ಕೊಯಮತ್ತೂರು(ಜೂ.01): ಇಡೀ ದೇಶ ಕೋವಿಡ್‌ 2ನೇ ಅಲೆಯಲ್ಲಿ ಸಿಕ್ಕು ನರಳುತ್ತಿರುವ ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯಲ್ಲಿರುವ ಜಗ್ಗಿ ವಾಸುದೇವ್‌ ಅವರ ‘ಈಶ ಯೋಗ ಕೇಂದ್ರ’ ತನ್ನ ಶಿಸ್ತುಬದ್ದ ನಡವಳಿಕೆಯಿಂದ ಕೋವಿಡ್‌ ಅನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಅಷ್ಟುಮಾತ್ರವಲ್ಲ ಆಶ್ರಮದ 3000ಕ್ಕೂ ಹೆಚ್ಚು ಸ್ವಯಂ ಸೇವಕರ ಸೇವೆಯ ಪರಿಣಾಮ, ಯೋಗ ಕೇಂದ್ರ ಹಾಗೂ ಸುತ್ತಮುತ್ತಲಿನ 43 ಗ್ರಾಮಗಳ ಅಂದಾಜು 1 ಲಕ್ಷ ಜನರು ಕೋವಿಡ್‌ 2ನೇ ಅಲೆಯ ಭಾರೀ ಪರಿಣಾಮವನ್ನು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ನಿತ್ಯವೂ ವಿಶೇಷ ಯೋಗ ಕ್ರಮ, ಆರ್ಯುವೇದ ಉತ್ಪನ್ನಗಳ ಬಳಕೆ, ಹಿತಮಿತ ಆಹಾರ ಮತ್ತು ಕೋವಿಡ್‌ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಈ 3000 ಸ್ವಯಂಸೇವಕರು ತಮ್ಮನ್ನು ತಾವು ಕೋವಿಡ್‌ನಿಂದ ಕಾಪಾಡಿಕೊಂಡಿದ್ದು ಮಾತ್ರವಲ್ಲದೇ ನೆರೆಹೊರೆಯ ಗ್ರಾಮಗಳನ್ನೂ ಅಪಾಯದಿಂದ ಪಾರು ಮಾಡಿದ್ದಾರೆ.

ಚೀನಾ ಲ್ಯಾಬ್‌ನಲ್ಲೇ ಕೊರೋನಾ ಹುಟ್ಟು, ಅಮೆರಿಕಾದ ಫಂಡಿಂಗ್: ಮೋಸ ಮಾಡಿದ್ದ ಡ್ರ್ಯಾಗನ್!

ಹಾಗಿದ್ದರೆ ಈಶಾ ಯೋಗ ಕೇಂದ್ರ ಕೋವಿಡ್‌ ವೈರಸ್‌ ಅನ್ನು ಹಿಮ್ಮೆಟ್ಟಿದ್ದು ಹೇಗೆ ಎಂಬುದನ್ನು ಹಂತಹಂತವಾಗಿ ಪ್ರತಿಷ್ಠಾನದ ಪ್ರಮುಖರು ಎಳೆಎಳೆಯಾಗಿ ವಿವರಿಸಿದ್ದಾರೆ.

ಯಶಸ್ಸಿನ ಸೂತ್ರವೇನು?:

- ಕಳೆದ 1 ವರ್ಷದಿಂದ ಯೋಗ ಕೇಂದ್ರಕ್ಕೆ ಹೊರಗಿನವರ ಪ್ರವೇಶ ಪೂರ್ಣ ಸ್ಥಗಿತ. ಹೊರಗಿನ ಎಲ್ಲಾ ಚಟುವಟಿಕೆ ನಿಷೇಧ.

- ಯಾರಾದರೂ ಮಾಸ್ಕ್‌ ಧರಿಸಿದೇ ಹೊರಬಂದದ್ದು ಕಂಡುಬಂದರೆ, ತಮ್ಮ ತಪ್ಪಿನ ಮಾಹಿತಿ ಇರುವ ಬೋರ್ಡ್‌ ಹಿಡಿದು 2 ಗಂಟೆ ನಿಲ್ಲಬೇಕು.

ಉದ್ದಿಮೆಗಳಿಗೆ ಆಕ್ಸಿಜನ್‌ ನಿರ್ಬಂಧ 2 ದಿನದಲ್ಲಿ ತೆರವು ಸಾಧ್ಯತೆ!

- ಎಲ್ಲಾ ಸ್ವಯಂಸೇವಕರಿಂದ 3 ನಿಮಿಷಗಳ ಸಿಂಹ ಕ್ರಿಯಾ ಯೋಗ. ಇದರಿಂದ ಶ್ವಾಸಕೋಶದ ಸಾಮರ್ಥ ಹೆಚ್ಚಳ, ರೋಗ ನಿರೋಧಕ ಶಕ್ತಿ ಅಭಿವೃದ್ಧಿ.

- ಸ್ವಚ್ಛ ಆಹಾರ ಸೇವನೆ. ಸಾತ್ವಿಕ ಆಹಾರ ಸೇವನೆ. ಬಹುತೇಕ ದಿನಕ್ಕೆ 2 ಬಾರಿ ಕಚ್ಚಾ ತರಕಾರಿ ಮತ್ತು ಹಣ್ಣು ಸೇವನೆ.

- ಮುಂಜಾನೆ 4.30ಕ್ಕೆ ಬೇವಿನ ಎಲೆ, ಅರಿಶಿನ ಸೇರಿಸಿದ ಬಿಸಿ ನೀರು ಸೇವನೆ. ದಿನಕ್ಕೆ 2 ಬಾರಿ ಖಾಲಿ ಹೊಟ್ಟೆಗೆ ‘ನಿಲವೆಂಬು’ ಎಂಬ ಕಷಾಯ ಸೇವನೆ.

- ಸುತ್ತಮುತ್ತಲ 43 ಗ್ರಾಮಗಳ 90000 ಜನರಿಗೂ ನಿತ್ಯ ಎರಡು ಬಾರಿ ಕಷಾಯ ವಿತರಣೆ. ಕೋವಿಡ್‌ ಮಾರ್ಗಸೂಚಿ ಪಾಲಿಸಲು ನೆರವು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona