷಿಯಲ್ ಮೀಡಿಯಾಗೆ ಪೋಸ್ಟ್ ಆದ್ರೆ ನಂತರ ಅದನ್ನು ನೀವು ಬೇಕು ಅಂದ್ರೂ ರಿಮೂವ್ ಮಾಡೋದು ಸಿಕ್ಕಾಪಟ್ಟೆ ಕಷ್ಟ.

ಇಂತಹ ಫೋಟೋಗಳನ್ನು ತೆಗೆಯೋಕೆ ಸಿಕ್ಕಾಪಟ್ಟೆ ಕಷ್ಟ ಆಗ್ಬೋದು, ಅದನ್ನು ತೆಗೆಯೋ ಪ್ರಯತ್ನದಲ್ಲಿ ನಿಮ್ಮ ಜೀವನದ ಅಮೂಲ್ಯ ವರ್ಷಗಳೇ ವ್ಯರ್ಥವಾಗಿಬಿಡಬಹುದು. ಇಷ್ಟೆಲ್ಲ ಪ್ರಯತ್ನ ಮಾಡಿಯೂ ನಿಮ್ಮ ಪ್ರಯತ್ನ ಫಲಕೊಡಬೇಕೆಂದೇನಿಲ್ಲ, ಅಷ್ಟಾಗಿಯೂ ನಿಮ್ಮ ಫೋಟೋ ಹಾಗೇ ಉಳಿದುಬಿಡಬಹುದು.

ಪೋರ್ನ್ ಸೈಟ್‌ನಿಂದ ರೇಪ್ ಸೀನ್ ತೆಗೆಯೋಕೆ 6ವರ್ಷದಿಂದ ಹೋರಾಡ್ತಿದ್ದಾರೆ ಈ ನಟಿ

ನಿಮಗೆ ಅಚ್ಚರಿಯಾಗಬಹುದು. ಆದರೆ ಜಗತ್ತಿನಾದ್ಯಂತ 1 ಲಕ್ಷಕ್ಕೂ ಅಧಿಕ ಮಹಿಳೆಯರು ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಟೆಕ್ನಾಲಜಿ ಮೂಲಕ ಮಹಿಳೆಯ ಫೋಟೋಗಳನ್ನು ಪೋರ್ನೋಗ್ರಫಿಕ್ ಫೊಟೋಗಳಾಗಿ ಬದಲಾಯಿಸಲಾಗುತ್ತದೆ. ನಂತರ ಟೆಲಿಗ್ರಾಂ ಮೂಲಕ ಹಂಚಲಾಗುತ್ತಿದೆ.

ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನದ ಮೂಲಕ ಫೋಟೋ ಬದಲಾಯಿಸಿಕೊಳ್ಳೋದನ್ನು ಡೀಪ್ ಫೇಕ್ ಎನ್ನಲಾಗುತ್ತದೆ.. ಆದರೆ ಒಮ್ಮೆ ಲೀಕ್ ಆದ ಫೋಟೋ ಮತ್ತೆ ಇಂಟರ್‌ನೆಟ್ ಎಂಬ ಮಹಾಜಾಲದಿಂದ ತೆಗೆಯೋದು ಹೇಗೆ ಅಂತ ಮಾತ್ರ ಯಾವುದೇ ಐಡಿಯಾ ಇಲ್ಲ.

ಕೊರೋನಾ ನಿಯಮ ಮೀರಿ ಸೆಲ್ಫಿ; ಕ್ಷಮೆ ಕೇಳಿದ ಪ್ರಧಾನಿ!

ಇಂಟರ್‌ನೆಟ್‌ನಲ್ಲಿ ಫೇಕ್ ಕಂಟೆಂಟ್ ಪತ್ತೆ ಮಾಡುವ ಸೆನ್ಸಿಟಿ ಎಂಬ ಕಂಪನಿ ಈ ವಿಚಾರವನ್ನು ಬಹಿರಂಗಪಡಿಸಿದೆ. ಜಗತ್ತಿನಾದಯಂತ ಪ್ರತಿದಿನ 180 ಕೋಟಿ ಫೊಟೋಗಳು ಸೋಷಿಯಲ್ ಮೀಡಯಾಗೆ ಅಪ್‌ಲೋಡ್ ಮಾಡಲಾಗುತ್ತದೆ. ಒಂದು ವಾರದಲ್ಲಿ ಈ ರೀತಿ ಅಪ್ ಮಾಡೋ ಫೋಟೋಗಳ ಸಂಖ್ಯೆ ಜಗತ್ತಿನಾದ್ಯಂತ ಇರೋ ಜನಸಂಖ್ಯೆಗೆ ಸಮ.

