ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದ ಅಜ್ಜಿಯ ಅಂಗಡಿಯನ್ನು ಯುವಕನೊಬ್ಬ ಕಿತ್ತೆಸೆದ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದ್ದು, ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ.
ಇಂದು ಸೋಶಿಯಲ್ ಮೀಡಿಯಾದಲ್ಲಿ ಸಿಗುವ ಲೈಕ್ಸ್, ವ್ಯೂವ್‌ಗಾಗಿ ಜನರು ಏನೇನೋ ಹರಸಹಾಸ ಮಾಡುತ್ತಾರೆ. ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಆಗುವ ಮೂಲಕ ಒಳ್ಳೆಯ ಆದಾಯವನ್ನು ಕಂಡುಕೊಳ್ಳುತ್ತಿದ್ದಾರೆ. ದೇಶ-ವಿದೇಶ ಸುತ್ತುವ ಮೂಲಕ ಅಲ್ಲಿಯ ಸ್ಥಳಗಳನ್ನು ತೋರಿಸುವ ಮೂಲಕ ಹಣ ಸಂಪಾದನೆ ಮಾಡುತ್ತಾರೆ. ಒಂದಿಷ್ಟು ಜನರು ವಿಚಿತ್ರವಾಗಿ ಏನೇನೋ ಮಾಡಲು ಹೋಗಿ ಟ್ರೋಲ್ ಆಗ್ತಾರೆ. ಬೆರಳಣಿಕೆ ಜನರು ಮಾತ್ರ ಸೋಶಿಯಲ್ ಮೀಡಿಯಾ ವೇದಿಕೆ ಮೂಲಕ ಸಮಾಜಸೇವೆ ಮಾಡುತ್ತಾರೆ. ಇಂತಹ ಕೆಲಸಗಳ ಮೂಲಕ ಸೋಶಿಯಲ್ ಮೀಡಿಯಾ ವೇದಿಕೆಗಳನ್ನು ಸದ್ಬಳಕೆ ಮಾಡಿಕೊಳ್ಳುತ್ತಾರೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಒಳ್ಳೆಯ ಕೆಲಸವೊಂದು ವೈರಲ್ ಆಗಿದೆ.
ವೈರಲ್ ಆಗಿರುವ ವಿಡಿಯೋವನ್ನು ಸಂಜಯ್ ಕುಮಾರ್ (Sanjay Kumar, help_by__god) ಹೆಸರಿನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಇನ್‌ಸ್ಟಾಗ್ರಾಂ ಖಾತೆಯಲ್ಲಿ 6.5 ಮಿಲಿಯನ್ ಫಾಲೋವರ್ಸ್‌ಗಳನ್ನು ಹೊಂದಿರುವ ಸಂಜಯ್ ಕುಮಾರ್, ಒಳ್ಳೆಯ ಕೆಲಸಗಳ ವಿಡಿಯೋಗಳಿಂದ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಅಜ್ಜಿಗೆ ಸಹಾಯ ಮಾಡಿದ ವಿಡಿಯೋವೊಂದು ಹೆಚ್ಚು ವೈರಲ್ ಆಗಿದೆ.
ವೈರಲ್ ಆಗಿರುವ ವಿಡಿಯೋಗೆ 97 ಲಕ್ಷಕ್ಕೂ ಅಧಿಕ ಲೈಕ್ಸ್ ಮತ್ತು ಸಾವಿರಾರು ಕಮೆಂಟ್‌ಗಳು ಬಂದಿವೆ. ಈ ವಿಡಿಯೋ ನೋಡಿದ ನೆಟ್ಟಿಗರು, ನಿಮ್ಮ ಈ ಕೆಲಸ ನೋಡಿ ಹೃದಯ ತುಂಬಿ ಬಂದಿದೆ. ನಿಮಗೊಂದು ಸಲಾಂ. ಆರ್ಥಿಕವಾಗಿ ಸದೃಢವಾದ್ರೂ ಸಮಾಜಕ್ಕೆ ಏನಾದರೂ ನೀಡುವ ಕೆಲಸ ಮಾಡಬೇಕು. ನೀವು ಮಾಡುತ್ತಿರೋದು ಒಳ್ಳೆಯ ಕೆಲಸ ಎಂದು ಕಮೆಂಟ್ ಮಾಡಿದ್ದಾರೆ.
ವೈರಲ್ ವಿಡಿಯೋದಲ್ಲಿ ಏನಿದೆ?
