40 ವರ್ಷಗಳ ಬಳಿಕ ಕಡೆಗೂ ದಾವುದ್‌ನನ್ನು ಬಂಧಿಸಿದ ಮುಂಬೈ ಪೊಲೀಸರು
40 ವರ್ಷಗಳಿಂದ ತಲೆಮರೆಸಿಕೊಂಡಿದ್ದ ದಾವುದ್‌ನನ್ನು ಕೊನೆಗೂ ಮುಂಬೈ ಪೊಲೀಸರು ಬಂಧಿಸಿ ಹೆಡೆಮುರಿಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಆಗ್ರಾ ಮೂಲದ 70 ವರ್ಷದ ಪಾಪ ಅಲಿಯಾಸ್ ದಾವುದ್ ಬಂದು ಖಾನ್ ಕಳೆದ 40 ವರ್ಷಗಳಿಂದ ಪೊಲೀಸರ ಕಣ್ಣು ತಪ್ಪಿಸಿ ತಿರುಗಾಡುತ್ತಿದ್ದ.
ಮುಂಬೈ: 40 ವರ್ಷಗಳಿಂದ ತಲೆಮರೆಸಿಕೊಂಡಿದ್ದ ದಾವುದ್‌ನನ್ನು ಕೊನೆಗೂ ಮುಂಬೈ ಪೊಲೀಸರು ಬಂಧಿಸಿ ಹೆಡೆಮುರಿಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಆಗ್ರಾ ಮೂಲದ 70 ವರ್ಷದ ಪಾಪ ಅಲಿಯಾಸ್ ದಾವುದ್ ಬಂದು ಖಾನ್ ಕಳೆದ 40 ವರ್ಷಗಳಿಂದ ಪೊಲೀಸರ ಕಣ್ಣು ತಪ್ಪಿಸಿ ತಿರುಗಾಡುತ್ತಿದ್ದ. ಅತ್ಯಾಚಾರ ಪ್ರಕರಣವೊಂದರಲ್ಲಿ ಪೊಲೀಸರಿಗೆ ಬೇಕಾಗಿದ್ದ ಈತ ವೇಷ ಮರೆಸಿ ತಿರುಗಾಡುತ್ತಿದ್ದ. ಆದರೆ ಡಿಬಿ ಮಾರ್ಗಾ ಠಾಣೆ ಪೊಲೀಸರು ಕಡೆಗೂ ಈತನ ವೇಷ ಕಳಚಿ ಬಂಧಿಸಿದ್ದಾರೆ. ವಿಶೇಷ ಕಾರ್ಯಾಚರಣೆ ನಡೆಸಿ ಡಿಬಿ ಮಾರ್ಗ್ ಠಾಣೆ ಪೊಲೀಸರು ಈತನನ್ನು ಬಂಧಿಸಿದ್ದಾರೆ. ಅತ್ಯಾಚಾರ ಪ್ರಕರಣವೊಂದರಲ್ಲಿ ಈತ 1984ರಲ್ಲಿ ಬಂಧಿತನಾಗಿದ್ದ.
ಸೆಷನ್ ಕೋರ್ಟ್‌ನಲ್ಲಿ ಈತನ ವಿರುದ್ಧ ದಾಖಲಾಗಿದ್ದ ಅತ್ಯಾಚಾರ ಪ್ರಕರಣದ ವಿಚಾರಣೆಗೆ ಈತ ಸತತವಾಗಿ ಗೈರಾಗಿದ್ದ ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಈತ ತಲೆಮರೆಸಿಕೊಂಡಿದ್ದಾನೆ ಎಂದು ಘೋಷಿಸಿ ಈತನ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿತ್ತು. ಈ ಮಧ್ಯೆ ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಗೆ ಬಂದಿದ್ದರಿಂದ ಉಪ ಪೊಲೀಸ್ ಕಮೀಷನರ್ ಸರ್ಕಲ್ 2 ಅವರು ಪೊಲೀಸ್ ರೆಕಾರ್ಡ್‌ನಲ್ಲಿರುವ ಆದರೆ ತಲೆಮರೆಸಿಕೊಂಡಿರುವ ಖದೀಮರನ್ನು ಬಂಧಿಸಲುವ ವಿಶೇಷ ತಂಡ ರಚನೆ ಮಾಡಲು ಆದೇಶಿಸಿದ್ದರು. ಅದರಂತೆ ತಲೆಮರೆಸಿಕೊಂಡಿದ್ದ ದಾವೂದ್‌ಗಾಗಿ ಮುಂಬೈನ ಫಲ್ಕ್‌ಲ್ಯಾಂಡ್‌ನಲ್ಲಿ ಪೊಲೀಸರು ಶೋಧ ನಡೆಸಿದ್ದರು. ಆದರೆ ಆತ ಪತ್ತೆಯಾಗಿರಲಿಲ್ಲ, ಆ ಪ್ರದೇಶದಲ್ಲಿ ದಾವೂದ್ ಬಗ್ಗೆ ವಿಚಾರಿಸಿದಾಗ ಆತ ಫಲ್ಕ್‌ಲ್ಯಾಂಡ್‌ನಲ್ಲಿದ್ದ ತನ್ನ ಮನೆಯನ್ನು ಮಾರಾಟ ಮಾಡಿ ತನ್ನ ಕುಟುಂಬದೊಂದಿಗೆ ಉತ್ತರ ಭಾರತಕ್ಕೆ ತೆರಳಿದ್ದಾನೆ ಎಂಬ ಮಾಹಿತಿ ಸಿಕ್ಕಿತ್ತು. ಆದರೆ ಆತ ಎಲ್ಲಿದ್ದಾನೆ ಎಂಬ ಖಚಿತವಾದ ಮಾಹಿತಿ ಪೊಲೀಸರಿಗೆ ಸಿಕ್ಕಿರಲಿಲ್ಲ,
ದಾವೂದ್ ಇಬ್ರಾಹಿಂ ಒಂದು ಕಾಲದ ಪ್ರೇಯಸಿ ಈಗೆಲ್ಲಿದ್ದಾಳೆ ನಿಮಗೆ ಗೊತ್ತೇ?
ಹೀಗಾಗಿ ಪೊಲೀಸ್ ಕಾನ್ಸಟೇಬಲ್ ರಾಣೆ ಅವರು ದಾವೂದ್ ಸಂಪರ್ಕದಲ್ಲಿದ್ದವರನ್ನೆಲ್ಲಾ ಈ ಬಗ್ಗೆ ವಿಚಾರಿಸಿದ್ದಾರೆ. ಇದರಿಂದ ಆತ ಎಲ್ಲಿದ್ದಾನೆ ಎಂಬ ಮಾಹಿತಿ ಸಿಕ್ಕಿದ್ದು, ಈ ಮಾಹಿತಿಯ ಪರಿಶೀಲನೆ ನಡೆಸಿದಾಗ ಆತ ಇರುವ ಸ್ಥಳ ಖಚಿತವಾಗಿತ್ತು. ನಮಗೆ ಆತ ಉತ್ತರ ಪ್ರದೇಶದ ಆಗ್ರಾದಲ್ಲಿ ಇದ್ದಾನೆ ಎಂಬ ವಿಚಾರ ತಿಳಿಯುತ್ತಿದ್ದಂತೆ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ವಿನಯ್ ಘೋರ್ಪಡೆ ಮಾರ್ಗದರ್ಶನದಲ್ಲಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಸಂತೋಷ್ ಕೊಐಡೆ ಅವರ ತಂಡ ಆಗ್ರಾಕ್ಕೆ ತೆರಳಿತ್ತು. ಬಳಿಕ ಆರೋಪಿಯ ನಿವಾಸದ ಸುತ್ತ ಕಣ್ಗಾವಲು ಇರಿಸಲಾಗಿತ್ತು. ನಂತರ ತಾಂತ್ರಿಕ ವಿಧಾನಗಳನ್ನು ಬಳಸಿ ಮಾಹಿತಿ ಕಲೆ ದಾವೂದ್‌ಗೆ ಬಲೆ ಬೀಸಿ ಬಂಧಿಸಲಾಯ್ತು, ಪ್ರಸ್ತುತ ಆತನನ್ನು ಟ್ರಾನ್ಸಿಟ್ ರಿಮಾಂಡ್ ಮೇಲೆ ಮುಂಬೈಗೆ ಕರೆತರಲಾಗಿದೆ ಎಂದು ಪೊಲೀಸ್ ಸಿಬ್ಬಂದಿಯೊಬ್ಬರು ಮಾಹಿತಿ ನೀಡಿದ್ದಾರೆ.
ಭೂಗತ ಪಾತಕಿ ದಾವೂದ್ ಇಬ್ರಾಹಿಂ ಪಾರ್ಟಿಯಲ್ಲಿ ಡ್ಯಾನ್ಸ್ ಮಾಡಿದ್ರಾ ನಟ ಅಕ್ಷಯ್ ಕುಮಾರ್ ಪತ್ನಿ?