Asianet Suvarna News Asianet Suvarna News

ನಾವ್‌ ಕೂಡಾ ಟ್ರೆಂಡಿಂಗ್‌ನಲ್ಲಿದ್ದೀವಪ್ಪಾ.. ವೈರಲ್ ರೀಲ್ಸ್‌ ಸಾಂಗ್‌ ಉಪಯೋಗಿಸಿ ಜನ ಜಾಗೃತಿ ಮೂಡಿಸಿದ ಖಾಕಿ!

ಈಗೇನಿದ್ರೂ ಸೋಷಿಯಲ್ ಮೀಡಿಯಾ ಜಮಾನ. ಟ್ರೆಂಡಿಂಗ್‌ನಲ್ಲಿದ್ದರಷ್ಟೇ ಯಾವುದೇ ವಿಚಾರ ಬಹುಬೇಗನೆ ಜನರಿಗೆ ತಲುಪುತ್ತದೆ. ಇದು ಮುಂಬೈ ಪೊಲೀಸರಿಗೂ ಗೊತ್ತಿದೆ. ಹೀಗಾಗಿ ವೈರಲ್ ರೀಲ್ಸ್‌ ಸಾಂಗ್‌ ಉಪಯೋಗಿಸಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ.

Mumbai Police Vibes To Recent Instagram Trend, Proves Being A Fan Of Malayalam Movies Vin
Author
First Published May 8, 2024, 1:14 PM IST

ಜನಜೀವನದ ಆಗುಹೋಗಿನ ಘಟನೆಗಳು ಸೋಷಿಯಲ್ ಮೀಡಿಯಾದ ಮೂಲಕನೇ ಮತ್ತೊಬ್ಬರು ತಿಳಿದುಕೊಳ್ಳುವ ಕಾಲದಲ್ಲಿ ನಾವಿದ್ದೇವೆ. ದಿನ ಬೆಳಗಾದ್ರೆ ಪಕ್ಕದ ಮನೆಯಲ್ಲಿ ಏನಾಯ್ತು ಅನ್ನೋದರ ಜೊತೆಗೆ ದೇಶದ ಮೂಲೆ ಮೂಲೆಯ, ಜಗತ್ತಿನ ಹಲವು ವಿಚಾರಗಳೂ ಬೆರಳ ತುದಿಯಲ್ಲಿರುತ್ತದೆ. ಈಗೇನಿದ್ರೂ ಸೋಷಿಯಲ್ ಮೀಡಿಯಾ ಜಮಾನ. ಟ್ರೆಂಡಿಂಗ್‌ನಲ್ಲಿದ್ದರಷ್ಟೇ ಯಾವುದೇ ವಿಚಾರ ಬಹುಬೇಗನೆ ಜನರಿಗೆ ತಲುಪುತ್ತದೆ. ಇದು ಮುಂಬೈ ಪೊಲೀಸರಿಗೂ ಗೊತ್ತಿದೆ. ಹೀಗಾಗಿ ವೈರಲ್ ರೀಲ್ಸ್‌ ಸಾಂಗ್‌ ಉಪಯೋಗಿಸಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ.

ಪೊಲೀಸರು ರಸ್ತೆ ಸುರಕ್ಷತೆ, ಸೈಬರ್ ಭದ್ರತೆ ಮತ್ತು ಹೆಚ್ಚಿನ ಅಂಶಗಳ ಬಗ್ಗೆ ಆಗಾಗ ಜಾಗೃತಿ ಮೂಡಿಸುತ್ತಾರೆ. ಆದರೆ ಜನರು ಈ ಬಗ್ಗೆ ತಿಳಿದುಕೊಳ್ಳುವುದು ಕಡಿಮೆ. ಇದು ಬಹುತೇಕ ಸಮಯಗಳಲ್ಲಿ ಪ್ರಕಟಣೆ ಆಗಿರುವ ಕಾರಣ ಹೆಚ್ಚಿನವರ ಗಮನಕ್ಕೆ ಇದು ಬರುವುದಿಲ್ಲ. ಹೀಗಾಗಿ ಮುಂಬೈ ಪೊಲೀಸರು ಟ್ರೆಂಡಿಂಗ್ ರೀಲ್ಸ್ ಮೂಲಕ ಜನಜಾಗೃತಿ ಮೂಡಿಸಿದ್ದಾರೆ.

