UP New CM ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್ ಪ್ರಮಾಣವಚನ, ಮೋದಿ, ಶಾ ಭಾಗಿ!

  • ಎರಡನೇ ಅವಧಿಗೆ ಯುಪಿ ಮುಖ್ಯಮಂತ್ರಿಯಾಗಿ ಯೋಗಿ
  • ಲಖನೌ ಕ್ರಿಕೆಟ್ ಕ್ರೀಡಾಂಗಣದಲ್ಲಿ ಅದ್ಧೂರಿ ಪ್ರಮಾಣವನ ಕಾರ್ಯಕ್ರಮ
  • ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಸೇರಿ ಹಲವು ಗಣ್ಯರು ಭಾಗಿ
     
Yogi Adityanath sworn in as uttar pradesh chief minister for second term  at Lucknow ckm

ಲಖನೌ(ಮಾ.25): ಉತ್ತರ ಪ್ರದೇಶದಲ್ಲಿ ದಾಖಲೆಯ 2ನೇ ಅವಧಿಗೆ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈಶ್ವರನ ಹೆಸರಿನಲ್ಲಿ ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.ಅಟಲ್‌ ಬಿಹಾರಿ ವಾಜಪೇಯಿ ಇಕಾನಾ ಸ್ಟೇಡಿಯಂನಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಯುಪಿ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಪ್ರತಿಜ್ಞಾವಿಧಿ ಬೋಧಿಸಿದರು. ಯೋಗಿ ಪ್ರಮಾಣವಚನ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಸಿಎಂ ಬಸವರಾಜ್ ಬೊಮ್ಮಾಯಿ ಸೇರಿದಂತೆ ಬಿಜೆಪಿ ಆಡಳಿತದ ಮುಖ್ಯಮಂತ್ರಿಗಳು ಪಾಲ್ಗೊಂಡಿದ್ದಾರೆ.

ಇನ್ನು ಇಬ್ಬರು ಉಪ ಮುಖ್ಯಮಂತ್ರಿಗಳಾಗಿ ಕೇಶವ್ ಪ್ರಸಾದ್ ಮೌರ್ಯ  ಹಾಗೂ ಬ್ರಜೇಶ್ ಪಾಠಕ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಮೂಲಕ ಈ ಬಾರಿ ಯೋಗಿ ಸಂಪುಟದಲ್ಲಿ ಇಬ್ಬರು ಉಪಮುಖ್ಯಮಂತ್ರಿಗಳು ಕಾರ್ಯನಿರ್ವಹಿಸಲಿದ್ದಾರೆ.

ಮದರಸಾಗಳಲ್ಲಿ ಇನ್ನು ಮುಂದೆ ತರಗತಿಗೂ ಮುನ್ನ ರಾಷ್ಟ್ರಗೀತೆ ಹಾಡುವುದು ಕಡ್ಡಾಯ!

"

ಯೋಗಿ ಜೊತೆ ಸಂಪುಟ ಸೇರಿದ ಸಚಿವರು:

ಯೋಗಿ 2.0 ಸಂಪುಟದಲ್ಲಿ ಅತ್ಯಂತ ಹಿರಿಯ ನಾಯಕನಾಗಿ ಗುರುತಿಸಿಕೊಂಡಿರುವ ಸೂರ್ಯ ಪ್ರತಾಪ್ ಶಾಹಿ ಮಂತ್ರಿಯಾಗಿ ಈಶ್ವರನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ.  
ಸುರೇಶ್ ಕುಮಾರ್ ಖನ್ನಾ ಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ
ಸ್ವತಂತ್ರ ದೇವ್ ಸಿಂಗ್ ಈಶ್ವರನ ಹೆಸರಿನಲ್ಲಿ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ
ಮಹಿಳಾ ನಾಯಕಿ ಬೇಬಿ ರಾಣಿ ಮೌರ್ಯ ಈಶ್ವರನ ಹೆಸರಿನಲ್ಲಿ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ ಲಕ್ಷಿನಾರಾಯಣ ಚೌಧರಿ ಈಶ್ವರನ ಹೆಸರಿನಲ್ಲಿ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಧರ್ಮಪಾಲ್ ಸಿಂಗ್ ಈಶ್ವರನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕಾರ
ನಂದಗೋಪಲ್ ಗುಪ್ತ ನಂದಿ ಈಶ್ವರ ಹೆಸರಿನಲ್ಲಿ ಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ
ಭೂಪೇಂದ್ರ ಸಿಂಗ್ ಚೌಧರಿ ಈಶ್ವರ ಹೆಸರಿನಲ್ಲಿ ಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ
ಅನಿಲ್ ರಾಜ್‌ಬರ್ ಈಶ್ವರ ಹೆಸರಿನಲ್ಲಿ ಮಂತ್ರಿಯಾಗಿ  ಪ್ರಮಾಣವಚನ ಸ್ವೀಕಾರ
ಜಿತಿನ್ ಪ್ರಸಾದ್ ಈಶ್ವರ ಹೆಸರಿನಲ್ಲಿ ಮಂತ್ರಿಯಾಗಿ  ಪ್ರಮಾಣವಚನ ಸ್ವೀಕಾರ
ರಾಕೇಶ ಸಚಾನ್ ಈಶ್ವರ ಹೆಸರಿನಲ್ಲಿ ಮಂತ್ರಿಯಾಗಿ  ಪ್ರಮಾಣವಚನ ಸ್ವೀಕಾರ
ಅರವಿಂದ್ ಕುಮಾರ್ ಶರ್ಮಾ ಈಶ್ವರ ಹೆಸರಿನಲ್ಲಿ ಮಂತ್ರಿಯಾಗಿ  ಪ್ರಮಾಣವಚನ ಸ್ವೀಕಾರ
ಯೋಗೇಂದ್ರ ಉಪಾಧ್ಯಾಯ್ ಈಶ್ವರ ಹೆಸರಿನಲ್ಲಿ ಮಂತ್ರಿಯಾಗಿ  ಪ್ರಮಾಣವಚನ ಸ್ವೀಕಾರ
ಆಶೀಶ್ ಪಟೇಲ್ ಈಶ್ವರ ಹೆಸರಿನಲ್ಲಿ ಮಂತ್ರಿಯಾಗಿ  ಪ್ರಮಾಣವಚನ ಸ್ವೀಕಾರ
ಡಾ. ಸಂಜಯ್ ನಿಶಾದ್ ಈಶ್ವರ ಹೆಸರಿನಲ್ಲಿ ಮಂತ್ರಿಯಾಗಿ  ಪ್ರಮಾಣವಚನ ಸ್ವೀಕಾರ

