ಒಂದು ಸೆಲ್ಫಿ ಆಸೆಗಾಗಿ 100 ಅಡಿ ಆಳದ ಪ್ರಪಾತಕ್ಕೆ ಬಿದ್ದ ಯುವತಿ... ರಕ್ಷಣಾ ಕಾರ್ಯಾಚರಣೆಯ ವಿಡಿಯೋ ನೋಡಿ

ಯುವತಿಯೊಬ್ಬಳು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹೋಗಿ 100 ಅಡಿ ಅಳದ ಪ್ರಪಾತಕ್ಕೆ ಬಿದ್ದಿದ್ದಾಳೆ. ಅಲ್ಲಿದ್ದ ಸಿಬ್ಬಂದಿ ದೇವರಂತೆ ಪ್ರಪಾತಕ್ಕೆ ಇಳಿದು ಯುವತಿಯನ್ನು ರಕ್ಷಣೆ ಮಾಡಿದ್ದಾರೆ.

young girl fall in 100 feet deep ditch while taking selfie in satara falls mrq

ಪುಣೆ: ಅಪಾಯದ ಸ್ಥಳಗಳಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹೋಗಿ ಪ್ರಾಣ ಕಳೆದುಕೊಂಡಿರುವ ಪ್ರಕರಣಗಳು ವರದಿಯಾದ್ರೂ ಜನರು ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ. ಪ್ರವಾಸಿ ಸ್ಥಳಗಳಿಗೆ ಹೋದ್ರೆ ಸಾಕು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಜನರು ಮುಂದಾಗುತ್ತಾರೆ. ಅದರಲ್ಲಿಯೂ ಎತ್ತರದ ಪ್ರದೇಶಗಳಲ್ಲಿ ಸೆಲ್ಫಿ ಹುಚ್ಚಾಟ ಕೊಂಚ ಹೆಚ್ಚಾಗಿರುತ್ತದೆ. ಅಪಾಯದ ಸ್ಥಳದಲ್ಲಿ ಕ್ಲಿಕ್ಕಿಸಿಕೊಳ್ಳುವ ಫೋಟೋಗಳಿಗೆ ಹೆಚ್ಚು ಲೈಕ್ಸ್, ಕಮೆಂಟ್ ಬರುತ್ತವೆ ಎಂದು ಹೇಳಿ ಪ್ರಾಣಕ್ಕೆ ಅಪಾಯ ತಂದುಕೊಳ್ಳುತ್ತಾರೆ. ಹಾಗಾಗಿ ಪ್ರವಾಸಿ ಸ್ಥಳಗಳಲ್ಲಿ ರಕ್ಷಣಾ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿರುತ್ತದೆ. ನಿಷೇಧಿತ ಪ್ರದೇಶ ಎಂಬ ಪ್ರದೇಶಕ್ಕೆ ನುಗ್ಗಿ ಹಲವರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಪುಣೆಯಲ್ಲಿ ಯುವತಿಯೊಬ್ಬಳು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹೋಗಿ 100 ಅಡಿ ಅಳದ ಪ್ರಪಾತಕ್ಕೆ ಬಿದ್ದಿದ್ದಾಳೆ. ಅಲ್ಲಿದ್ದ ಸಿಬ್ಬಂದಿ ದೇವರಂತೆ ಪ್ರಪಾತಕ್ಕೆ ಇಳಿದು ಯುವತಿಯನ್ನು ರಕ್ಷಣೆ ಮಾಡಿದ್ದಾರೆ.

ಶನಿವಾರ ಸಂಜೆ ಈ ಘಟನೆ ನಡೆದಿದ್ದು ಎನ್ನಲಾಗಿದ್ದು, ರಕ್ಷಣಾ ಕಾರ್ಯಾಚರಣೆಯ ವಿಡಿಯೋವನ್ನು ಸೆರೆ ಹಿಡಿದಿರುವ ಪ್ರವಾಸಿಗರು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು. ಯುವತಿಯ ಪಾಲಿಗೆ ಅಲ್ಲಿಯ ಸಿಬ್ಬಂದಿ ದೇವರು ಎಂದು ಕಮೆಂಟ್ ಮಾಡುತ್ತಿದ್ದಾರೆ. ವಿಡಿಯೋದಲ್ಲಿರುವ ಯುವತಿ ತನ್ನ ಸ್ನೇಹಿತರ ಜೊತೆ ಮಹಾರಾಷ್ಟ್ರದ ಸತಾರಾದ ಬೋರ್ನೆ ಘಾಟ್‌ದಲ್ಲಿರುವ ಥೋಸ್ಗರ್ ಜಲಪಾತ ನೋಡಲು ತೆರಳಿದ್ದಳು. ಜಲಪಾತದ ಬಳಿ ಹೋಗುತ್ತಿದ್ದಂತೆ ಯುವತಿ ಮೊಬೈಲ್ ಕ್ಯಾಮೆರಾ ಆನ್ ಮಾಡಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಂದಾಗಿದ್ದಳು. ಈ ಸಮಯದಲ್ಲಿ ಮಳೆಯಾಗಿದ್ದರಿಂದ ಅಲ್ಲಿಯ ಪ್ರದೇಶವೆಲ್ಲಾ ತೇವದಿಂದ ಕೂಡಿದ್ದು, ಜಾರುತ್ತಿತ್ತು. ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದಾಗ ಕಾಲು ಜಾರಿದ್ದರಿಂದ ಯುವತಿ 100 ಅಡಿ ಆಳಕ್ಕೆ ಬಿದ್ದಿದ್ದಾಳೆ. 

