ಒಂದು ಬೀದಿ ನಾಯಿ ಲೂಡೋನಗೆ ಯುವಕರ ಅಭಿಮಾನಿಗಳ ಸಂಘವೇ ಇದೆ. ಈ ಎಲ್ಲ ಅಭಿಮಾನಿಗಳು ಸೇರಿಕೊಂಡು ಈ ನಾಯಿಯ ಹುಟ್ಟುಹಬ್ಬವನ್ನು ತೆರೆದ ಜೀಪಿನಲ್ಲಿ ಮೆರವಣಿಗೆ ಮಾಡಿದ್ದಾರೆ.

ಸಾಮಾನ್ಯವಾಗಿ ನಾವು ನಾಯಿ, ಬೆಕ್ಕು, ಕುದುರೆ, ಹಸುಗಳು ಅಥವಾ ಇನ್ನಿತರೆ ಸಾಕು ಪ್ರಾಣಿಗಳನ್ನು ಅತ್ಯಂತ ಪ್ರೀತಿಯಿಂದ ಕಾಣುತ್ತೇವೆ. ಆದರೆ, ಇಲ್ಲೊಂದು ಬೀದಿ ನಾಯಿಗೆ ಯುವಕರ ದೊಡ್ಡ ಅಭಿಮಾನಿ ಬಳಗವೇ ಇದೆ. ಈ ಅಭಿಮಾನಿಗಳಿಂದ ಪ್ರತಿ ವರ್ಷದ ಬೀದಿ ನಾಯಿಗೆ ಕೇಕ್ ಕತ್ತರಿಸಿ, ತೆರೆದ ಜೀಪಿನಲ್ಲಿ ಮದುವೆ ಸಂಭ್ರಮದಂತೆ ಮೆರವಣಿಗೆ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ ವೈರಲ್ ಆಗಿದೆ.

ಕ್ಲೋಸ್ ಫ್ರೆಂಡ್ಸ್ ಜೊತೆ ಸಾಕುಪ್ರಾಣಿಗಳ, ಅದರಲ್ಲೂ ನಾಯಿ, ಬೆಕ್ಕು, ಕುದುರೆ, ಹಸು, ಎತ್ತುಗಳ ಹುಟ್ಟುಹಬ್ಬ ಆಚರಿಸೋರು ಇದ್ದಾರೆ. ಆದರೆ, ಬೀದಿ ನಾಯಿಯ ಹುಟ್ಟುಹಬ್ಬ ಆಚರಿಸೋದನ್ನ ನೋಡಿದ್ದೀರಾ? ಪ್ರಯಾಣ ಮಾಡುವಾಗ ಎಲ್ಲಾದರೂ ಒಂದು ಬೀದಿ ನಾಯಿಗಾಗಿ ದೊಡ್ಡ ಬಿಲ್ ಬೋರ್ಡ್ ನೋಡಿದ್ದೀರಾ? ಹುಟ್ಟುಹಬ್ಬಕ್ಕೆ ತೆರೆದ ಜೀಪಿನಲ್ಲಿ ನಗರ ಸುತ್ತೋದನ್ನ ನೋಡಿದ್ದೀರಾ? ಹಾಗಾದ್ರೆ ಲೂಡೋಗೆ ಅಂತಹ ಒಂದು ಅದೃಷ್ಟ ಸಿಕ್ಕಿದೆ. 

ಲೂಡೋ ಮಧ್ಯಪ್ರದೇಶದ ದೇವಾಸ್ ನಗರದ ಒಂದು ಬೀದಿ ನಾಯಿ. ಬೀದಿಯಲ್ಲಿ ಹುಟ್ಟಿ ಬೆಳೆದ ಲೂಡೋಗೆ ತುಂಬಾ ಜನ ಅಭಿಮಾನಿಗಳು ಇದ್ದಾರೆ. ಈ ಬೀದಿನಾಯಿ ಲೂಡೋಗಾಗಿ ಅಭಿಮಾನಿಗಳು ತೆರೆದ ಜೀಪಿನಲ್ಲಿ ನಗರ ಪ್ರದಕ್ಷಿಣೆ ಮಾಡಿ, ಕೇಕ್ ಕತ್ತರಿಸಿ ಆಚರಿಸೋಕೆ ರೆಡಿ ಇದ್ದಾರೆ. ಅನ್ಸು 09 ಚೌಹಾಣ್ (Anshu Chouhan) ಅನ್ನೋ ಇನ್ಸ್ಟಾಗ್ರಾಮ್ ಅಕೌಂಟ್ ನಿಂದ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ.

ಇದನ್ನೂ ಓದಿ: ಆರಿಹೋಯ್ತು ಚಿಗಳ್ಳಿಯ ದೀಪನಾಥೇಶ್ವರ ದೇವಾಲಯದಲ್ಲಿ 4 ದಶಕದಿಂದ ನಿರಂತರವಾಗಿ ಉರಿಯುತ್ತಿದ್ದ ದೀಪ!

