Asianet Suvarna News Asianet Suvarna News

Yogi Warns 'Abba Jaan': ಸಿಎಎ ವಿರುದ್ಧ ದಂಗೆ ಏಳಿಸುವವರ ಮೇಲೆ ಬುಲ್ಡೋಜರ್‌ ಹತ್ತಿಸಲು ಯೋಚಿಸಲ್ಲ

ಸಿಎಎ ಕಾಯ್ದೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಜನರ ಭಾವನೆಗಳನ್ನು ಕೆರಳಿಸುತ್ತಿರುವ ಜನ ನಾಯಕರ ವಿರುದ್ಧ ಉತ್ತರ ಪ್ರದೇಶ ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತದೆ ಎಂದು ಯುಪಿ ಸಿಎಂ ಆದಿತ್ಯನಾಥ್‌ ಎಚ್ಚರಿಕೆ ನೀಡಿದ್ದಾರೆ.  

YOGI WARNS ABBA JAAN DONT INFLAME PASSIONS OVER CAA AKB
Author
Uttarapradesh, First Published Nov 24, 2021, 6:34 PM IST

ಸಿಎಎ ಕಾಯ್ದೆ(Citizenship Amendment Act) ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಜನರ ಭಾವನೆಗಳನ್ನು ಕೆರಳಿಸುತ್ತಿರುವ ಜನ ನಾಯಕರ ವಿರುದ್ಧ ಉತ್ತರ ಪ್ರದೇಶ ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತದೆ ಎಂದು ಯುಪಿ ಸಿಎಂ ಆದಿತ್ಯನಾಥ್‌ ಎಚ್ಚರಿಕೆ ನೀಡಿದ್ದಾರೆ. ಹಿಂದಿನ ಅವಧಿಯಲ್ಲಿ ರಾಜ್ಯವೂ ಪ್ರತಿ ಮೂರು ಅಥವಾ ನಾಲ್ಕು ದಿನಗಳಿಗೊಮ್ಮೆ ಗಲಭೆಯನ್ನು ಎದುರಿಸಿದೆ. ನಾವು ಗಲಭೆಕೋರರನ್ನು ರಕ್ಷಿಸುವುದಿಲ್ಲ. ಬದಲಾಗಿ ಅವರ ಎದೆಯ ಮೇಲೆ ಬುಲ್ಡೋಜರ್‌ನ್ನು ಓಡಿಸುತ್ತೇವೆ ಎಂದು ಯೋಗಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಕಾನ್ಪುರದಲ್ಲಿ ಬೂತ್‌ ಮಟ್ಟದ  ನಾಯಕರ ಜೊತೆ ನಡೆಸಿದ ಸಭೆಯಲ್ಲಿ ಮಾತನಾಡಿದ ಯೋಗಿ, ವ್ಯಕ್ತಿಯೊಬ್ಬ ಮತ್ತೊಮ್ಮೆ ಸಿಎಎ ಹೆಸರಿನಲ್ಲಿ ಜನರ ಭಾವನೆಗಳನ್ನು ಕೆರಳಿಸುತ್ತಿದ್ದಾರೆ ಎಂದು ಪರೋಕ್ಷವಾಗಿ ಎಐಎಂಐಎಂ((AIMIM) ನಾಯಕ ಅಸಾದುದ್ದೀನ್‌ ಓವೈಸಿ( Asaduddin Owaisi) ವಿರುದ್ಧ ವಾಗ್ದಾಳಿ ನಡೆಸಿದರು. ಅಸಾದುದ್ದೀನ್‌ ಓವೈಸಿ ಇತ್ತೀಚೆಗೆ ಸಿಎಎಯನ್ನು ಹಿಂಪಡೆಯುವಂತೆ ಒತ್ತಾಯಿಸಿದ್ದರು.

ಕಳೆದ  ಸೆಪ್ಟೆಂಬರ್‌ನಲ್ಲಿ ಉರ್ದು ಭಾಷೆಯಲ್ಲಿ ತಂದೆಯನ್ನು ಕರೆಯುವ ಪದವನ್ನು ಬಳಸಿಕೊಂಡು ಹೇಳಿಕೆ ನೀಡಿದ ಸಿಎಂ ಯೋಗಿ, ಕಳೆದ ಬಾರಿಯ ಸರ್ಕಾರ ನೀಡುತ್ತಿದ್ದ ಪಡಿತರ ಎಲ್ಲವೂ ಅಬ್ಬಾ ಜಾನ್‌ ಎಂದು ಕರೆಯುವವರ ಪಾಲಾಗಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಯೋಗಿಯವರ ಈ ಹೇಳಿಕೆ ತೀವ್ರ ಟೀಕೆಗೆ ಗುರಿಯಾಗಿತ್ತು. ಇದೇ ಸಂದರ್ಭದಲ್ಲಿ ಅಸಾದುದ್ಧೀನ್‌ ಓವೈಸಿ  ವಿರುದ್ಧ ವಾಗ್ದಾಳಿ ನಡೆಸಿದ ಯೋಗಿ, ಹೈದರಾಬಾದ್‌ ಮೂಲದ ನಾಯಕನ ಪಕ್ಷ ಉತ್ತರಪ್ರದೇಶದ ವಿಧಾನಸಭೆ(UP assembly election)ಯಲ್ಲಿ ಸ್ಪರ್ಧೆ ಮಾಡುತ್ತಿದೆ. ಈತ ಸಮಾಜವಾದಿ(Samajwadi Party) ಪಕ್ಷದ ಏಜೆಂಟ್‌ ಎಂದು ಅವರು ದೂರಿದರು. ಸಮಾಜವಾದಿ ಪಕ್ಷದ ಓರ್ವ ಏಜೆಂಟ್‌ ಆಗಿ ಓವೈಸಿ ಭಾವೋದ್ರೇಕದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆದರೆ ಈಗ ರಾಜ್ಯ ಗಲಭೆ ರಹಿತವಾಗಿದೆ. ಗಲಭೆ ಮಾಡುವವರ ಎದೆಯ ಮೇಲೆ ಬುಲ್ಡೋಜರ್‌ ಓಡಿಸಲು ಸರ್ಕಾರ ಸಿದ್ಧವಾಗಿದೆ ಎಂದರು. 