ರೈಲ್ವೇ ಟಾಯ್ಲೆಟ್ ಸೀಟ್ ನೆಕ್ಕಿ, ಮೈತುಂಬಾ ಮಲ ಹಚ್ಚಿಕೊಂಡು  ಸೆಲ್ಫಿ ಕ್ಲಿಕ್ಕಿಸಿಕೊಂಡ ರಾಜಕಾರಣಿ

ಯುವತಿ ಪ್ರಪಾತಕ್ಕೆ ಬೀಳುತ್ತಿದ್ದಂತೆ ಆಕೆಯ ಸ್ನೇಹಿತರು ಮತ್ತು ಇತರ ಪ್ರವಾಸಿಗರು ಸಹಾಯಕ್ಕಾಗಿ ಕೂಗಲಾರಂಭಿಸಿದ್ದಾರೆ. ಸ್ಥಳದಲ್ಲಿದ್ದ ರಕ್ಷಣಾ ಸಿಬ್ಬಂದಿ ತಮ್ಮ ಪ್ರಾಣವನ್ನೂ ಲೆಕ್ಕಿಸದೇ ಪ್ರಪಾತಕ್ಕೆ ಇಳಿದು ರಕ್ಷಣಾಕಾರ್ಯ ಆರಂಭಿಸಿದ್ದಾರೆ. ಕೆಳಗಿಳಿದ ವ್ಯಕ್ತಿ ಯುವತಿಯನ್ನು ರಕ್ಷಿಸಿ ಹಗ್ಗದ ಸಹಾಯದಿಂದ ಮೇಲಕ್ಕೆ ಬರೋದನ್ನು ವಿಡಿಯೋದಲ್ಲಿ ಗಮನಿಸಬಹುದಾಗಿದೆ. ಕಲ್ಲು ಬಂಡೆಗಳ ನಡುವೆ ಬಿದ್ದಿದ್ದರಿಂದ ಗಾಯಗೊಂಡ ಯುವತಿ ನೋವಿನಿಂದ ಜೋರಾಗಿ ಅತ್ತಿದ್ದಾಳೆ. ನಂತರ ಯುವತಿಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳು ಯುವತಿಯನ್ನು 21 ವರ್ಷದ ನಸ್ರೀನ್ ಅಮೀರ್ ಕುರೈಶಿ ಎಂದು ಗುರುತಿಸಲಾಗಿದೆ.

ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿರುವ ಕಾರಣ ಜಲಪಾತದಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದೆ. ಹಾಗಾಗಿ ಥೋಸ್ಗರ್ ಜಲಪಾತಕ್ಕೆ ಭೇಟಿ ನೀಡುತ್ತಿರುವ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಜಿಲ್ಲಾಧಿಕಾರಿಗಳು ಪ್ರವಾಸಿ ಸ್ಥಳಗಳ ಭೇಟಿಗೆ ಆಗಸ್ಟ್ 2 ರಿಂದ 4ವರೆಗೆ ನಿಷೇಧಿಸಿ ಆದೇಶ ಹೊರಡಿಸಿದ್ದರೂ ಪ್ರವಾಸಿಗರು ಕಳ್ಳದಾರಿ ಮೂಲಕ ಭೇಟಿ ನೀಡಿ, ಜೀವಕ್ಕೆ ಅಪಾಯ ತಂದುಕೊಳ್ಳುತ್ತಿದ್ದಾರೆ.

ರಾತ್ರಿ ಮಹಿಳೆಯಿಂದ ಬಂತು ಫೋನ್ ಕಾಲ್; ಕಾಡು ಸೇರಿ, ನನ್ನಿಂದ ಆಗಲ್ಲ ಎಂದು ವಿಷ ಕುಡಿದ ಯುವಕ

Latest Videos
Follow Us:
Download App:
  • android
  • ios