ಕಂದಕಕ್ಕೆ ಬಿದ್ದ ಮರಿಯಾನೆಯ ರಕ್ಷಣೆ ಆರ್ಕಿಮಿಡೀಸ್‌ ತಂತ್ರ ಪ್ರಯೋಗಿಸಿದ ಅರಣ್ಯ ಸಿಬ್ಬಂದಿ ಹೊಂಡಕ್ಕೆ ನೀರು ತುಂಬಿ ಆನೆಯನ್ನು ಮೇಲೆ ತಂದ ಸಿಬ್ಬಂದಿ

ಪಶ್ಚಿಮಬಂಗಾಳ(ಫೆ.22) ಮರಿಯಾನೆಯೊಂದು ಅರಣ್ಯದಲ್ಲಿ ಸಾಗುತ್ತಿದ್ದ ವೇಳೆ ದೊಡ್ಡದಾದ ಕಂದಕಕ್ಕೆ ಬಿದ್ದಿದ್ದು ಇದನ್ನು ಅರಣ್ಯ ಸಿಬ್ಬಂದಿ ಊರವರ ಸಹಾಯದಿಂದ ಸಾಹಸ ಮಾಡಿ ಮೇಲೆತ್ತಿದ್ದಾರೆ. ಮರಿಯಾನೆಯನ್ನು ರಕ್ಷಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಕಂದಕಕ್ಕೆ ಬಿದ್ದ ಮರಿಯಾನೆಯನ್ನು ಮೇಲೆತ್ತಲೂ ಇಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಭೌತಶಾಸ್ತ್ರವನ್ನು ಬಳಸಿದ್ದಾರೆ. ಹೌದು ದೊಡ್ಡದಾದ ಕಂದಕಕ್ಕೆ ನೀರು ತುಂಬಿಸಿ ಜೊತೆಗೆ ದೊಡ್ಡದಾದ ಹಗ್ಗಗಳನ್ನು ಕೆಳಗೆ ಬಿಟ್ಟು ಅದರ ಸಹಾಯದಿಂದ ಆನೆ ಮೇಲೆ ಬರುವಂತೆ ಮಾಡಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ(West Bengal) ಎಳೆಯ ಆನೆಯೊಂದು ಆಳವಾದ ಕಂದಕಕ್ಕೆ ಬಿದ್ದಿದ್ದು ಅದನ್ನು ಹೊರತರಲು ಅರಣ್ಯ ಅಧಿಕಾರಿಗಳು ಕೆಲವು ಭೌತಶಾಸ್ತ್ರ ತಂತ್ರವನ್ನು ಪ್ರಯೋಗಿಸಿದರು. ಆರ್ಕಿಮಿಡಿಸ್ ತತ್ವವನ್ನು ಅನ್ವಯಿಸಿ,ಅರಣ್ಯ ಸಿಬ್ಬಂದಿ ಈ ಹೊಂಡವನ್ನು ನೀರಿನಿಂದ ತುಂಬಿಸಿದರು. ಇದರ ಮೂಲಕ ಆನೆಯೂ ಅಂತಿಮವಾಗಿ ಸುರಕ್ಷಿತವಾಗಿ ಹೊರಬರಲು ಸಹಾಯ ಮಾಡಿದರು.