ರಾಜ್ಯ ಸಚಿವರು (ಸ್ವತಂತ್ರ ಉಸ್ತುವಾರಿ)
ನಿತಿನ್ ಅಗರ್ವಾಲ್ ಈಶ್ವರ ಹೆಸರಿನಲ್ಲಿ ಮಂತ್ರಿಯಾಗಿ  ಪ್ರಮಾಣವಚನ ಸ್ವೀಕಾರ
ಕಪಿಲ್ ದೇವ್ ಅಗರ್ವಾಲ್ ಈಶ್ವರ ಹೆಸರಿನಲ್ಲಿ ಮಂತ್ರಿಯಾಗಿ  ಪ್ರಮಾಣವಚನ ಸ್ವೀಕಾರ
ರವೀಂದ್ರ ಜೈಸ್ವಾಲ್ ಈಶ್ವರ ಹೆಸರಿನಲ್ಲಿ ಮಂತ್ರಿಯಾಗಿ  ಪ್ರಮಾಣವಚನ ಸ್ವೀಕಾರ
ಸಂದೀಪ್ ಸಿಂಗ್ ಈಶ್ವರ ಹೆಸರಿನಲ್ಲಿ ಮಂತ್ರಿಯಾಗಿ  ಪ್ರಮಾಣವಚನ ಸ್ವೀಕಾರ
ಗುಲಾಬ್ ದೇವಿ ಈಶ್ವರ ಹೆಸರಿನಲ್ಲಿ ಮಂತ್ರಿಯಾಗಿ  ಪ್ರಮಾಣವಚನ ಸ್ವೀಕಾರ
ಗಿರೀಶ್ ಚಂದ್ರ ಯಾದವ್ ಈಶ್ವರ ಹೆಸರಿನಲ್ಲಿ ಮಂತ್ರಿಯಾಗಿ  ಪ್ರಮಾಣವಚನ ಸ್ವೀಕಾರ
ಧರ್ಮವೀರ ಪ್ರಜಾಪತಿ ಈಶ್ವರ ಹೆಸರಿನಲ್ಲಿ ಮಂತ್ರಿಯಾಗಿ  ಪ್ರಮಾಣವಚನ ಸ್ವೀಕಾರ
ಅಸೀಮ್ ಅರುಣ್ ಈಶ್ವರ ಹೆಸರಿನಲ್ಲಿ ಮಂತ್ರಿಯಾಗಿ  ಪ್ರಮಾಣವಚನ ಸ್ವೀಕಾರ
ಜೆಪಿಎಸ್ ರಾಥೋಡ್ ಈಶ್ವರ ಹೆಸರಿನಲ್ಲಿ ಮಂತ್ರಿಯಾಗಿ  ಪ್ರಮಾಣವಚನ ಸ್ವೀಕಾರ
ದಯಾಶಂಕರ್ ಸಿಂಗ್ ಈಶ್ವರ ಹೆಸರಿನಲ್ಲಿ ಮಂತ್ರಿಯಾಗಿ  ಪ್ರಮಾಣವಚನ ಸ್ವೀಕಾರ
ನರೇಂದ್ರ ಕಶ್ಯಪ್ ಈಶ್ವರ ಹೆಸರಿನಲ್ಲಿ ಮಂತ್ರಿಯಾಗಿ  ಪ್ರಮಾಣವಚನ ಸ್ವೀಕಾರ
ದಿನೇಶ್ ಪ್ರತಾ ಸಿಂಗ್ ಈಶ್ವರ ಹೆಸರಿನಲ್ಲಿ ಮಂತ್ರಿಯಾಗಿ  ಪ್ರಮಾಣವಚನ ಸ್ವೀಕಾರ
ಅರುಣ್ ಕುಮಾರ್ ಸಕ್ಸೇನಾ ಈಶ್ವರ ಹೆಸರಿನಲ್ಲಿ ಮಂತ್ರಿಯಾಗಿ  ಪ್ರಮಾಣವಚನ ಸ್ವೀಕಾರ
ದಯಾಶಂಕರ್ ಮಿಶ್ರಾ ದಯಾಳು ಈಶ್ವರ ಹೆಸರಿನಲ್ಲಿ ಮಂತ್ರಿಯಾಗಿ  ಪ್ರಮಾಣವಚನ ಸ್ವೀಕಾರ