ಇವುಗಳಲ್ಲಿ ಬಹುತೇಕ ಫೋಟೋಗಳು ಸೆಲ್ಫೀಗಳು. ಅದರಲ್ಲೂ ಪುರುಷರಿಗಿಂತ ಮಹಿಳೆಯರ ಫೋಟೋಗಳೇ ಹೆಚ್ಚು. ಡೀಪ್‌ ಫೇಕ್ ಮೂಲಕ ನಿಮ್ಮ ಫೋಟೋ ಕದ್ದು ಸುಲಭವಾಗಿ ಪೋರ್ನೋಗ್ರಫಿಕ್ ಫೋಟೋಗಳಾಗಿ ಪರಿವರ್ತಿಸಬಹುದು ಎಂಬುದು ನೀವು ತಿಳಿದುಕೊಳ್ಳಬೇಕಾದ ವಿಚಾರ.

ಸೈಬರ್‌ಕ್ರೈಂ: ದೇಶದಲ್ಲಿ ಕರ್ನಾಟಕದಲ್ಲೇ ಅತಿ ಹೆಚ್ಚು ಕೇಸ್‌ ದಾಖಲು

ಮಹಿಳೆಯರ ಲಕ್ಷಾಂತ ಫೋಟೋ ಇಂಟರ್‌ನೆಟ್‌ನಿಂದ ರಿಮೂವ್ ಮಾಡೋದು ಹೇಗೆ..? ಇದಕ್ಕೆ ಉತ್ತರ ಗೊತ್ತಿಲ್ಲ. ಇಂತಹ ಲೀಕ್ಡ್ ಫೋಟೋ ಸಂಪೂರ್ಣವಾಗಿ ಇಂಟರ್‌ನೆಟ್‌ನಿಂದ ತೊಡೆದು ಹಾಕೋಕಾಗಲ್ಲ. ಐಟಿ ಕಾಯ್ದೆ ಮೂಲಕ ಫೋಟೋ ರಿಮೂವ್ ಮಾಡಲು ಪ್ರಯತ್ನಿಸಬಹುದು.

ಇನ್ನೊಂದು ಅಪಾಯಕಾರಿ ವಿಚಾರ ಈ ರೀತಿ ಫೋಟೋ ಮಿಸ್‌ಯೂಸ್ ಮಾಡೋದನ್ನು ಯಾರು ಬೇಕಾದರೂ ಮಾಡಬಹುದು. ಕಡಿಮೆ ಬೆಲೆಯ ಸಾಫ್ಟ್‌ವೇರ್ ಬಳಸಿ ಯಾರು ಬೇಕಾದರೂ ಸುಲಭವಾಗಿ ಕಲಿತುಬಿಡಬಹುದು. ಮಾರ್ಫಿಂಗ್ ಮಾಡುವಂತ ಸಾವಿರಾರು ಮೊಬೈಲ್ ಎಪ್ಲಿಕೇಷನ್‌ಗಳೂ ಇವೆ.

ಡೀಪ್ ಫೇಕ್‌ನಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳೋದು ಹೇಗೆ..? 

ಕ್ಲೋಸ್ ಅಪ್ ಫೋಟೋ ಸೋಷಿಯಲ್ ಮೀಡಿಯಾಗೆ ಪೋಸ್ಟ್ ಮಾಡೋದನ್ನು ನಿಲ್ಲಿಸಿ. ಇಂತಹ ಆಕ್ಷೇಪಾರ್ಹ ಕಂಟೆಂಟ್‌ಗಳ ವಿರುದ್ಧ ದೂರು ಕೊಡಬಹುದು, ಇವುಗಳನ್ನು ಅಲ್ಲಲ್ಲಿಯೇ ರಿಪೋರ್ಟ್ ಮಾಡುವ ಅವಕಾಶವೂ ಇದೆ.