Scroll to load tweet…
Scroll to load tweet…
Scroll to load tweet…

ಇಂಟರ್‌ನೆಟ್‌ನಲ್ಲಿ ಸುತ್ತು ಹೊಡೆಯುತ್ತಿರುವ ಈ ವೀಡಿಯೊದಲ್ಲಿ, ಎಳೆಯ ಪ್ರಾಯದ ಆನೆಯು ಆಳವಾದ ಕಂದಕದೊಳಗೆ ಹೆಣಗಾಡುತ್ತಿರುವುದನ್ನು ಕಾಣಬಹುದು, ಅದು ತನ್ನ ಸೊಂಡಿಲನ್ನು ಬಳಸಿ ಹೊಂಡದಿಂದ ಹೊರಬರಲು ಪ್ರಯತ್ನಿಸುತ್ತಿದೆ. ಆದಾಗ್ಯೂ, ಅದರ ದೇಹದ ಭಾರದಿಂದ ಮೇಲೆರುವ ಪ್ರಕ್ರಿಯೆಗೆ ಅಡ್ಡಿಯಾಗುತ್ತಲೇ ಇತ್ತು. ಹೀಗಾಗಿ ಈ ಆನೆಗೆ ತೇಲಲು ಸಹಾಯ ಮಾಡಲು ಅರಣ್ಯ ಇಲಾಖೆ ಅಧಿಕಾರಿಗಳು ಗುಂಡಿಗೆ ನೀರನ್ನು ತುಂಬಿಸುತ್ತಾರೆ. ಬಳಿಕ ಹಲವಾರು ಹಗ್ಗಗಳ ಮೂಲಕ ಆನೆ ಮೇಲೆ ಬರಲು ಸಹಾಯ ಮಾಡುವುದನ್ನು ವೀಡಿಯೊದಲ್ಲಿ ಕಾಣಬಹುದು. ಜಿಲ್ಲಾ ಅರಣ್ಯ ಅಧಿಕಾರಿ (ಡಿಎಫ್‌ಒ) ಸಂದೀಪ್ ಬೆರ್ವಾಲ್ (Sandeep Berwal) ಪ್ರಕಾರ, ಮಧ್ಯರಾತ್ರಿಯ ನಂತರ ಮೇದಿನಿಪುರ ಜಿಲ್ಲೆಯ (Medinipur) ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಆನೆ ಕಂದಕದಿಂದ ಹೊರಗೆ ಬಂದಿರುವುದನ್ನು ಖಚಿತಪಡಿಸಿದರು.

ಲೈಕ್ಸ್‌ಗಾಗಿ ಆನೆಗೆ ಕಿರುಕುಳ: ಟಿಕ್‌ಟಾಕರ್‌ ಹುಚ್ಚಾಟಕ್ಕೆ ನೆಟ್ಟಿಗರ ಆಕ್ರೋಶ

ಆರ್ಕಿಮಿಡೀಸ್ ತತ್ವದ ಪ್ರಕಾರ, ಒಂದು ದ್ರವದಲ್ಲಿ ವಿಶ್ರಾಂತಿಯಲ್ಲಿರುವ ದೇಹವು ತೇಲುವ ಬಲ ಎಂದು ಕರೆಯಲ್ಪಡುವ ಬಲದಿಂದ ಮೇಲಕ್ಕೆ ತಳ್ಳಲ್ಪಡುತ್ತದೆ. ಈ ವಿಡಿಯೋ ವೈರಲ್‌ ಆಗುತ್ತಿದ್ದಂತೆ ಎಳೆಯ ಪ್ರಾಯದ ಆನೆ ಸಕಾಲಿಕ ಸಹಾಯವನ್ನು ಪಡೆದಿದ್ದಕ್ಕಾಗಿ ನೆಟಿಜನ್‌ಗಳು ಸಂತೋಷಪಟ್ಟರು ಜೊತೆಗೆ ಈ ತಂತ್ರದಿಂದ ಪ್ರಭಾವಿತರಾದರು. ಆರ್ಕಿಮಿಡಿಸ್‌ ಸಿದ್ಧಾಂತವು ಪ್ರಾಯೋಗಿಕವಾಗಿ ಹೇಗೆ ಬಳಸಲ್ಪಡುತ್ತದೆ ಎಂಬುದನ್ನು ತೋರಿಸಲು ಇದು ಒಂದು ಸುಂದರವಾದ ಉದಾಹರಣೆಯಾಗಿದೆ.
ಕಾಡು ಪ್ರಾಣಿಗಳು ಮತ್ತು ಮನುಷ್ಯರಿಗೆ ಇಂತಹ ಆಳವಾದ ಕಂದಕಗಳು ಎಷ್ಟು ಅಪಾಯಕಾರಿ ಎಂದು ಕೆಲವರು ಚರ್ಚಿಸಿದರೆ, ಭವಿಷ್ಯದಲ್ಲಿ ಇಂತಹ ಅಹಿತಕರ ಸಂದರ್ಭಗಳನ್ನು ತಪ್ಪಿಸಲು ಇವುಗಳನ್ನು ಮುಚ್ಚಬೇಕು ಎಂದು ಕೆಲವರು ಸಲಹೆ ನೀಡಿದರು.

ತಾಯಾನೆ ಹಾಲಿಗೆ ಮರಿಗಳೆರಡರ ಕಿತ್ತಾಟ... ಅಮ್ಮ ಏನ್ಲಾಡಿದ್ಲು ನೋಡಿ...!