Uttar Pradesh | ಮೋದಿ-ಯೋಗಿ ‘ಡಬಲ್‌ ಎಂಜಿನ್‌’ ಫೋಟೋ ವೈರಲ್‌

ಉತ್ತರಪ್ರದೇಶ ಸಿಎಂ ಯೋಗಿಯ ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಓವೈಸಿ, ಬುಲ್ಡೋಜರ್‌ ಅಲ್ಲ, ಅವರು ಥಾರ್‌ ಓಡಿಸಿದ್ದು, ಈ ಸಂದರ್ಭದಲ್ಲಿ ಮೃತಪಟ್ಟವರು, ಗಲಭೆಕೋರರು ಅಥವಾ ಯಾವುದೋ ಮಾಫಿಯಾಕ್ಕೆ ಸೇರಿದವರಾಗಿರಲಿಲ್ಲ. ಅವರು ಕೇವಲ ಲಖೀಂಪುರ ಖೇರಿ( Lakhimpur Kheri)ಯ ರೈತರಾಗಿದ್ದರು ಎಂದು ತಿರುಗೇಟು ನೀಡಿದ್ದಾರೆ. ಅಕ್ಟೋಬರ್‌ ೫ರಂದು ಲಖೀಂಪುರ ಖೇರಿಯಲ್ಲಿ ನಡೆದ ಹಿಂಸಾಚಾರದಲ್ಲಿ ನಾಲ್ವರು ರೈತರು ಸೇರಿದಂತೆ ೮ ಜನ ಸಾವಿಗೀಡಾಗಿದ್ದರು. ಕೃಷಿ ಕಾನೂನಿನ ವಿರುದ್ಧ ಹೋರಾಟ ನಡೆಸುತ್ತಿದ್ದ ರೈತರ ಮೇಲೆ ಕೇಂದ್ರ ಸಚಿವ ಅಜಯ್‌ ಮಿಶ್ರಾ(Union minister Ajay Mishra) ಅವರಿದ್ದ ಕಾರು ಹರಿದಿತ್ತು. ಸಚಿವರ ಪುತ್ರನೂ ಕಾರಿನಲ್ಲಿದ್ದ ಎಂದು ಆ ಸಂದರ್ಭದಲ್ಲಿ ರೈತರು ಆರೋಪಿಸಿದ್ದರು. ಆದರೆ ಆರೋಪಿಯ ತಂದೆ ಈಗಲೂ ಸಚಿವರಾಗಿದ್ದಾರೆ ಎಂದ ಓವೈಸಿ. ನಾನು ದೇಶಕ್ಕೆ ಸ್ವಾತಂತ್ರ ತಂದು ಕೊಟ್ಟವರ ಹಾಗೂ ಸಿಎಎಯನ್ನು ಧರ್ಮದಿಂದ ಹೊರಗೆ ಇಟ್ಟವರ ಏಜೆಂಟ್‌ ಎಂದು ಪ್ರತಿಕ್ರಿಯಿಸಿದ್ದಾರೆ.

ಯೋಗಿ ಆಡಳಿತಕ್ಕೆ ಬ್ರೇಕ್ ಹಾಕುವ ಶಕ್ತಿ ಯಾರಿಗಿದೆ..? ಸರ್ವೆ ಲೆಕ್ಕಾಚಾರ ಹೀಗಿದೆ

ಇದೇ ಸಂದರ್ಭದಲ್ಲಿ ಕಾನ್ಪುರದ ನಾಮ್‌ದೇವ್‌ ಗುರುದ್ವಾರಕ್ಕೆ ಭೇಟಿ ನೀಡಿದ  ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ( BJP president J P Nadda), ಅಲ್ಲಿ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಸಿಖ್‌ ಸಮುದಾಯಕ್ಕೆ ಪ್ರಧಾನಿ ನರೇಂದ್ರ ಮೋದಿ ಮಾಡಿದಷ್ಟು ಒಳ್ಳೆಯ ಕಾರ್ಯವನ್ನು ಬೇರೆ ಯಾವ ನಾಯಕರೂ ಮಾಡಿಲ್ಲ. ಅಫ್ಘಾನಿಸ್ತಾನ(Afghanistan)ದಿಂದ ಗುರು ಗ್ರಂಥ ಸಾಹೀಬ್‌(Guru Granth Sahib)ನ  ಪ್ರತಿ ಭಾರತಕ್ಕೆ ತಲುಪಲಿದ್ದು, ಮೋದಿಯವರಿಂದ ಇದು ಸಾಧ್ಯವಾಗಿದೆ ಎಂದರು. ಬಿಜೆಪಿಯ ಓರ್ವ ಸೈನಿಕನಾಗಿ ನಾನು ಗುರು ನಾಮ್‌ದೇವ್‌ ಜೀಯವರ ಪಾದಗಳಿಗೆರಗುವೆ ಎಂದು ಅವರು ಹೇಳಿದರು. 

Follow Us:
Download App:
  • android
  • ios