ಏರ್ಪೋರ್ಟಲ್ಲಿ ಯಾವತ್ತಾದರೂ ಪಾನಿ ಪುರಿ ತಿಂದಿದ್ದೀರಾ? ಬೆಲೆ 30 ರೂ. ಅಲ್ಲ. 330 ರೂ.!

ಮುಂಬೈ ಪೋಲೀಸರ ಇತ್ತೀಚಿನ ಇನ್‌ಸ್ಟಾಗ್ರಾಂ ರೀಲ್ಸ್‌ , ಇವರು ಮಲಯಾಳಂ ಚಲನಚಿತ್ರಗಳ ಅಭಿಮಾನಿ ಎಂದು ಸಾಬೀತುಪಡಿಸುತ್ತದೆ
ಇನ್‌ಸ್ಟಾಗ್ರಾಂ ರೀಲ್ಸ್‌ನಲ್ಲಿ ವೈರಲ್ ಆಗುತ್ತಿರುವ 'ಆವೇಶಂ' ಚಿತ್ರದ ಹಾಡನ್ನು ಪೊಲೀಸರು ರೀಲ್ಸ್‌ಗೆ ಉಪಯೋಗಿಸಿದ್ದಾರೆ. ಮಲಯಾಳಂ ನಟ ಫಹಾದ್ ಫಾಸಿಲ್ ಒಳಗೊಂಡ ದೃಶ್ಯವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ನಡೆಯುತ್ತಿರುವ ರೀಲ್ ಟ್ರೆಂಡ್‌ನಲ್ಲಿ ಬಳಸಿದ್ದಾರೆ.

ರೀಲ್ ಒಂದೇ ಸಂದೇಶದ ಎರಡು ಬದಿಗಳನ್ನು ತೋರಿಸುತ್ತದೆ. ಇದರಲ್ಲಿ ಜನರು ರಸ್ತೆ ಸುರಕ್ಷತೆಯ ಸಮಯದಲ್ಲಿ ಯಾವುದನ್ನು ಅನುಸರಿಸಬೇಕು, ಏನು ಮಾಡಬಾರದು ಅನ್ನೋ ಮಾಹಿತಿಯನ್ನು ಒಳಗೊಂಡಿದೆ. ಇದರಲ್ಲಿ ತುರ್ತು ಸಂದರ್ಭದಲ್ಲಿ 100 ಅನ್ನು ಡಯಲ್ ಮಾಡುವುದು, ನಿಗದಿತ ವೇಗದ ಮಿತಿಯನ್ನು ಅನುಸರಿಸುವುದು ಮತ್ತು ದೀರ್ಘ ಪಾಸ್‌ವರ್ಡ್‌ಗಳನ್ನು ಇಟ್ಟುಕೊಳ್ಳುವುದು ಸೇರಿದೆ. ಇನ್ನೊಂದು ಬದಿಯಲ್ಲಿ, ಹೆಲ್ಮೆಟ್ ಇಲ್ಲದೆ ಸವಾರಿ ಮಾಡುವುದು, ಅನುಮಾನಾಸ್ಪದ ಲಿಂಕ್‌ನಿಂದ ವಂಚಿತರಾಗುವುದು ತಪ್ಪು ಎಂದ ಸಂದೇಶ ನೀಡಲಾಗಿದೆ.

ಭಾರೀ ಟ್ರೆಂಡಿಂಗ್‌ನಲ್ಲಿ 'ನಿರ್ಗತಿಕ' ಪದ.., ಬಿಸಿಬಿಸಿ ಚರ್ಚೆ; ಫುಲ್ ಟ್ರೋಲ್ ಆಗುತ್ತಿರುವ ಪ್ರಕಾಶ್ ರಾಜ್!

ಮುಂಬೈ ಪೊಲೀಸರು ಮೇ 6ರಂದು ಇನ್‌ಸ್ಟಾಗ್ರಾಮ್‌ನಲ್ಲಿ ಈ ರೀಲ್ಸ್ ಪೋಸ್ಟ್ ಮಾಡಿದ್ದಾರೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಈ ವೀಡಿಯೋ ವೈರಲ್ ಆಗಿದ್ದು, ಒಂದೇ ದಿನದಲ್ಲಿ ಮೂರು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಆಕರ್ಷಿಸಿದೆ.

Follow Us:
Download App:
  • android
  • ios