ಬಿಜೆಪಿ ಆಡಳಿತದ ರಾಜ್ಯಗಳ ಮುಖ್ಯಮಂತ್ರಿಗಳು ಯೋಗಿ ಪ್ರಮಾಣವಚನ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದಾರೆ. ಕೇಂದ್ರದ ಪ್ರಮುಖ ಮಂತ್ರಿಗಳಾದ ರಾಜನಾಥ್ ಸಿಂಗ್, ಸ್ಮೃತಿ ಇರಾನಿ, ವಿಕೆ ಸಿಂಗ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಸೇರಿದಂತೆ ಹಲವು ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದಾರೆ. ಅಟಲ್ ಬಿಹಾರಿ ಎಕಾನಾ ಕ್ರೀಡಾಂಗಣ ಸಂಪೂರ್ಣ ಭರ್ತಿಯಾಗಿದೆ. ಗಣ್ಯರು, ಉತ್ತರ ಪ್ರದೇಶ ಜನರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದಾರೆ.

ಮುಂದಿನ ಲೋಕಸಭಾ ಚುನಾವಣೆಯ ದಿಕ್ಸೂಚಿ ಎಂದೇ ಪರಿಗಣಿತವಾಗಿದ್ದ ಉತ್ತರ ಪ್ರದೇಶದಲ್ಲಿ ಬಿಜೆಪಿ ಅಭೂತಪೂರ್ವ ಜಯಗಳಿಸುವ ಮೂಲಕ ಎರಡನೇ ಬಾರಿಗೆ ಅಧಿಕಾರಕ್ಕೆ ಏರಿಕೆ. ಒಟ್ಟು 403 ಕ್ಷೇತ್ರಗಳ ಪೈಕಿ 273 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸುವ 37 ವರ್ಷಗಳ ರಾಜ್ಯದ ಇತಿಹಾಸದಲ್ಲಿ ಸತತ ಎರಡನೇ ಅವಧಿಗೆ ಅಧಿಕಾರಕ್ಕೆ ಬಂದ ಮೊದಲ ಆಡಳಿತಾರೂಢ ಪಕ್ಷ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಮನೆ ಮುಂದೆ ಪೊಲೀಸರು ಬುಲ್ಡೋಜರ್ ನಿಲ್ಸಿದ್ದೇ ತಡ, ತಲೆಮರೆಸಿಕೊಂಡಿದ್ದ ಅತ್ಯಾಚಾರ ಆರೋಪಿ ಶರಣಾಗತಿ!

ಉತ್ತರಪ್ರದೇಶದ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಯೋಗಿ ಆದಿತ್ಯನಾಥ್‌ ಅವರನ್ನು ಆಯ್ಕೆ ಮಾಡಲಾಗಿತ್ತು. ಗುರುವಾರ(ಮಾ.24) ನಡೆದ ಸಭೆಯಲ್ಲಿ ಯೋಗಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಬಳಿಕ ಯೋಗಿ ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆಯ ಹಕ್ಕು ಮಂಡಿಸಿದ್ದರು.

ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಗೋರಖ್‌ಪುರ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ  ಯೋಗಿ ಆದಿತ್ಯನಾಥ್‌, ವಿಧಾನ ಪರಿಷತ್‌ ಸ್ಥಾನಕ್ಕೆ ಮಾರ್ಚ್ 22 ರಂದು ರಾಜೀನಾಮೆ ಸಲ್ಲಿಸಿದ್ದರು. 2017ರಲ್ಲಿ ಪರಿಷತ್‌ಗೆ ಆಯ್ಕೆಯಾಗಿದ್ದ ಯೋಗಿ ಅವರ ಅವಧಿ 2022ರ ಜು.6ರವರೆಗೂ ಇತ್ತು. ಆದರೆ ಮಾ.25ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಹಿನ್ನೆಲೆಯಲ್ಲಿ ರಾಜೀನಾಮೆ ಸಲ್ಲಿಸಿದ್ದರು.

Latest Videos
Follow Us:
Download App:
  • android
  • ios