ಅಜ್ಜಿಯೊಬ್ಬಳು ವಿವಿಧ ಕಾಳುಗಳನ್ನು ರಸ್ತೆ ಬದಿ ಇರಿಸಿಕೊಂಡು ವ್ಯಾಪಾರ ಮಾಡುತ್ತಿರುತ್ತಾಳೆ. ಬಿಸಿಲಿನಿಂದ ರಕ್ಷಣೆ ಪಡೆದುಕೊಳ್ಳಲು ತಾಡಪತ್ರಿಯಿಂದ ನೆರಳು ಮಾಡಿಕೊಂಡಿರುತ್ತಾಳೆ. ಅಜ್ಜಿ ಬಳಿಗೆ ಬರುವ ಯುವಕ ನೋಡುತ್ತಿದ್ದಂತೆ ನೆರಳಿಗೆ ಮಾಡಿಕೊಂಡಿದ್ದ ಹಾಳೆ ಕಿತ್ತೆಸೆಯಲು ಮುಂದಾಗುತ್ತಾನೆ. ಇದರಿಂದ ಆತಂಕಕ್ಕೊಳಾದ ಅಜ್ಜಿ, ಹೀಗೆಲ್ಲಾ ಮಾಡಬೇಡ ಎಂದು ಯುವಕನಿಗೆ ಕೈ ಮುಗಿಯುತ್ತಾಳೆ. ಆದ್ರೂ ಯುವಕ, ಎಲ್ಲಾ ಹಾಳೆ ಮತ್ತು ಸುತ್ತಲಿದ್ದ ವಸ್ತುಗಳನ್ನು ತೆಗೆದು ಸ್ವಚ್ಛ ಮಾಡುತ್ತಾನೆ. ಆನಂತರ ಅಜ್ಜಿಗೆ ತಾನು ಮಾಡುತ್ತಿರುವ ಕೆಲಸದ ಬಗ್ಗೆಯೂ ಹೇಳುತ್ತಾನೆ.
ಆನಂತರ ಆ ಸ್ಥಳದಲ್ಲಿ ದೊಡ್ಡದಾದ ಚಾಪೆ ಹಾಕಿ, ಅಜ್ಜಿಯನ್ನು ಕುರ್ಚಿ ಮೇಲೆ ಕೂರಿಸುತ್ತಾನೆ. ನೆರಳಿಗೆ ದೊಡ್ಡ ಛತ್ರಿಯೊಂದನ್ನು ಸಹ ಹಾಕುತ್ತಾನೆ. ಆನಂತರ ಅಜ್ಜಿಗೆ ಅಂಗಡಿಯನ್ನು ಹಾಕಿಕೊಟ್ಟು, ಪಕ್ಕದಲ್ಲಿದ್ದ ಪಾರಿವಾಳಗಳಿಗೆ ಕಾಳುಗಳನ್ನು ನೀಡುತ್ತಾನೆ. ಕೊನೆಗೆ ಅಜ್ಜಿಗೆ ಒಂದಿಷ್ಟು ಹಣವನ್ನು ನೀಡಿ, ಆಶೀರ್ವಾದ ಪಡೆದುಕೊಂಡು ಹಿಂದಿರುಗುತ್ತಾನೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಮಿಂಚಿನಂತೆ ಸುಳಿದಾಡುತ್ತಿದೆ.
ನೆಟ್ಟಿಗರು ಹೇಳಿದ್ದೇನು?
ಸೋದರನೇ ಆ ಅಜ್ಜಿಗೆ ಸಹಾಯ ಮಾಡುವ ಉದ್ದೇಶವಿದ್ರೆ ಹಳೆಯ ಗುಡಿಸಲು ನಾಶ ಮಾಡಬಾರದಿತ್ತು? ಪಕ್ಕದಲ್ಲಿಯೇ ಛತ್ರಿ ಹಾಕಿ ಆಸರೆ ಮಾಡಿಕೊಡಬಹುದಿತ್ತು ಎಂದು ಕಮೆಂಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಮತ್ತೋರ್ವ ನೆಟ್ಟಿಗರು, ಪಬ್ಲಿಕ್ ವ್ಯೂವ್ ಸೆಳೆಯಲು ಹೀಗೆಲ್ಲಾ ಮಾಡ್ತಾರೆ ಎಂದು ಪ್ರತಿಕ್ರಿಯಿಸಿದ್ದಾರೆ. ಆ ವ್ಯಕ್ತಿ ಅಷ್ಟು ಸಹಾಯ ಮಾಡಿದ್ದಕ್ಕೆ ಅಷ್ಟು ಬಿಲ್ಡಪ್ ತೆಗೆದುಕೊಂಡಿದ್ದಾನೆ. ಇಂದು ಯಾರು ಸಹ ಒಂದು ರೂಪಾಯಿ ನೀಡಲ್ಲ. ಈ ರೀತಿಯ ಕಾರ್ಯಗಳಿಂದ ಕೆಲವರಿಗೆ ಸಹಾಯವಾದ್ರೆ ಸಾಕು. ಈ ರೀತಿಯ ನೆಗೆಟಿವ್ ಕಮೆಂಟ್‌ಗಳು ಬೇಡ ಎಂದಿದ್ದಾರೆ.
ಇದನ್ನೂ ಓದಿ: Viral Video: ಮದ್ವೆಯಾಗ್ತಿರೋ ಮನೆಕೆಲಸದಾಕೆಗೆ ಹೃದಯಸ್ಪರ್ಶಿ ಬೀಳ್ಕೊಡುಗೆ: ಎಲ್ಲರ ಮನ ಗೆದ್ದ ಗೃಹಿಣಿ
