Asianet Suvarna News Asianet Suvarna News

ಸೈಬರ್‌ಕ್ರೈಂ: ದೇಶದಲ್ಲಿ ಕರ್ನಾಟಕದಲ್ಲೇ ಅತಿ ಹೆಚ್ಚು ಕೇಸ್‌ ದಾಖಲು

ಕರ್ನಾಟಕದಲ್ಲೇ ಅತೀ ಹೆಚ್ಚು ಸೈಬರ್ ಕ್ರೈಂ | ನಗರ ಪ್ರದೇಶಗಳಲ್ಲಿ ಹೆಚ್ಚಿನ ಪ್ರಕರಣ ದಾಖಲು | ಡಿಜಿಟಲೀಕರಣ - ತಂತ್ರಜ್ಞಾನದ ದುರುಪಯೋಗ ಹೆಚ್ಚಳ

Cybercrimes jumped 64 percent  in 2019 Karnataka worst hit dpl
Author
Bangalore, First Published Oct 2, 2020, 9:28 AM IST

ನವದೆಹಲಿ(ಅ.02): ದೇಶಾದ್ಯಂತ ಡಿಜಿಟಲೀಕರಣ ಹೆಚ್ಚಿರುವ ಬೆನ್ನಲ್ಲೇ, 2019ರ ಸಾಲಿನಲ್ಲಿ ಭರ್ಜರಿ ಶೇ.63.5ರಷ್ಟುಪ್ರಮಾಣದ ಅಪರಾಧ ಪ್ರಕರಣಗಳು ದಾಖಲಾಗಿವೆ ಎಂಬ ಮಾಹಿತಿಯನ್ನು ರಾಷ್ಟ್ರೀಯ ಅಪರಾಧಗಳ ದಾಖಲೆ ಬ್ಯೂರೋ(ಎನ್‌ಸಿಆರ್‌ಬಿ) ಬಹಿರಂಗಪಡಿಸಿದೆ.

ಜೊತೆಗೆ ಸೈಬರ್‌ ವಂಚನೆಗೆ ಸಂಬಂಧಿಸಿ ದೇಶದ ವಿವಿಧ ರಾಜ್ಯಗಳ ಪೈಕಿ ಕರ್ನಾಟಕದಲ್ಲೇ ಅತಿಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದು ವರದಿ ಹೇಳಿದೆ. 2017ರಲ್ಲಿ 21,796 ಇದ್ದ ಸೈಬರ್‌ ಅಪರಾಧಗಳ ಸಂಖ್ಯೆ, 2018ಕ್ಕೆ 27,248ಕ್ಕೆ ಏರಿಕೆಯಾಗಿತ್ತು. ಅದು ಕಳೆದ ವರ್ಷ44,546ಕ್ಕೆ ಏರಿದೆ.

ಫೇಸ್‌ಬುಕ್‌ ಮೇಲೆ ಹದ್ದಿನ ಕಣ್ಣು: ಇಂತಹ ಪೋಸ್ಟ್ ಹಾಕಿದ್ರೆ ಹುಷಾರ್..!

ಅದರಲ್ಲೂ ನಗರ ಪ್ರದೇಶಗಳಲ್ಲಿ ಹೆಚ್ಚು ಸೈಬರ್‌ ಅಪರಾಧ ದಾಖಲಾಗುತ್ತಿದ್ದು, 2018ಕ್ಕೆ ಹೋಲಿಸಿದರೆ 2019ರಲ್ಲಿ ನಗರಗಳಲ್ಲಿ ಇಂಥ ಪ್ರಕರಣಗಳಲ್ಲಿ ಶೇ.82ರಷ್ಟುಏರಿಕೆಯಾಗಿದೆ. ಒಟ್ಟು 44546 ಕೇಸುಗಳ ಪೈಕಿ ಕರ್ನಾಟಕದಲ್ಲಿ 12020, ಉತ್ತರಪ್ರದೇಶದಲ್ಲಿ 11416, ಮಹಾರಾಷ್ಟ್ರದಲ್ಲಿ 4967 ಕೇಸು ದಾಖಲಾಗಿದೆ.

ಒಟ್ಟು ಸೈಬರ್‌ ಅಪರಾಧಗಳಲ್ಲಿ 26891 ವಂಚನೆ ಉದ್ದೇಶ, 2266 ಲೈಂಗಿಕ ದೌರ್ಜನ್ಯ, 1874 ತೇಜೋವಧೆ, 1207 ವೈಯಕ್ತಿಕ ದ್ವೇಷ, 1842 ಸುಲಿಗೆ, 316 ರಾಜಕೀಯ ಉದ್ದೇಶ, 199 ಉಗ್ರವಾದ ಸಂಬಂಧ, ಉಗ್ರ ನೇಮಕ ಸಂಬಂಧ 8 ಪ್ರಕರಣ ದಾಖಲಾಗಿದೆ ಎಂದು ಎನ್‌ಸಿಆರ್‌ಬಿ ವರದಿ ಹೇಳಿದೆ.

ಫೇಮಸ್ ರ‍್ಯಾಪರ್‌ನ ಸೋಷಿಯಲ್ ಮೀಡಿಯಾ ಹಗರಣ..! 72 ಲಕ್ಷ ಕೊಟ್ಟು 7.2 ಕೋಟಿ ವ್ಯೂಸ್ ಖರೀದಿ

ಸೈಬರ್ ಕ್ರೈಂ ಅಪರಾಧಗಳ ಸಂಖ್ಯೆಯಲ್ಲಾಗಿರುವ ಈ ಬೆಳವಣಿಗೆ ನಿಜಕ್ಕೂ ಅಪಾಯಕಾರಿ. ಈ ಹಿಂದೆ ನಗರಗಳಲ್ಲಷ್ಟೇ ಇಂತಹ ಪ್ರಕರಣಗಳು ಕಂಡು ಬರುತ್ತಿದ್ದವು. ಆದರೆ ಇಂಟರ್‌ನೆಟ್ ವ್ಯಾಪ್ತಿ ಹೆಚ್ಚಿದಂತೆ ಎಲ್ಲಿಂದಲೋ  ಇದ್ದು ಇನ್ನೆಲ್ಲಿಯೋ ಕುಳಿತರವರಿಗೂ ಮೋಸ ಮಾಡುವ ಪ್ರಕರಣಗಳೂ ಇವೆ. ಮಾಹಿತಿ ಸೋರಿಕೆ, ಡಾಟಾ ಹ್ಯಾಕಿಂಗ್‌ನಂತಹ ಅಪರಾಧಗಳು ಜನಸಾಮಾನ್ಯರು ಆಲೋಚನೆಗೂ ಮೀರಿದೆ. ಈ ಬಗ್ಗೆ ಕಟ್ಟುನಿಟ್ಟಿನ ಕ್ರಮದ ಅಗತ್ಯವಿದೆ

Follow Us:
Download App:
  • android
  • ios