ಈ ವಿಡಿಯೋದಲ್ಲಿ ನಗರದ ಮಧ್ಯದಲ್ಲಿ ಒಂದು ಬಿಲ್ ಬೋರ್ಡ್ ನಲ್ಲಿ 'ನಮ್ಮ ಪ್ರೀತಿಯ, ವಿಶ್ವಾಸಿ, ಗಟ್ಟಿ ಸಹೋದರ ಲೂಡೋ, ನಿನ್ನ ಹುಟ್ಟುಹಬ್ಬಕ್ಕೆ ಶುಭಾಶಯಗಳು' ಅಂತ ಬರೆದಿರೋದು ಕಾಣುತ್ತೆ. ಸ್ಟೋರಿ ಆಫ್ ಎ ಗ್ಯಾಂಗ್ಸ್ಟರ್ ಅನ್ನೋ ಹಾಡು ಶುರುವಾಗುತ್ತದೆ. ರಾತ್ರಿ ಹಾರ ಹಾಕಿ ತೆರೆದ ಜೀಪಿನಲ್ಲಿ ಲೂಡೋ ಜೊತೆ ಯುವಕರು ನಗರದಲ್ಲಿ ಸುತ್ತಾಡೋದು ವಿಡಿಯೋದಲ್ಲಿ ಕಾಣುತ್ತದೆ.

View post on Instagram

ಬಳಿಕ ಲೂಡೋ ಅಂತ ಬರೆದ ಕೇಕ್ ಅನ್ನು ಜೀಪಿನ ಮೇಲೆ ಇಟ್ಟು ರಸ್ತೆ ಬದಿಯಲ್ಲಿ ಕತ್ತರಿಸುತ್ತಾರೆ. ಕೇಕ್ ತಿನ್ನೋ ಲೂಡೋ ನಾಯಿ ಕೂಡ ವಿಡಿಯೋದಲ್ಲಿ ಇದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೆಲವರು ನಾಯಿಗಳಿಗೆ ಕೇಕ್ ಕೊಡಬಾರದು, ಅವುಗಳ ಆರೋಗ್ಯ ಹಾಳಾಗುತ್ತೆ ಅಂತ ಎಚ್ಚರಿಕೆ ಕೊಟ್ಟಿದ್ದಾರೆ. ಇನ್ನು ಕೆಲವರು ಬೀದಿ ನಾಯಿಗೆ ಹುಟ್ಟುಹಬ್ಬ ಆಚರಿಸಿದ ಯುವಕರನ್ನ ಹೊಗಳಿದ್ದಾರೆ. ಇನ್ನು ಕೆಲವರು ಪ್ರಾಣಿ ಪ್ರೀತಿಯನ್ನು ತೋರಿಸುವ ನಿಮ್ಮಂಥ ಯುವಕರಿಗೆ ಧನ್ಯವಾದಗಳು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಹೆಂಡತಿ ತವರೂರಿಗೆ ಹೋಗಿದ್ದಾಳೆ, ಫಲಕದ ಮೂಲಕ ಡಂಗೂರ ಸಾರಿದ ಆಟೋ ಡ್ರೈವರ್!

ಅಷ್ಟಕ್ಕೂ ಈ ಬೀದಿ ನಾಯಿಗೆ ಏಕೆ ಇಷ್ಟೊಂದು ಅಭಿಮಾನಿಗಳು ಎನ್ನುವ ಪ್ರಶ್ನೆಯೂ ಕಂಡುಬರುತ್ತದೆ. ಈ ಬೀದಿ ನಾಯಿ ತಮ್ಮ ಏರಿಯಾದ ಕಿಂಗ್ ಅಂತೆ ವರ್ತಿಸುತ್ತದೆ. ಸ್ಥಳೀಯರು ಅಂದರೆ ಈ ನಾಯಿಗೆ ಆಹಾರ ಹಾಕಿದ ಯಾವುದೇ ವ್ಯಕ್ತಿಗೆ ತೊಂದರೆ ಆಗುತ್ತಿದ್ದರೂ ತೊಂದರೆ ಕೊಟ್ಟವರ ವಿರುದ್ಧ ಈ ನಾಯಿ ತಿರುಗಿ ಬೀಳುತ್ತದೆ. ಈ ನಾಯಿಯ ರಕ್ಷಣೆ ಒಂದು ಮನೆಗೆ ಸೀಮಿತವಾಗಿರದೇ ಒಂದು ಏರಿಯಾಗೆ ವಿಸ್ತರಣೆಯಾಗಿದೆ. ನೋಡಲು ಕೂಡ ಮುದ್ದಾಗಿರುವ ಈ ಬೀದಿ ನಾಯಿ ಲೂಡೋಗೆ ಯುವಕರ ಗುಂಪಿನ ಸದಸ್ಯರು ಸ್ನೇಹಿತರಾಗಿದ್ದು, ಯಾವಾಗಲೂ ಆಹಾರ ಕೊಡುತ್ತಾ ತಮ್ಮದೇ ಒಬ್ಬ ಸ್ನೇಹಿತನಂತೆ ನೋಡಿಕೊಳ್ಳುತ್ತಿದ್ದಾರೆ. ಈ ಲೂಡೋ ಕೂಡ ಅವರೊಂದಿಗೆ ತುಂಬಾ ಆತ್ಮೀಯತೆಯಿಂದ ಇರುತ್ತದೆ.